Sunday, November 22, 2026

ಪ್ರಾಯೋಗಿಕ ಆವೃತ್ತಿ

ಶ್ರೀರಂಗಪಟ್ಟಣ | ಶ್ರೀ ಗದ್ದೇ ರಂಗನಾಥಸ್ವಾಮಿ ವಿಗ್ರಹ ಬೀದಿಗೆ

ಬೆಂ‌-ಮೈ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಬೇಜವಾಬ್ದಾರಿಯಿಂದ ದೇವರು ಬೀದಿಗೆ ಬಿದ್ದಿರುವ ಘಟನೆ ಶ್ರೀರಂಗಪಟ್ಟಣದಲ್ಲಿ ಬೆಳಕಿಗೆ ಬಂದಿದೆ.

ಹೆದ್ದಾರಿ ನಿರ್ಮಾಣದ ವೇಳೆ ಪಟ್ಟಣದ ಬೈಪಾಸ್’ನ ಗದ್ದೆ ಬಯಲಿನಲ್ಲಿದ್ದ ಶ್ರೀ ಗದ್ದೇರಂಗನಾಥಸ್ವಾಮಿ ವಿಗ್ರಹದ ಸ್ಥಿತಿ ಹೇಳತೀರದಾಗಿದೆ.

ಹೆದ್ದಾರಿ ಭೂಸ್ವಾಧೀನ ವೇಳೆ ದೇವಾಲಯ ಗೆಡವಲು ಮುಂದಾದಾಗ ತಾಲ್ಲೂಕು ಆಡಳಿತ ಹಾಗೂ ಸ್ಥಳೀಯ ವಿಪ್ರರಾದ ಡಾ.ಭಾನುಪ್ರಕಾಶ್ ಶರ್ಮಾ ಅವರ ನೇತೃತ್ವದಲ್ಲಿ ‌ಸಮಿತಿ ರಚಿಸಲಾಗಿದೆ.

ದೇವಾಲಯ ನಿರ್ಮಾಣ ಸಂಬಂಧ 45 ಲಕ್ಷ ರೂ. ಮಂಜೂರಾಗಿದೆ ಎಂದು ತಿಳಿದು ಬಂದಿದೆ.
ಹೈವೇ ಪ್ರಾಧಿಕಾರದ ವತಿಯಿಂದ ಗುತ್ತಿಗೆದಾರರ ನೇಮಿಸಿ ನೂತನ ದೇವಾಲಯ ನಿರ್ಮಾಣಕ್ಕೆ ಚಾಲನೆ‌ ನೀಡಿದರಾದರೂ ಕಾಮಗಾರಿ ವೇಗ ಪಡೆದಿಲ್ಲ. ಪರಿಣಾಮ ಬಯಲಿನಲ್ಲಿರುವ ಗದ್ದೇ ರಂಗನಾಥಸ್ವಾಮಿ ವಿಗ್ರಹ ಅನಾಥವಾಗಿ ಬಿದ್ದಿದೆ. ಅಲ್ಲದೆ ಕಾಮಗಾರಿ ಮುಂದುವರಿಯುವ ಲಕ್ಷಣಗಳು‌‌ ಗೋಚರಿಸುತ್ತಿಲ್ಲ.

ಈ ಕುರಿತು ಪ್ರತಿಕ್ರಿಯಿಸಿರುವ ಡಾ.ಭಾನುಪ್ರಕಾಶ್ ಶರ್ಮಾ ಅವರು, ಸಮ್ಮೋಹನ ಶೈಲಿಯಲ್ಲಿರುವ ವಿಗ್ರಹವನ್ನು ಉಬ್ಬು ಶಿಲೆಯಲ್ಲಿ‌ ಕೆತ್ತಲಾಗಿದೆ. ಸದರಿ ಸ್ಥಳ ಪುರಾತನವಾಗಿದ್ದು ಸ್ಥಳಾಂತರ ಮಾಡಲಾಗಿದೆ.ದೇವಾಲಯ ನಿರ್ಮಾಣ ಕಾರ್ಯಗತಗೊಳಿಸಬೇಕಾಗಿದೆ. ಗದ್ದೆ ರಂಗನಾಥನಿಗೆ ಭರವಸೆ ಕೊಟ್ಟು ನಿರ್ಲಕ್ಷ್ಯ ತೋರುವ ಅಧಿಕಾರಿಗಳಿಗೆ ದೇವರ ಶಾಪ ತಟ್ಟಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಅಧಿಕಾರಿಗಳ ನಿರ್ಲಕ್ಷ್ಯದಿಂದ ಅರಂಭದಲ್ಲೇ ದೇವಾಲಯ ನಿರ್ಮಾಣ ನಿಂತು ವಿಗ್ರಹ ಬಿಸಿಲಿನಲ್ಲೇ ಒಣಗುತ್ತಿದೆ. ಶೀಘ್ರವಾಗಿ ದೇವಾಲಯ ನಿರ್ಮಾಣ ಪೂರ್ಣಗೊಳಿಸದಿದ್ದಲ್ಲಿ ಹೆದ್ದಾರಿ ತಡೆದು ಪ್ರತಿಭಟಿಸಲಾಗುವುದು ಎಂದು ಮಂಡ್ಯ ರಕ್ಷಣಾ ವೇದಿಕೆಯ ಅಧ್ಯಕ್ಷ ಬಿ.ಶಂಕರ್ ಬಾಬು ತಿಳಿಸಿದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ