ಕೆ.ಆರ್.ಪೇಟೆ ತಾಲ್ಲೂಕಿನ ಹೊಸಹೊಳಲು ಗ್ರಾಮದ ಪುರಾಣ ಪ್ರಸಿದ್ಧ ಶ್ರೀ ಕೋಟೆ ಭೈರವೇಶ್ವರ ಸ್ವಾಮಿ ದೇವಸ್ಥಾನ ಜೀರ್ಣೋದ್ಧಾರ ಕಾರ್ಯಕ್ಕೆ ಮಿತ್ರ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಬೂಕನಕೆರೆ ವಿಜಯ್ ರಾಮೇಗೌಡ ಅವರು ವೈಯುಕ್ತಿಕವಾಗಿ 50,000 ರೂಗಳನ್ನು ದೇಣಿಗೆಯಾಗಿ ನೀಡಿದರು.
ಇಂದು ಚೌತಿ ಅಂಗವಾಗಿ ಶ್ರೀ ಕೋಟೆ ಭೈರವೇಶ್ವರ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ದೇವರ ದರ್ಶನ ಪಡೆದ ವಿಜಯ್ ರಾಮೇಗೌಡ ಅವರು, ದೇವಾಲಯ ಸಮಿತಿ ಸದಸ್ಯರು ನೀಡಿದ ಅಭಿನಂದನೆ ಸ್ವೀಕರಿಸಿದರು.
ನಂತರ ಮಾತನಾಡಿದ ಅವರು,ನಮ್ಮ ಮಿತ್ರ ಫೌಂಡೇಶನ್ ಸೇವಾ ಸಂಸ್ಥೆಯ ವತಿಯಿಂದ ದೇವಸ್ಥಾನ ಸಮಿತಿ ನಿರ್ಮಿಸುತ್ತಿರುವ ಶ್ರೀ ಕೋಟೆ ಭೈರವೇಶ್ವರ ಸಮುದಾಯ ಭವನಕ್ಕೆ ಕೈಲಾದ ನೆರವು ನೀಡಿದ್ದೇನೆ.ಇದೇ ರೀತಿ ಎಲ್ಲಾ ಭಕ್ತಾಧಿಗಳು ದೇವಾಲಯದ ಅಭಿವೃದ್ಧಿಗೆ ಕೈ ಜೋಡಿಸಬೇಕೆಂದು ಮನವಿ ಮಾಡಿದರು.
ದೇವಾಲಯಗಳು ನಮ್ಮ ಸಂಸ್ಕೃತಿಯ ಪರಂಪರೆಯ ಪ್ರತಿಬಿಂಬವಾಗಿವೆ.ಮನುಷ್ಯನಿಗೆ ಬೇಕಾದ ಶಾಂತಿ, ನೆಮ್ಮದಿ ಯಾವ ಮಾರುಕಟ್ಟೆಯಲ್ಲಿ ಕೊಂಡುಕೊಳ್ಳುವ ಸಾಧ್ಯವಿಲ್ಲ. ಕೇವಲ ದೇವರ ಸೇವೆ,ಬಡವರು,ದೀನ ದಲಿತರ ಸಂಕಷ್ಟಗಳಿಗೆ ಸ್ಪಂದಿಸುವ ಮೂಲಕ ಶಾಂತಿ, ನೆಮ್ಮದಿ ಪಡೆಯಬಹುದಾಗಿದೆ.ಹಾಗಾಗಿ ಉಳ್ಳವರು ದಾನ ಧರ್ಮದ ಗುಣಗಳನ್ನು ಬೆಳಸಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ತಾ.ಪಂ.ಮಾಜಿ ಸದಸ್ಯ ಮಾಧವ ಪ್ರಸಾದ್, ಗ್ರಾ.ಪಂ.ಮಾಜಿ ಸದಸ್ಯ ಅಗ್ರಹಾರಬಾಚಹಳ್ಳಿ ಕುಮಾರ್,ಶ್ರೀ ಕೋಟೆ ಭೈರವೇಶ್ವರ ದೇವಾಲಯ ಸಮಿತಿ ಸದಸ್ಯರಾದ ಯಜಮಾನ ಚಿಕ್ಕೇಗೌಡ, ಯೋಗೇಶ್,ಕಾರ್ಯದರ್ಶಿ ಯೋಗೇಶ್ ಗ್ರಾಮದ ಮುಖಂಡರು ಹಾಗೂ ಭಕ್ತಾಧಿಗಳು ಉಪಸ್ಥಿತರಿದ್ದರು




