Saturday, November 21, 2026

ಪ್ರಾಯೋಗಿಕ ಆವೃತ್ತಿ

ಕರ್ನಾಟಕ ಬಂದ್ ಗೆ ಕನ್ನಡ ಸೇನೆ ಸಂಪೂರ್ಣ ಬೆಂಬಲ : ಮಂಜುನಾಥ್

ಮರಾಠಿಗರ ಪುಂಡಾಟಿಕೆ, ಮರಾಠಿಗರ ಅಟ್ಟಹಾಸ ಎಂ.ಇ.ಎಸ್.ನಿಷೇಧ ಮಾಡಬೇಕು, ಬೆಂಗಳೂರಿಗೆ ಕುಡಿಯುವ ನೀರಿಗಾಗಿ 6ನೇ ಹಂತದ ಯೋಜನೆ ಮಾಡಬಾರದು, ಮೇಕೆದಾಟು ಯೋಜನೆ, ಕಳಸ ಬಂಡೂರಿ ಮಹಾದಾಯಿ ಯೋಜನೆಗೆ ಅನುಮತಿ ನೀಡುವಂತೆ ಆಗ್ರಹಿಸಿ ಕನ್ನಡ ಪರ ಸಂಘಟನೆಗಳು ನೀಡಿರುವ ಮಾ. 22ರ ಕರ್ನಾಟಕ ಬಂದ್ ಗೆ ಕನ್ನಡ ಸೇನೆ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಮಂಡ್ಯ ಜಿಲ್ಲಾಧ್ಯಕ್ಷ ಮಂಜುನಾಥ್ ಮನವಿ ಮಾಡಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮರಾಠಿಗರ ಎಂ.ಇ.ಎಸ್. ಸಂಘಟನೆಯವರು ಕರ್ನಾಟಕದ ಮೇಲೆ ಪದೇ ಪದೇ ಹಲ್ಲೆ ಮಾಡುತ್ತಿದ್ದಾರೆ. ಕರ್ನಾಟಕ ರಾಜ್ಯದಲ್ಲಿ ಎಂ.ಇ.ಎಸ್. ಸಂಘಟನೆಯನ್ನು ನಿಷೇಧಿಸಬೇಕು. ಕಾವೇರಿ ಕೊಳ್ಳದ ಜನರೇ ಕಾವೇರಿ ನೀರಿಗಾಗಿ ಮತ್ತು ಬೆಳೆಗಳ ರಕ್ಷಣೆಗಾಗಿ ಅಲೆದಾಡುತ್ತಿರುವಾಗ ಬೃಹತ್ ಬೆಂಗಳೂರು ಮಹಾನಗರ ಜನರಿಗೆ ಕುಡಿಯುವ ನೀರಿನ ಹೆಸರಿನಲ್ಲಿ 6ನೇ ಹಂತದ ಯೋಜನೆಯನ್ನು ಪ್ರಾರಂಭಿಸಲು ಹಣ ಬಿಡುಗಡೆ ಮಾಡಿರುವುದು ಖಂಡನೀಯ ಇದನ್ನು ತಡೆಹಿಡಿಯಬೇಕೆಂದು ಆಗ್ರಹಿಸಿದರು.

6ನೇ ಹಂತದ ಯೋಜನೆಯನ್ನು ಪ್ರಾರಂಭಿಸಿದರೆ ಒಂದು ಬೆಳೆಗೆ ಆಗುವಷ್ಟು ನೀರನ್ನು ಆ ಯೋಜನೆ ಪಡೆಯುತ್ತದೆ. ಈಗಾಗಲೇ ಬರಪೀಡಿತ ಪ್ರದೇಶದಂತಿರುವ ಮಂಡ್ಯ ಜಿಲ್ಲೆಯ ರೈತರ ಬದುಕು ಬೀದಿಗೆ ಬರುತ್ತದೆ. ಯಾವುದೇ ಕಾರಣಕ್ಕೂ ರಾಜ್ಯ ಸರ್ಕಾರ ಈ ಯೋಜನೆಯನ್ನು ಕೈಗೊಳ್ಳಬಾರದೆಂದು ಆಗ್ರಹಿಸಿದರು.

ಕರ್ನಾಟಕ ಬಂದ್‌ಗೆ ಮಂಡ್ಯ ಜಿಲ್ಲೆಯ ಎಲ್ಲಾ ಸಮಗ್ರ ಜನತೆ ಮತ್ತು ನಾಗರೀಕರು, ವರ್ತಕರು, ಬೇಕರಿ ಮಾಲೀಕರು, ಬೀದಿ ವ್ಯಾಪಾರಿಗಳು, ಗೂಡ್ಸ್ ಆಟೋ ಮತ್ತು ಲಾರಿ ಮಾಲೀಕರು, ಆಟೋ ಚಾಲಕರು, ಚಿನ್ನ ಮತ್ತು ಬೆಳ್ಳಿ ವರ್ತಕರು, ಎಲ್ಲಾ ಪಕ್ಷದ ನಾಯಕರು, ಎಲ್ಲಾ ಸಂಘಟನೆಯ ನಾಯಕರು ಬೆಂಬಲ ನೀಡಬೇಕೆಂದು ಮನವಿ ಮಾಡಿದರು.

ಬೇಡಿಕೆಗಳೇನು ? 

  • 1. ಎಂ.ಇ.ಎಸ್. ಸಂಘಟನೆ ನಿಷೇಧಿಸಬೇಕು
  • 2. ಶಿವಸೇನೆ ಮತ್ತು ಎಂ.ಇ.ಎಸ್. ಪುಂಡರನ್ನು ಗಡಿಪಾರು ಮಾಡಬೇಕು
  • 3. ಬೆಳಗಾವಿಯನ್ನು ಉಳಿಸಬೇಕು
  • 4. ಡಾ. ಸರೋಜಿನಿ ಮಹಿಷಿ ವರದಿ ಜಾರಿಯಾಗಬೇಕು
  • 5. ಮೇಕೆದಾಟು ಯೋಜನೆ ಪ್ರಾರಂಭ ಮಾಡಬೇಕು
  • 6. ಮಹದಾಯಿ ಕಳಸ ಬಂಡೂರಿ ಕಾರ್ಯಗರ್ತವಾಗಬೇಕು
  • 7. ಬೆಂಗಳೂರಿನ ಕುಡಿಯುವ ನೀರಿನ 6ನೇ ಹಂತದ ಯೋಜನೆಯನ್ನು ಕೈಬಿಡಬೇಕು
  • 8. ಕಂಡಕ್ಟ‌ರ್ ಮೇಲೆ ಹಲ್ಲೆ ಮಾಡಿದವರಿಗೆ ಕಠಿಣ ಶಿಕ್ಷೆಯಾಗಬೇಕು.
  • 9. ಶಂಬಾಜಿ ಪ್ರತಿಮೆಯನ್ನು ತೆಗೆಯಬೇಕು
  • 10. ಕರ್ನಾಟಕದಲ್ಲಿ ಪರಭಾಷೆ ದಬ್ಬಾಳಿಕೆ ನಿಲ್ಲಿಸಬೇಕು
  • 11. ಕರ್ನಾಟಕದಲ್ಲಿ ಪರಭಾಷೆ ಚಿತ್ರಗಳ ಬಹಿಷ್ಕರಿಸಬೇಕು
  • 12. ಹಿಂದಿ ಬೇಡವೇ ಬೇಡ
  • 13. ಮಹಾರಾಷ್ಟ್ರದಲ್ಲಿ ಕನ್ನಡ ಮಹಿಮಹಿಮರ ಪ್ರತಿಮೆ ಸ್ಥಾಪಿಸಬೇಕು.
  • 14. ಕೇಂದ್ರ ಸರ್ಕಾರದ ಮಲತಾಯಿ ಧೋರಣೆ ನಿಲ್ಲಬೇಕು 
  • 15. ಕೇಂದ್ರ ಸರ್ಕಾರದ ಆಯವ್ಯಯ ಮಂಡನೆಯಲ್ಲಿ ಕಡೆಗಣನೆ ನಿಲ್ಲಬೇಕು
  • 16. ಕನ್ನಡಿಗರಿಗೆ ಉದ್ಯೋಗ ಕಲ್ಪಿಸಬೇಕು
  • 17. ಇಡೀ ರಾಜ್ಯದ ಗಡಿನಾಡುಗಳು ಬೆಳವಣಿಗೆಯಾಗಬೇಕು

ಗೋಷ್ಠಿಯಲ್ಲಿ ಮಹಿಳಾ ಅಧ್ಯಕ್ಷರಾದ ಸೌಭಾಗ್ಯ. ಕಾರ್ಯಾಧ್ಯಕ್ಷ ಮಂಡಿ ಬೆಟ್ಟಳ್ಳಿ ಮಂಜುನಾಥ್, ಸಂಚಾಲಕ ಜಿ ಮಹಾಂತಪ್ಪ, ಜಿಲ್ಲಾ ಸಂಘಟನೆ ಕಾರ್ಯದರ್ಶಿ ಪವಿತ್ರ, ಕಮ್ಮನಾಯಕನಹಳ್ಳಿ ಮಂಜು, ನಗರಾಧ್ಯಕ್ಷ ಶಿವಾಲಿ, ಹೊಳಲು ವೇಣುಗೋಪಾಲ್, ಆಟೋ ಚಾಲಕರ ಜಿಲ್ಲಾಧ್ಯಕ್ಷ ಶಿವಕುಮಾರ್ ಹಾಗೂ ಉಪಾಧ್ಯಕ್ಷ ಪ್ರಸನ್ನ ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ