ದೇಶದಲ್ಲಿಯೇ ಸಂಸದರ ನಿಧಿ ಬಳಕೆಯಲ್ಲಿ ಸ್ವಾಭಿಮಾನಿ ಸಂಸದೆ ಸುಮಲತಾ ಅಂಬರೀಶ್ 2ನೇ ಸ್ಥಾನದಲ್ಲಿದ್ದಾರೆ ಎಂದು ಅಖಿಲ ಕರ್ನಾಟಕ ಅಂಬರೀಶ್ ಅಭಿಮಾನಿಗಳ ಸಂಘದ ರಾಜ್ಯಾಧ್ಯಕ್ಷ ಬೇಲೂರು ಸೋಮಶೇಖರ್ ಹೇಳಿದರು.
ಮಂಡ್ಯ ನಗರದಲ್ಲಿರುವ ಜಿಲ್ಲಾಸ್ಪತ್ರೆಯ ಹೆರಿಗೆವಾರ್ಡ್ ಬಳಿಯ ಮಮತೆಯ ಮಡಿಲು ನಿತ್ಯದಾಸೋಹ ಕೇಂದ್ರದಲ್ಲಿ ಅಖಿಲ ಕರ್ನಾಟಕ ಅಂಬರೀಶ್ ಅಭಿಮಾನಿಗಳ ಸಂಘ, ಸ್ವಾಭಿಮಾನಿ ಪಡೆ, ಸುಮಲತಾ ಅಂಬರೀಶ್ ಅಭಿಮಾನಿಗಳ ಬಳಗ, ಭಾರತೀಯ ರೆಡ್ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆ ಆಯೋಜಿಸಿದ್ದ ಸಂಸದೆ ಸುಮಲತಾ ಅಂಬರೀಶ್ ಜನ್ಮದಿನ ಪ್ರಯುಕ್ತ ಆಸ್ಪತ್ರೆಯ ಪೌರಕಾರ್ಮಿಕರಿಗೆ ಅಭಿನಂದನೆ- ಆರೋಗ್ಯಕಿಟ್-ಮಾಸ್ಕ್ ಮತ್ತು ಗರ್ಭಿಣಿ-ಬಾಣಂತಿಯರಿಗೆ-ಪೋಷಕರಿಗೆ-
ಜಿಲ್ಲೆಯ ಸಂಸದರಾದ ಸುಮಲತಾ ಅಂಬರೀಶ್ ಅವರು ತಮ್ಮ ಅವಧಿಯಲ್ಲಿನ ಸಮಗ್ರ ಸಂಸದರ ನಿಧಿಯನ್ನು ಸಂಪೂರ್ಣವಾಗಿ ವಿವಿಧ ಅಭಿವೃದ್ದಿ ಕಾರ್ಯಗಳಿಗೆ ಬಳಕೆ ಮಾಡಿ, ದೇಶದಲ್ಲಿಯೇ 2ನೇ ಸ್ಥಾನ ಪಡೆದ ಗೌರವಕ್ಕೆ ಪಾತ್ರರಾಗಿದ್ದಾರೆ, ಜಿಲ್ಲೆಗೆ ಹೆಮ್ಮೆ ತರುವ ಸಾಧನೆಗಳನ್ನು ಮಾಡುವಲ್ಲಿ ಸಫಲತೆ ಕಾಣುತ್ತಿದ್ದಾರೆ ಎಂದು ನುಡಿದರು.
ಕೋವಿಡ್-19ರ ದಿನಗಳಲ್ಲಿ ಸಂಸದರ ನಿಧಿಯಲ್ಲಿ ಜಿಲ್ಲಾಸ್ಪತ್ರೆಗೆ ನೆರವು, ವಿವಿಧ ಸೇವಾ ಕಾರ್ಯಗಳು, ವಿಕಲಚೇತನರಿಗೆ ತ್ರಿಚಕ್ರ ಯಂತ್ರಚಾಲಿತ ವಾಹನಗಳ ವಿತರಣೆ, ಮೈಷುಗರ್, ಪಿ.ಎಸ್.ಎಸ್.ಕೆ.ಆರಂಭಕ್ಕೆ ಕೇಂದ್ರ ಸರ್ಕಾರದೊಂದಿಗೆ ಸಮಗ್ರ ಚರ್ಚೆ ನಡೆಸಿರುವುದನ್ನು ಸ್ಮರಿಸಿದರು.
ಜಿಲ್ಲೆಯ ಅಭಿವೃದ್ದಿಗೆ ಸಂಸದ್ ಸದನದಲ್ಲಿ ಯೋಜನೆಗಳ ಬಗ್ಗೆ ಪ್ರಸ್ತಾವನೆ ಸಲ್ಲಿಕೆ, ವಿವಿಧ ಕೇಂದ್ರ ಸಚಿವರುಗಳನ್ನು ಭೇಟಿ ಮಾಡಿ ಜಿಲ್ಲಾಭಿವೃದ್ದಿಗೆ ಅನುದಾನ ಬಿಡುಗಡೆಗೆ ಮನವಿ ಮಾಡಿರುವುದು ಉತ್ತಮ ಪರಿಣಾಮ ಬೀರುತ್ತಿದೆ ಎಂದು ಹೇಳಿದರು.
ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಿಂದ 280ಕೋಟಿ ರೂ. ಅನುದಾನವನ್ನು ತಂದು ವಿವಿಧ ಗ್ರಾಮಗಳ ಅಭಿವೃದ್ದಿಗೆ ಬಳಕೆ ಮಾಡಿಲಾಗಿದೆ, ದಿಶಾ ಸಭೆಗಳನ್ನು ಸಮಗ್ರವಾಗಿ ಮಾಡಿದ ಕೀರ್ತಿ ಸಂಸದರಿಗೆ ಸಲ್ಲುತ್ತದೆ, ಜಿಲ್ಲೆಯಲ್ಲಿ ಕೇಂದ್ರೀಯ ವಿದ್ಯಾಲಯ ಕಟ್ಟಡ, ತಾಯಿ ಮಕ್ಕಳ ಆಸ್ಪತ್ರೆ, ಕ್ಯಾನ್ಸರ್ ಆಸ್ಪತ್ರೆ ಕಟ್ಟಗಳ ನಿರ್ಮಾಣಕ್ಕೆ ಅನುದಾನ ಕೊಡಿಸಿ, ವಿವಿಧ ಸೇವಾಕಾರ್ಯಗಳಿಗೆ ಸಂಸದರ ನಿಧಿಯನ್ನು ನೀಡಿದ್ದಾರೆ ಎಂಬುದನ್ನು ತಿಳಿಸಿದರು.
ಕಾರ್ಯಕ್ರಮದಲ್ಲಿ ಸ್ವಾಭಿಮಾನಿ ಪಡೆಯ ಮುಖ್ಯಸ್ಥ ಶಶಿ ಹನಕೆರೆ, ಹಾಲಹಳ್ಳಿ ಅರವಿಂದ್, ಭಾರತೀಯ ರೆಡ್ಕ್ರಾಸ್ ಸಂಸ್ಥೆಯ ಜಂಟಿ ಕಾರ್ಯದರ್ಶಿ ರಂಗಸ್ವಾಮಿ, ಮಮತೆಯ ಮಡಿಲು ನಿತ್ಯದಾಸೋಹ ಕೇಂದ್ರದ ಮಂಗಲ ಯೋಗೇಶ್, ರಾಜ್ಯ ಯುವ ಪ್ರಶಸ್ತಿ ಪುರಸ್ಕೃತೆ ಅರುಣಕುಮಾರಿ ಮತ್ತಿತರರಿದ್ದರು.




