Saturday, November 21, 2026

ಪ್ರಾಯೋಗಿಕ ಆವೃತ್ತಿ

ಪಾಂಡವಪುರ| ಬನ್ನಂಗಾಡಿ ಗ್ರಾಮದ ವೃದ್ಧೆ ನಾಪತ್ತೆ

ಪಾಂಡವಪುರ ತಾಲೂಕಿನ ಬನ್ನಂಗಾಡಿ ಗ್ರಾಮದ ಲೇ.ಗಿರೀಗೌಡ ಎಂಬುವರ ಪತ್ನಿ ಮಹದೇವಮ್ಮ(94)ಅವರು ತಿರುಪತಿ ದೇವಸ್ಥಾನಕ್ಕೆ ಹೋಗಿ ಬರುವುದಾಗಿ ತಿಳಿಸಿ ಮನೆಯಿಂದ ಹೋದವರು ಮನೆಗೆ ವಾಪಸ್ಸಾಗದೆ ಕಾಣೆಯಾಗಿದ್ದಾರೆ.

ಕಳೆದ ಅ.15ರಂದು ಬೆಳಗ್ಗೆ 10.30 ಸಮಯದಲ್ಲಿ ಮನೆಯಿಂದ ಹೊರಟ ಮಹದೇವಮ್ಮ ಅವರು ಮತ್ತೆ ಮನೆಗೆ ವಾಪಸ್ಸಾಗಿಲ್ಲ.ಇದರಿಂದ ಆತಂಕಿತರಾದ ಅವರ ಕುಟುಂಬ ಸದಸ್ಯರು ಮಹದೇವಮ್ಮ ಅವರು ತಿರುಪತಿಗೆ ಹೋಗಬೇಕೆಂದು ಹೇಳುತ್ತಿದ್ದ ಹಿನ್ನೆಲೆಯಲ್ಲಿ ಅಲ್ಲಿಗೆ ಹೋಗಿ ಹುಡುಕಾಟ ನಡೆಸಿದ್ದಾರೆ. ಅಲ್ಲದೆ ಸಂಬಂಧಿಕರ ಮನೆಯಲ್ಲಿಯೂ ಸಹ ಹುಡುಕಿದ್ದಾರೆ. ಎಲ್ಲಿಯೂ ಪತ್ತೆಯಾಗದ ಹಿನ್ನೆಲೆಯಲ್ಲಿ ಮಹದೇವಮ್ಮ ಅವರ ಪುತ್ರ ಬಿ.ಜಿ.ನಾಗರಾಜು ಕೆ ಆರ್ ಎಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ನಾಪತ್ತೆಯಾಗಿರುವ ವೃದ್ಧೆ ಮಹದೇವಮ್ಮ ಅವರು 5 ಅಡಿ ಎತ್ತರ, ಕೋಲುಮುಖ, ಎಣ್ಣೆಗೆಂಪು ಬಣ್ಣ ಹೊಂದಿದ್ದಾರೆ. ಕೈಕಾಲು ಸುಕ್ಕು ಬಂದಿವೆ, ಬಳಿಬಣ್ಣದ ರವಿಕೆ, ಕೆಂಪು ಮತ್ತು ಹಸಿರು ಮಿಶ್ರಿತ ಸೀರೆ ಧರಿಸಿದ್ದಾರೆ. ಕನ್ನಡ ಮಾತನಾಡುತ್ತಾರೆ. ಇವರು ಎಲ್ಲಿಯಾದರು ಕಂಡು ಬಂದಲ್ಲಿ ಹತ್ತಿರದ ಪೊಲೀಸ್‌ ಠಾಣೆಗೆ ತಿಳಿಸುವಂತೆ ಪೋಲೀಸರು ಮನವಿ ಮಾಡಿದ್ದಾರೆ. ಪ್ರಕರಣ ಸಂಬಂಧ ಕೆ ಆ‌ರ್ ಎಸ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ