ಶ್ರೀರಂಗಪಟ್ಟಣ ತಾಲೂಕಿನ ಪ್ರವಾಸಿ ತಾಣ ಬಲಮುರಿ ಬಳಿ ಕಾವೇರಿ ನದಿಯಲ್ಲಿ ಈಜಲು ಹೋಗಿ ಶಿಕ್ಷಕರೊಬ್ಬರು ಮುಳುಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಬೆಳಗಾಂನ ರಾಮತೀರ್ಥ ನಗರದ ನಿವಾಸಿ, ಶಿಕ್ಷಕ ನಾಗನಗೌಡ.ಎಂ.ಪಾಟೀಲ್ (38) ಆಕಸ್ಮಿಕವಾಗಿ ಕಾವೇರಿ ನದಿಯಲ್ಲಿ ಮುಳಗಿ ಸಾವನಪ್ಪಿದವರು.
ಕುಟುಂಬದವರೊಂದಿಗೆ ಮೈಸೂರಿನ ತಮ್ಮ ಸಂಬಂಧಿಕರ ಮನೆಗೆ ಆಗಮಿಸಿದ್ದ, ನಾಗನಗೌಡ. ಎಂ.ಪಾಟೀಲ್ ಸ್ಥಳೀಯ ವಿವಿಧ ಪ್ರವಾಸಿ ಸ್ಥಳಗಳನ್ನು ವೀಕ್ಷಣೆ ಮಾಡಿ ನಂತರ ಬಲಮುರಿಗೆ ಬಂದಿದ್ದರು.ಅಲ್ಲಿನ ಕಾವೇರಿ ನದಿಯಲ್ಲಿ ಈಜಲು ತೆರಳಿದ್ದ ಅವರು, ಈಜುಬಾರದೇ ನೀರಲ್ಲಿ ಮುಳಗಿ ಸಾವನ್ನಪ್ಪಿದ್ದಾರೆ.
ಮೃತರು ಬೆಳಗಾಂನ ರಾಮದುರ್ಗ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಪತ್ನಿ ರಾಣಿ ನಾಗನಗೌಡ ಪಾಟೀಲ್ ಕೂಡ ಶಿಕ್ಷಕಿ ಯಾಗಿದ್ದು, ಮೃತರಿಗೆ ಒರ್ವ ಪುತ್ರನಿದ್ದಾನೆ.
ಮೃತರ ಪತ್ನಿ ರಾಣಿ ನೀಡಿದ ದೂರಿನ ಮೇರೆಗೆ ಕೆಆರ್‌ಎಸ್ ಠಾಣಾ ಪಿಎಸ್‌ಐ ಲಿಂಗರಾಜು ದೂರು ದಾಖಲಿಸಿ ಕೊಂಡು, ಮೈಸೂರಿನ ಕೆಆರ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ನಂತರ ವಾರಸುದಾರರಿಗೆ ಶವವನ್ನು ನೀಡಿದ್ದಾರೆ.