Friday, November 20, 2026

ಪ್ರಾಯೋಗಿಕ ಆವೃತ್ತಿ

ಹಿರಿಯರು ಕೊಟ್ಟು ಹೋಗಿರುವ ಪರಂಪರೆ ಮುಂದುವರಿಸೋಣ ; ನಿರ್ಮಲಾನಂದನಾಥಶ್ರೀ

ದೇವಸ್ಥಾನಗಳು ಜ್ಞಾನ, ಭಕ್ತಿ ಕೊಡುತ್ತವೆ. ಯಾವಾಗ ಯಾವುದನ್ನು ಉಪಯೋಗಿಸಬೇಕು ಎನ್ನುವುದನ್ನ ಸರಿಯಾಗಿ ಉಪಯೋಗಿಸಲು ನಮ್ಮ ಬದುಕನ್ನ ಸರಿಯಾಗಿ ಬೆಳಗಿಸಲು ಹಿರಿಯರು ಕೊಟ್ಟು ಹೋಗಿರುವ ಪರಂಪರೆಯನ್ನು ಮುಂದುವರಿಸೋಣ ಎಂದು ಆದಿಚುಂಚನಗಿರಿ ಮಠಾಧೀಶರಾದ  ಶ್ರೀನಿರ್ಮಲಾನಂದನಾಥ ಸ್ವಾಮೀಜಿ ತಿಳಿಸಿದರು.

ಮಂಡ್ಯ ತಾಲೂಕಿನ ಶಿವಳ್ಳಿ ಗ್ರಾಮದ ಶ್ರೀ ಮಾರಮ್ಮ ದೇವಿಯ ನೂತನ ದೇವಾಲಯದ ಮರುಪರ ಕಾರ್ಯಕ್ರಮ ಹಾಗೂ ಸತ್ಸಂಗ ಕಾರ್ಯ ಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಳೆದ 48 ದಿನಗಳ ಹಿಂದೆ ಮಾರಮ್ಮ ದೇವಿಯನ್ನು ಪ್ರತಿಷ್ಠಾಪಿಸಿ ಶ್ರದ್ಧೆ ಭಕ್ತಿಯಿಂದ ಉದ್ಘಾಟನೆ ಮಾಡಿದ್ದೀರಿ. ಭಕ್ತಿಯ ದೇಗುಲ, ಸೇವೆ, ಜ್ಞಾನದ ನುಡಿಗಳು ಸೇರಿದರೆ ಶ್ರೇಷ್ಠವಾಗುತ್ತದೆ. ನಮ್ಮ ದೇಶದ ಶಕ್ತಿ ಆಧ್ಯಾತ್ಮಿಕತೆ,ತ್ಯಾಗ.ವ್ಯಕ್ತಿಗೆ ಎಲ್ಲದರಿಂದ ಮುಕ್ತಿ ಸಿಗುವುದು ತ್ಯಾಗದಿಂದ,ಭಗವಂತನ ಕಡೆ ಬಂದು ತ್ಯಾಗ ಮಾಡಬೇಕು. ನಮ್ಮೊಳಗಿರುವ ಗಲೀಜನ್ನು ತ್ಯಾಗ ಮಾಡಬೇಕು.ಗುರುವಿನ ಮೇಲೆ ವಿಶ್ವಾಸ ಇಡುವುದೇ ತ್ಯಾಗ ಎಂದರು.

ಶಿವಳ್ಳಿ ಗ್ರಾಮ ಭಕ್ತರು ತುಂಬಿರುವ ಗ್ರಾಮವಾಗಿದ್ದು ಭೈರವನ ಪೂರ್ಣ ಭಕ್ತರು, ಜೋಗಿಗಳು ಇಲ್ಲಿ ಹೆಚ್ಚು ಇದ್ದಾರೆ. ಆಧುನಿಕ ಯುಗದಲ್ಲಿ ನಾವು ಆಧುನಿಕ ಸಲಕರಣೆ ಸವಲತ್ತು ಗಳನ್ನು ಉಪಯೋಗಿಸಿ ಕೊಂಡು ಅಂತರಂಗವನ್ನು ಮರೆತು,ಆಧುನಿಕವಾದುದನ್ನ ಒಪ್ಪಿಕೊಂಡು ಸತ್ಸಂಗದ ಮೂಲಕ ವಿವೇಕ ಬರಬೇಕು.
ವಿಜ್ಞಾನ ಮತ್ತು ತಂತ್ರಜ್ಞಾನ ಎಷ್ಟೇ ಬೆಳೆದರು ಕೂಡ ಜ್ಞಾನದ ಅರಿವಿರಬೇಕು.ಅದನ್ನು ದುರುಪಯೋಗಿಸಿಕೊಳ್ಳುವುದಕ್ಕಿಂತ ಉಪಯೋಗಿಸಿಕೊಳ್ಳುವ ಅರಿವು ಇರಬೇಕು.ಪ್ರತಿನಿತ್ಯ ಮಕ್ಕಳಿಗೆ ತಾಯಂದಿರು ಸಂಸ್ಕಾರವನ್ನು ಕಲಿಸುವುದು ಒಳ್ಳೆಯದು ಎಂದರು. ದೇಗುಲಕ್ಕೆ ವ್ಯವಹಾರಿಕ ನಿರೀಕ್ಷೆ ಯಲ್ಲಿ ಹೋದಾಗ ಆ ಭಾವದ ಅನುಭವವೇ ಆಗುತ್ತದೆ. ಭಕ್ತಿಯು ಗೌಣವಾಗುತ್ತದೆ. ಪ್ರತಿಯೊಬ್ಬರೂ ಇಂದ್ರೀಯ ಗಳನ್ನು ನಿಯಂತ್ರಣ ದಲ್ಲಿಟ್ಟು ಕೊಂಡು ಒಳ್ಳೆಯ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ಮುಂದಿನ ದಿನಗಳಲ್ಲಿ ಮಂಡ್ಯದಲ್ಲಿ ಜೋಗಿಗಳ ಸಮಾವೇಶವನ್ನು ಮಾಡಲಾಗು ವುದು. ಅದೇ ರೀತಿ ಮುಂದಿನ ತಿಂಗಳು ಆದಿಚುಂಚನಗಿರಿ ಯಲ್ಲಿ ಭೈರವೈಕ್ಯ ಭವನ ಉದ್ಘಾಟನೆ ನೆರವೇರಲಿದೆ ಈ ಕಾರ್ಯಕ್ರಮಕ್ಕೆ ತಾವುಗಳು ಭಾಗವಹಿಸಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಶ್ರೀ ಪುರುಷೋತ್ತಮ ನಂದನಾಥ ಸ್ವಾಮೀಜಿ, ಶ್ರೀ ಸಾಯಿನಾಥ ನಂದ ಸ್ವಾಮೀಜಿ, ಶ್ರೀ ಸತ್ ಕೀರ್ತಿನಂದನಾಥ ಸ್ವಾಮೀಜಿ, ಶ್ರೀಶೈಲ ಸ್ವಾಮೀಜಿ, ಮುಖಂಡರಾದ ಜವರೇಗೌಡ ಹೇಮಂತ್ ಗೌಡ,ಲಕ್ಷ್ಮಣ್ ಜಲೇಂದ್ರ, ಶೇಖರ್, ಬೋರೇಗೌಡ,ಸುರೇಶ್ ಸೇರಿದಂತೆ ಮತ್ತಿತರರು ಭಾಗವಹಿಸಿದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ