Friday, October 18, 2024

ಪ್ರಾಯೋಗಿಕ ಆವೃತ್ತಿ

ಮದ್ಯಪಾನ ಮುಕ್ತರಾಗಿ ನೆಮ್ಮದಿಯ ಜೀವನ ನಡೆಸಿ: ಚಲುವರಾಯಸ್ವಾಮಿ

ಒಂದು ಕುಟುಂಬದಲ್ಲಿ ಹಲವು ಜನರು ಮದ್ಯಪಾನ ಮಾಡುವುದರಿಂದ ಸಂಸಾರ ಆಳಗುತ್ತಿರುವುದನ್ನ ನಾವು ನೋಡುತ್ತಾ ಇದ್ದೇವೆ. ಇಂತಹ ಚಟಗಳಿಂದ ದೂರವಿದ್ದು ಎಲ್ಲರೂ ನೆಮ್ಮದಿಯ ಜೀವನ ನಡೆಸಬೇಕೆಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.

ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಬಿ. ಸಿ ಟ್ರಸ್ಟ್ ಹಾಗೂ ಅಖಿಲ ಕರ್ನಾಟಕ ಜಿಲ್ಲಾ ಜನಜಾಗೃತಿ ವೇದಿಕೆ ವತಿಯಿಂದ ನಾಗಮಂಗಲದಲ್ಲಿ ನಡೆದ ಗಾಂಧೀಸ್ಮೃತಿ ಮತ್ತು ಪಾನಮುಕ್ತ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ಸಾರ್ವಜನಿಕ ಅಭಿವೃದ್ಧಿಗೇ  ಪೂರಕ ಕೆಲಸ ಕಾರ್ಯವೈಖರಿಗಳನ್ನ ಧರ್ಮಸ್ಥಳ ಸಂಸ್ಥೆ ರಾಜ್ಯಾದ್ಯಂತ ಮಾಡುತ್ತ ಬಂದಿದೆ. ಈ ಸಂಸ್ಥೆಗೆ ಕೇಂದ್ರ ಮತ್ತು ರಾಜ್ಯಸರ್ಕಾರ ಸಹಕಾರವನ್ನ ನೀಡುತ್ತಾ ಬಂದಿದೆ. ಇಂತಹ  ಅತ್ಯುತ್ತಮ ವಾದ ಕೆಲಸಗಳನ್ನ ಸಂಸ್ಥೆ ನಿರಂತರವಾಗಿ  ಮಾಡುತ್ತ ಬಂದಿದೆ. ನಾನು ಅಧಿಕಾರಕ್ಕೆ ಬಂದ ಮೇಲೆ ಕೃಷಿಗೆ ಬೇಕಾದ ತಂತ್ರಜ್ಞಾನ ಪರಿಚಯಿಸುವ ಮೂಲಕ ರೈತರಿಗೆ ಅನುಕೂಲ ಮಾಡಿಕೊಟ್ಟಿದ್ದೇನೆ, ಪರಿಶಿಷ್ಟ ಜಾತಿ ಪಂಗಡದವರಿಗೆ 50 ಲಕ್ಷ  ಸಾಮಾನ್ಯ ವರ್ಗದವರಿಗೆ 40 ಲಕ್ಷ ಸಬ್ಸಿಡಿ ಸಹಿತ ಯಂತ್ರೋಪಕರಣ ಖರೀದಿ ಮಾಡಲು ಅವಕಾಶ ಕಲ್ಪಿಸಿದ್ದೇವೆ. ಅದನ್ನ ಬಳಸಿಕೊಳ್ಳುವಂತೆ ತಿಳಿಸಿದರು.

ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿನ್ಸೆoಟ್ ಪಾಯಸ್ ಮಾತನಾಡಿ,  ಪಾನಮುಕ್ತ ಕಾರ್ಯಕ್ರಮಗಳನ್ನ ರಾಜ್ಯದೆಲ್ಲೆಡೆ ಮಾಡುತ್ತ ಬಂದಿದ್ದೇವೆ. ಹಸುಗೂಸಿನಿಂದ ಹಿಡಿದು ವಯೋವೃದ್ಧರವರೆಗೂ ಕೂಡ ಗಾಂಧೀಜಿಯವರ ಹೆಸರು ಅವರ ಉಸಿರಲ್ಲೇ ಇದೇ ಎಂದರು. ಕೋಣನೂರು ಹನುಮಂತಯ್ಯ ಅಧ್ಯಕ್ಷತೆ ವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!