Saturday, November 21, 2026

ಪ್ರಾಯೋಗಿಕ ಆವೃತ್ತಿ

ಗೇಣಿದಾರರು ಬಡವರಿಗೆ ಭೂಮಿ ಹಂಚಿಕೆ ಮಾಡಿದ್ದ ಟಿಪ್ಪು

ಟಿಪ್ಪು ಅಭಿವೃದ್ಧಿಯ ಮುನ್ನೋಟ ಹೊಂದಿದ್ದ ರಾಜನಾಗಿದ್ದ. ತನ್ನ ಅಧಿಕಾರಾವಧಿಯಲ್ಲಿ ಮಹತ್ವದ ಭೂಸುಧಾರಣೆಯನ್ನು ಜಾರಿಗೆ ತಂದ. ಅಲ್ಲದೇ ನೂರಾರು, ಸಾವಿರಾರು ಎಕರೆ ಜಮೀನು ಹೊಂದಿದ್ದ ಮಠಗಳು ಹಾಗೂ ಜಮೀನ್ದಾರರಿಂದ ಜಮೀನನ್ನು ವಶಪಡಿಸಿಕೊಂಡು ಜೀತದಾಳುಗಳಾಗಿ, ಗೇಣಿದಾರರಾಗಿ ದುಡಿಯುತ್ತಿದ್ದ ಬಡವರು, ದಲಿತರಿಗೆ ಹಂಚಿಕೆ ಮಾಡಿದ್ದ.

ಅಲ್ಲದೇ ಬೆಂಗಳೂರಿನ ಲಾಲ್ ಭಾಗ್ ನಲ್ಲಿ ಕೃ‍ಷಿ ಸಂಶೋಧನ ಸಂಸ್ಥೆಯನ್ನು ಸ್ಥಾಪಿಸಿ, ಕೃಷಿಯ ಉನ್ನತಿಗಾಗಿ ದುಡಿದ, ಅಲ್ಲಿಗೆ ದೇಶ-ವಿದೇಶಗಳಿಂದ ಹೊಸ ತಳಿಗಳ ಬೆಳೆಗಳನ್ನು ತರಿಸಿ, ಇಲ್ಲಿಯೂ ಬೆಳೆಯಲು ಪ್ರೋತ್ಸಾಹಿಸಿದ. ಭಾರತಕ್ಕೆ ರೇಷ್ಮೆಯನ್ನು ಪರಿಚಯ ಮಾಡಿಕೊಟ್ಟಿದ್ದು, ಇದೇ ಟಿಪ್ಪು. ಇದಲ್ಲದೇ ರಸ್ತೆಗಳನ್ನು ನಿರ್ಮಿಸಿ ನೀರಾವರಿ ವ್ಯವಸ್ಥೆಗೆ ಒತ್ತು ನೀಡಿದ.

ಇಂದಿನ ಕೆ.ಆರ್.ಎಸ್. ಅಣೆಕಟ್ಟೆ ಇರುವ ಜಾಗದಲ್ಲಿ ಮೊದಲು ಟಿಪ್ಪು ಸಣ್ಣ ಅಣೆಕಟ್ಟೆಯೊಂದನ್ನು ಕಟ್ಟಿದ್ದ. ಅಲ್ಲದೇ ದೊಡ್ಡ ಡ್ಯಾಂ ಕಟ್ಟಲು ನೀಲಿನಕ್ಷೆ ತಯಾರಿಸಿದ್ದ ಎಂಬುದು ಇತಿಹಾಸದಲ್ಲಿ ದಾಖಲಾಗಿದೆ.

ಇದಷ್ಟೆ ಅಲ್ಲದೆ ಮದ್ಯವು ಯುವಜನರ ನೈತಿಕತೆಯನ್ನು ಹಾಳು ಮಾಡುತ್ತದೆ ಎಂದು ನಂಬಿದ್ದ ಟಿಪ್ಪು, ಮದ್ಯಪಾನವನ್ನು ನಿಷೇಧ ಮಾಡಿದ್ದ, ಅದರೂ ಕೆಲವರು ಮದ್ಯ ಕುಡಿಯವುದನ್ನು ಮುಂದುವರೆಸಿದಾಗ, ಈಚಲು ಮರಗಳನ್ನೇ ಕಡಿಸಿ ಹಾಕಿದ್ದ. ಇಂತಹ ಮುನ್ನೋಟ ಜನಪರ ಕಾಳಜಿ ಹೊಂದಿದ್ದ, ಟಿಪ್ಪುವಿನ ಚಹರೆಗಳನ್ನು ನಿಧಾನವಾಗಿ ಇತಿಹಾಸದಿಂದ ಮರೆಮಾಡಲಾಗುತ್ತಿದೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ