ಮಂಡ್ಯದ ಮಾಂಡವ್ಯ ಹಿರಿಯ ಪ್ರಾಥಮಿಕ ಶಾಲೆ (ಆಂಗ್ಲ ಮಾಧ್ಯಮ), ವಿ.ವಿ.ನಗರ, ಕಲ್ಲಹಳ್ಳಿಯ 5ನೇ ತರಗತಿ ವಿದ್ಯಾರ್ಥಿ ಮೋಹಿತ್ ಪಿ ಶೆಟ್ಟಿ ಅವರು, ಜೂನ್ 29, 2025 ರಂದು ಮೈಸೂರು ವಿಜಯನಗರ 4ನೇ ಹಂತದ ಬೋಗಾದಿ ರಸ್ತೆಯಲ್ಲಿರುವ ಮಾರ್ಲಿನ್ ಅಕ್ವಾಟಿಕ್ ಸೆಂಟರ್ನಲ್ಲಿ ನಡೆದ ರಾಜ್ಯ ಮಟ್ಟದ ನಾನ್ ಮೆಡಲಿಸ್ಟ್ ಇನ್ವಿಟೇಶನಲ್ ಈಜು ಸ್ಪರ್ಧೆಯಲ್ಲಿ ಶ್ಲಾಘನೀಯ ಸಾಧನೆ ಮಾಡಿದ್ದಾರೆ.
ಅವರು 50 ಮೀಟರ್ ಬಟರ್ಫ್ಲೈ ಈಜಿನಲ್ಲಿ ಬೆಳ್ಳಿ ಪದಕ, 50 ಮೀಟರ್ ಬ್ಯಾಕ್ಸ್ಟ್ರೋಕ್ ಈಜಿನಲ್ಲಿ ಮತ್ತೊಂದು ಬೆಳ್ಳಿ ಪದಕ ಹಾಗೂ 4×50 ಮೀಟರ್ ಫ್ರೀಸ್ಟೈಲ್ ರಿಲೇ ಸ್ಪರ್ಧೆಯಲ್ಲಿ ಬಂಗಾರ ಪದಕವನ್ನು ಗೆದ್ದು ಶಾಲೆಗೆ ಗೌರವ ತಂದಿದ್ದಾರೆ.
ಈ ಸಾಧನೆ ಕುರಿತು ಸಂಸ್ಥೆಯ ಕಾರ್ಯದರ್ಶಿಗಳಾದ ಡಾ. ಮೀರಾ ಶಿವಲಿಂಗಯ್ಯ ಅವರು ಮೋಹಿತ್ ಗೆ ಅಭಿನಂದನೆ ಸಲ್ಲಿಸಿದರು. ಶಾಲೆಯ ಮುಖ್ಯ ಶಿಕ್ಷಕಿ ಭಾಗ್ಯ, ಸಹ ಶಿಕ್ಷಕಿ ಸ್ಟೆಲ್ಲ ಮತ್ತು ಇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು, ವಿದ್ಯಾರ್ಥಿಯ ಸಾಧನೆಯನ್ನು ಶ್ಲಾಘಿಸಿದರು.
ಮೋಹಿತ್ ಪಿ ಶೆಟ್ಟಿಗೆ ಶಾಲೆಯ ಆಡಳಿತ ಮಂಡಳಿ, ಶಿಕ್ಷಕವೃಂದ ಹಾಗೂ ಸಹಪಾಠಿಗಳು ಅಭಿನಂದನೆಗಳನ್ನು ಸಲ್ಲಿಸಿ, ಇಂತಹ ಇನ್ನೂ ಅನೇಕ ಸಾಧನೆಗಳತ್ತ ಅವರ ಹೆಜ್ಜೆ ಮುಂದುವರಿಯಲಿ ಎಂದು ಹಾರೈಸಿದ್ದಾರೆ.




