Thursday, November 19, 2026

ಪ್ರಾಯೋಗಿಕ ಆವೃತ್ತಿ

ಮದ್ದೂರು | ಮೂಲಭೂತ ಸೌಲಭ್ಯಕ್ಕಾಗಿ ತಮಿಳು ಕಾಲೋನಿ ಶ್ರಮಿಕರ ಮುಂದುವರೆದ ಹೋರಾಟ

ಮದ್ದೂರಿನ ತಮಿಳು ಕಾಲೋನಿ ಶ್ರಮಿಕ ನಗರಕ್ಕೆ ಹಕ್ಕು ಪತ್ರ ಹಾಗೂ ಮೂಲಭೂತ ಸೌಲಭ್ಯಗಳನ್ನು ಕೊಡದೆ ಜಿಲ್ಲಾಡಳಿತ ಮತ್ತು ಪುರಸಭೆ ಸುಮಾರು ಕಾಲದಿಂದಲೂ ಆ ಜನರನ್ನು ನಿರ್ಲಕ್ಷದಿಂದ ನೋಡುತ್ತಾ ಬರುತ್ತಿದ್ದ  ಈ ಕಾರಣಕ್ಕೆ ಮದ್ದೂರಿನ ಶ್ರಮಿಕ ನಿವಾಸಿಗಳೆಲ್ಲರೂ ಕೂಡ ಭೂಮಿ ಮತ್ತು ವಸತಿ ಹಕ್ಕು ಹಂಚಿತರ ಹೋರಾಟ ಸಮಿತಿ ಹಾಗೂ ಕರ್ನಾಟಕ ಜನಶಕ್ತಿ ವತಿಯಿಂದ ಭೂಮಿ ಕೊಡದೆ ನಮ್ಮ ಓಟು ಕೊಡೆವು ಎಂಬ ಬ್ಯಾನರ್ ಗಳನ್ನು ತಮ್ಮ ಸ್ಲಂ ನ ಸುತ್ತಮುತ್ತ ಕಟ್ಟಿ ಈ ಬಾರಿ ಚುನಾವಣೆಯಲ್ಲಿ ಮತವನ್ನು ಚಲಾಯಿಸುವುದಿಲ್ಲ, ನಮ್ಮ ಸಮಸ್ಯೆಯನ್ನು ಬಗೆಹರಿಸಿ ನಮಗೆ ಭೂಮಿ ಕೊಡದಿದ್ದರೆ, ಸರಿಯಾದಂತಹ ಮೂಲಭೂತ ಸೌಲಭ್ಯಗಳನ್ನು ಕೊಡದಿದ್ದರೆ, ಮತವನ್ನು ಬಹಿಷ್ಕರಿಸುತ್ತೇವೆಂಬ ಹೋರಾಟವನ್ನು ಪ್ರಾರಂಭಿಸಿದ್ದರು.

ಇದರ ಭಾಗವಾಗಿ ಮಂಡ್ಯ ಜಿಲ್ಲಾಧಿಕಾರಿ  ಹಾಗೂ  ಅಪರ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪುರಸಭೆ ಹಾಗೂ ಸಂಬಂಧಪಟ್ಟಂತಹ ಅಧಿಕಾರಿಗಳಿಗೆ ತಮಿಳು ಕಾಲೋನಿ ಶ್ರಮಿಕ ನಗರದ ಸಮಸ್ಯೆಗಳನ್ನು ಕೂಡಲೇ ಬಗೆಹರಿಸುವಂತೆ ಮತ್ತು ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿ ಕೊಡುವಂತೆ ಆದೇಶ ಹೊರಡಿಸಿದ್ದರು.

ಆದರೆ ಕಳೆದ 19 ದಿನಗಳಿಂದಲೇ ಜಿಲ್ಲಾಧಿಕಾರಿಗಳ ಆದೇಶವಾಗಿದ್ದರು ಸಹ ಅಲ್ಲಿಯ ಜನರಿಗೆ ಸರಿಯಾಗಿರುವಂತಹ ಮೂಲಭೂತ ಸೌಲಭ್ಯ ಮತ್ತು ಕುಡಿಯುವ ನೀರಿನ ವ್ಯವಸ್ಥೆಯನ್ನು ಪುರಸಭೆಯವರು ಮಾಡದ ಕಾರಣ, ಜೊತೆಗೆ ನೀರಿನ ಸಮಸ್ಯೆ ಬಗೆಹರಿಸಲು ಬಂದಂತಹ ವಾಟರ್ ಬೋರ್ಡ್ ರವರಿಗೆ ಸರಿಯಾಗಿ ಸಹಕರಿಸದೆ ತೊಂದರೆ ಉಂಟು ಮಾಡಿದ್ದರಿಂದಾಗಿ ಜನರಿಗೆ ನೀರಿನ ಸಮಸ್ಯೆ ಇನ್ನೂ ಬಿಗಡಾಯಿಸಿದೆ.

ಈ ಕಾರಣದಿಂದಾಗಿ ಇಂದು ಸಂಜೆ ಮದ್ದೂರು ತಾಲೂಕಿನ ತಮಿಳು ಕಾಲೋನಿ ಶ್ರಮಿಕ ನಗರದ ನಿವಾಸಿಗಳು ಪುರಸಭೆಯ ಮುಂದೆ ಸರಿಯಾದ ರೀತಿಯಲ್ಲಿ ಕ್ರಮ ಆಗಬೇಕೆಂದು ಆಗ್ರಹಿಸಿ ಶಾಂತ ರೀತಿಯ ಪ್ರತಿಭಟನೆಯನ್ನು ಕೈಗೊಂಡಿದ್ದಾರೆ.

ಸಮಸ್ಯೆ ಬಗ್ಗೆ ಹರಿಯುವ ತನಕ ಪುರಸಭೆ ಬಾಗಿಲಲ್ಲಿ ಕುಳಿತುಕೊಳ್ಳುವುದಾಗಿಯೂ ಸಹ ತಿಳಿಸಿದ್ದಾರೆ. ಈ ಕೂಡಲೇ ಸಂಬಂಧಪಟ್ಟಂತಹ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ, ಸರಿಯಾದ ಕ್ರಮ ಕೈಗೊಳ್ಳಬೇಕೆಂದು ಅಲ್ಲಿನ ಕರ್ನಾಟಕ ಜನಶಕ್ತಿಯ ಮುಖಂಡರಾದ ನಗರ ಜಗದೀಶ್ ಚಂದ್ರು, ವೈದುನ, ಲತಾ,ರೂಪ ಮುಂತಾದವರು ಆಗ್ರಹಿಸಿದ್ದಾರೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ