Friday, June 21, 2024

ಪ್ರಾಯೋಗಿಕ ಆವೃತ್ತಿ

ಸಂಸದ ಶ್ರೀನಿವಾಸ್ ಪ್ರಸಾದ್ ಆರೋಗ್ಯ ಸ್ಥಿತಿ ಗಂಭೀರ

ಸಂಸದ ಶ್ರೀನಿವಾಸ್ ಪ್ರಸಾದ್ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯ ICU ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಳೆದ ಏ.22ರಂದು ಶ್ರೀನಿವಾಸ್ ಪ್ರಸಾದ್ ಆಸ್ಪತ್ರೆಗೆ ದಾಖಲಾಗಿದ್ದರು.

ಪ್ರಸಾದ್ ಅವರಿಗೆ ಮಧುಮೇಹ ಇರುವುದರಿಂದ ತೀವ್ರ ನಿಗಾ ವಹಿಸುತ್ತಿದ್ದೇವೆ. ಮೂತ್ರಪಿಂಡಗಳ ಸಮಸ್ಯೆ ಇದ್ದು, ಚಿಕಿತ್ಸೆಗೆ ಹೇಗೆ ಸ್ಪಂದಿಸ್ತಾರೆ, ಅಂತ ಕಾದು ನೋಡಬೇಕಿದೆ. ಪ್ರತಿ ಗಂಟೆಗೂ ಆರೋಗ್ಯದಲ್ಲಿ ಬದಲಾವಣೆ ಆಗುತ್ತಿರುತ್ತದೆ ಎಂದು ಡಾ.ಬಲ್ಲಾಳ್ ಮಾಹಿತಿ ನೀಡಿದ್ದಾರೆ.

ಮೈಯಲ್ಲಿ ನೀರು ತುಂಬಿದ್ದು, ಉಸಿರಾಟ ಸಮಸ್ಯೆಯೂ ಸಹ ಇದೆ. ಸೋಮವಾರ ಮತ್ತೆ ಆರೋಗ್ಯದ ಬಗ್ಗೆ ಮಾಹಿತಿ ನೀಡುತ್ತೇವೆ ಎಂದು ಆಸ್ಪತ್ರೆಯ ಚೇರ್ಮನ್ ಡಾ.ಸುದರ್ಶನ್ ಬಲ್ಲಾಳ್ ತಿಳಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!