ಮಂಡ್ಯದಲ್ಲಿ ಹಾಲಿ ಸಂಸದೆ ಸುಮಲತಾ ಬೆಂಬಲ ನೀಡುತ್ತಿಲ್ಲ ಎಂದು ಜೆಡಿಎಸ್ ರಾಷ್ಟ್ರಾಧ್ಯಕ್ಷ ಹೆಚ್.ಡಿ.ದೇವೇಗೌಡ ಹೇಳಿಕೆ ನೀಡಿದ್ದು, ಇದರ ಹಿನ್ನಲೆಯಲ್ಲಿ ಲೋಕಸಭಾ ಚುನಾವಣೆಗೂ ಮುನ್ನವೇ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಡಿವೋರ್ಸ್ ಹಂತಕ್ಕೆ ಬಂದಿರುವಂತಿದೆ ಎಂದು ಕಾಂಗ್ರೆಸ್ ಪಕ್ಷವು ವ್ಯಂಗ್ಯವಾಡಿದೆ.
ಒತ್ತಾಯದ ಮದುವೆ, ಒಲ್ಲದ ಸಂಸಾರದ ಆಯಸ್ಸು ಕಡಿಮೆ ಎನ್ನುವ ಸಂಗತಿ ಎರಡೂ ಪಕ್ಷಗಳಿಗೆ ಅರ್ಥವಾದಂತಿದೆ! ಹಾಸನದಲ್ಲಿ ಬಿಜೆಪಿಯ ಪ್ರೀತಮ್ ಗೌಡ ಶತಾಯಗತಾಯ ಜೆಡಿಎಸ್ ಗೆಲ್ಲಬಾರದು ಎಂದು ತೊಡೆ ತಟ್ಟಿದ್ದಾರಂತೆ, ಮಂಡ್ಯದಲ್ಲಿ ಸುಮಲತಾ ದೂರದೂರವಂತೆ! ಕೋಲಾರದಲ್ಲಿ ಬಿಜೆಪಿ ಕಾರ್ಯಕರ್ತರು ಮನೆ ಸೇರಿದ್ದಾರಂತೆ ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ.
ಚುನಾವಣೆಗೂ ಮುನ್ನವೇ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಡಿವೋರ್ಸ್ ಹಂತಕ್ಕೆ ಬಂದಿರುವಂತಿದೆ.
ಒತ್ತಾಯದ ಮದುವೆ, ಒಲ್ಲದ ಸಂಸಾರದ ಆಯಸ್ಸು ಕಡಿಮೆ ಎನ್ನುವ ಸಂಗತಿ ಎರಡೂ ಪಕ್ಷಗಳಿಗೆ ಅರ್ಥವಾದಂತಿದೆ!ಹಾಸನದಲ್ಲಿ ಬಿಜೆಪಿಯ ಪ್ರೀತಮ್ ಗೌಡ ಶತಾಯಗತಾಯ ಜೆಡಿಎಸ್ ಗೆಲ್ಲಬಾರದು ಎಂದು ತೊಡೆ ತಟ್ಟಿದ್ದಾರಂತೆ, ಮಂಡ್ಯದಲ್ಲಿ ಸುಮಲತಾ ದೂರದೂರವಂತೆ!… pic.twitter.com/OoM6lGBvTF
— Karnataka Congress (@INCKarnataka) April 25, 2024
ಜೆಡಿಎಸ್ ಪಕ್ಷಕ್ಕೆ ಬಿಜೆಪಿಯ ಅಪಾಯಕಾರಿ ಸಾಂಗತ್ಯದ ಅರಿವಾಗುವುದರ ಒಳಗಾಗಿ ಕಾಲ ಮಿಂಚಿದೆ, ನಂಬಿಸಿ ಕತ್ತು ಕೊಯ್ಯುವ ಬಿಜೆಪಿಯ ಸಖ್ಯ ಜೆಡಿಎಸ್ ಪಕ್ಷವನ್ನು ಮುಳುಗಿಸಲಿದೆ. ದೇವೇಗೌಡರ ಮಾತುಗಳೇ ಇದಕ್ಕೆ ಸಾಕ್ಷಿ ಹೇಳುತ್ತಿವೆ ಎಂದು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಕಾಂಗ್ರೆಸ್ ಪೋಸ್ಟ್ ಮಾಡಿದೆ.
ಗೌರವದಿಂದ ಮಂಗಳಸೂತ್ರ ತೊಟ್ಟಿರುವ ಹೆಣ್ಣು ಮಕ್ಕಳ ಮಾನ ಮರ್ಯಾದೆ ಹರಾಜು ಮಾಡಿದ್ದು ಯಾರು ಎಂದು ಕಣ್ಬಿಟ್ಟು ನೋಡಿ ಮೋದಿಯವರೇ… ಹಾಸನ ಮೂಲದ ನಿಮ್ಮ NDA ಕೂಟದ ಸಂಸದನಲ್ಲವೇ..? ಇದು ಮಹಿಳೆಯರ ಮಂಗಳ ಸೂತ್ರದ ಪಾವಿತ್ರ್ಯತೆಗೆ ಕುತ್ತು ತಂದಿದ್ದು ಎಂದು ನಿಮಗೆ ಅನಿಸುವುದಿಲ್ಲವೇ? ನಿಮಗೆ ಮಹಿಳೆಯರ ಘನತೆ, ಮಂಗಳಸೂತ್ರದ ಪಾವಿತ್ರ್ಯತೆಯ ಬಗ್ಗೆ ನೈಜ ಕಾಳಜಿ ಇದ್ದಿದ್ದೇ ಆದರೆ ನಿಮ್ಮ ಮೈತ್ರಿಕೂಟದ ಕರ್ಮಕಾಂಡದ ಬಗ್ಗೆ ಕ್ಷಮೆ ಕೇಳಿ.. ಎಂದು ಕಾಂಗ್ರೆಸ್ ಆಗ್ರಹಿಸಿದೆ.




