ಸೆ.28 ರಿಂದ 5 ದಿನಗಳ ಕಾಲ ಶ್ರೀರಂಗಪಟ್ಟಣ ದಸರಾ ಉತ್ಸವ ನಡೆಯಲಿರುವ ಹಿನ್ನೆಲೆಯಲ್ಲಿ ಗುರುವಾರ ಬನ್ನಿಮಂಟಪದ ದುರಸ್ತಿ ಕಾರ್ಯ ಭರದಿಂದ ನಡೆಯಿತು.
ಬನ್ನಿಮಂಟಪದ ಒಳಭಾಗದಲ್ಲಿ ಕಿತ್ತು ಹೋಗಿದ್ದ ಪ್ರದೇಶವನ್ನು ಗಾರೆ ಹಾಕಿ ಮುಚ್ಚಲಾಯಿತು. ಮೇಲ್ಬಾಗದಲ್ಲಿ ಚುರುಕಿ ಗಾರೆ ಹಾಕಿಲಾಯಿತು.
ಹಾಗೆಯೇ ಬನ್ನಿಮಂಟಪದ ಮುಂಭಾಗದಲ್ಲಿದ್ದ ಗುಂಡಿಗಳಿಗೆ ಮಣ್ಣು ಹಾಕಿ ಸಮತಟ್ಟು ಮಾಡಲಾಯಿತು. ಗೋಡೆಗಳಿಗೆ ಸುಣ್ಣ -ಬಣ್ಣ ಬಳಿಯುವ ಕಾರ್ಯ ಭರದಿಂದ ಸಾಗುತ್ತಿದ್ದು, ದಸರಾ ವೇಳೆಗೆ ಸಕಲ ಸಿದ್ಧತೆಗಳನ್ನು ಪೂರ್ಣಗೊಳಿಸುವ ಜವಾಬ್ದಾರಿ ಹೊತ್ತಿರುವ ತಾಲ್ಲೂಕಿನ ಅಧಿಕಾರಿಗಳು ದುರಸ್ತಿ ಕೆಲಸಗಳನ್ನು ಅಚ್ಚುಕಟ್ಟಾಗಿ ಮಾಡಿಸುತ್ತಿದ್ದಾರೆ.




