Saturday, November 21, 2026

ಪ್ರಾಯೋಗಿಕ ಆವೃತ್ತಿ

ಬಡವರಿಗೆ-ಶ್ರಮಿಕರಿಗೆ ಸ್ವಾತಂತ್ರ್ಯ ಸಿಕ್ಕಿಲ್ಲ

ಮಂಡ್ಯ ನಗರದ ಸಂಜೆಯ ವೃತ್ತದಲ್ಲಿ ಕೇಂದ್ರ ಸರ್ಕಾರದ ಅಮೃತ ಮಹೋತ್ಸವ ದಿನಾಚರಣೆಯನ್ನು ಪ್ರಶ್ನಿಸಿ ಕರ್ನಾಟಕ ಜನಶಕ್ತಿ ಸಂಘಟನೆಯ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ದಿನಬಳಕೆಯ ವಸ್ತುಗಳ ಬೆಲೆ ಎರಿಕೆಯಾಗಿ ಬಡವರಿಗೆ ಖರೀದಿ ಮಾಡಿ ತಿನ್ನುವ ಸಾಮರ್ಥ್ಯವೇ ಇಲ್ಲದಂತಾಗಿರುವಾಗ ದಿನೇ ದಿನೇ ಬಡತನ, ನಿರುದ್ಯೋಗ, ಆರ್ಥಿಕ ಕುಸಿತ ಉಂಟಾಗುತ್ತಿರುವಾಗ ಸಂಧರ್ಭದಲ್ಲಿ ಅಮೃತ ಮಹೋತ್ಸವವನ್ನು ಜನರು ಯಾವ ಖುಷಿಗಾಗಿ ಆಚರಿಸಬೇಕು. ಸರಿಯಾಗಿ ಮೂಲಭೂತ ಸೌಲಭ್ಯಗಳನ್ನು ಒದಗಿಸದೆ ಸ್ವಾತಂತ್ರ್ಯ ದಿನದ ಸಂಭ್ರಮಾಚರಣೆಯನ್ನು ಆಚರಿಸಲು ಸರ್ಕಾರಗಳು ಜನರಿಗೆ ಹೇಳುವುದು ಸಮಂಜಸವಲ್ಲ ಎಂದು ಕರ್ನಾಟಕ ಜನಶಕ್ತಿ ಸಂಘಟನೆಯ ಪೂರ್ಣಿಮಾ ಆಕ್ರೋಶ ವ್ಯಕ್ತಪಡಿಸಿದರು.

ದೇಶದಲ್ಲಿ ಶೇಕಡ 40ರಷ್ಟು ಕುಟುಂಬಕ್ಕೆ ವಾಸಮಾಡಲು ಮನೆ ಇಲ್ಲ ಇಂತಹ ಸಂದರ್ಭಗಳನ್ನು ತಂದಿಟ್ಟು ರಾಷ್ಟ್ರಧ್ವಜವನ್ನು ಪ್ರತಿ ಮನೆಯ ಮೇಲೆ ಆರಿಸಿ ಎಂದು ಹೇಳುವ ನೈತಿಕತೆ ದೇಶದ ಪ್ರಧಾನಿಗೆ ಇರಲು ಸಾಧ್ಯವೇ ಎಂದು ಪ್ರಶ್ನಿಸಿದರು.

ದಿನೇ ದಿನೇ ಕೊಂಡು ತಿನ್ನುವ ಆಹಾರ ಪದಾರ್ಥಗಳ ಬೆಲೆ ಗಗನಕ್ಕೇರಿ ಬಡವರ ಹೊಟ್ಟೆಗೆ ಅನ್ನವೇ ಇಲ್ಲದಂತಾಗಿರುವಾಗ ಅಮೃತ ಮಹೋತ್ಸವ ದಿನ ಯಾರಿಗಾಗಿಎಂದು ಸರ್ಕಾರವನ್ನು ಟೀಕಿಸಿದರು.

ರಾಜಸ್ತಾನದ ಜಿಲ್ಲೆಯ ಒಂದು ಮಗು ಬಾಯರಿಕೆಗಾಗಿ ಪಾತ್ರೆಯಲ್ಲಿದ್ದ ನೀರನ್ನು ತೆಗೆದು ಕುಡಿದಿದ್ದಕ್ಕಾಗಿ ಅಲ್ಲಿನ ಶಿಕ್ಷಕ ಮಗುವನ್ನು ಹೊಡೆದು ಕೊಂದಿರುವುದು ಈ ನೆಲದಲ್ಲಿನ ಜಾತಿಯ ಅಸಮಾನತೆಯನ್ನು ಎತ್ತಿ ತೋರುತ್ತದೆ ಮತ್ತು ಈ ಘಟನೆಯಿಂದ ಇಡೀ ಭಾರತ ತಲೆ ತಗ್ಗಿಸುವಂತಾಗಿದೆ ಈಗಿರುವಾಗ ನಿಜವಾದ ಸ್ವಾತಂತ್ರ್ಯ ಯಾರಿಗೆ ಸಿಕ್ಕಿದೆ. ಅಲ್ಲದೆ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ನೆಹರುರವರ ಪೋಟೊವನ್ನು ಮರೆಮಾಚಿ ಬ್ರಿಟೀಷರಿಗೆ ಕ್ಷಮಾಪಣೆ ಪತ್ರ ಬರೆದ ಸಾವರ್ಕರ್ ಪೋಟೊವನ್ನು ಹಾಕಿ ನೆಹರುರವರಿಗೆ ಅವಮಾನ ಮಾಡಲಾಗಿದೆ.

ಭಾರತದ ರಾಷ್ಟ್ರಧ್ವಜವನ್ನು ಎಲ್ಲೆಂದರಲ್ಲಿ ಹಾರಿಸುವ ಸಲುವಾಗಿ ಅದರ ಗೌರವವನ್ನು ಹಾಳು ಮಾಡಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜನಶಕ್ತಿಯ ರಾಜ್ಯ ಸಮಿತಿ ಸದಸ್ಯರಾದ ಸಿದ್ದರಾಜು ಮಾತನಾಡಿ ಬಿಜೆಪಿ ಸರ್ಕಾರವು ಸ್ವಾತಂತ್ರ್ಯಕ್ಕಾಗಿ ತನ್ನ ಪ್ರಾಣವನ್ನೇ ಅರ್ಪಿಸಿದ ಗಾಂಧಿ ಅವರನ್ನು ಕೊಂದ ಗೂಡ್ಸೆ ನಮ್ಮ ಆರಾಧ್ಯ ದೈವ ಎಂದು ಪ್ರಸ್ತುತ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಧೈರ್ಯವಾಗಿ ಹೇಳಿಕೊಳ್ಳುತ್ತಿವೆ. ಅಂಬೇಡ್ಕರ್ ನೆಹರು ಮಹಾತ್ಮ ಗಾಂಧಿ ಸಂಗೊಳ್ಳಿ ರಾಯಣ್ಣ ಕಿತ್ತೂರ ಚೆನ್ನಮ್ಮ ಭಗತ್ ಸಿಂಗ್ ಅಜಾದ್ ಚಂದ್ರಶೇಖರ್ ಆದಿವಾಸಿ ಹೋರಾಟಗಾರ ಬಿರ್ಸಾ ಮುಂಡ ಹೀಗೆ ಅನೇಕ ಸ್ವತಂತ್ರ ಹೋರಾಟಗಾರರ ಆಶಯಗಳನ್ನು ಮಣ್ಣು ಪಾಲು ಮಾಡುತ್ತಿದ್ದಾರೆ.

ಪ್ರಗತಿಪರ ಚಿಂತನೆ ಉಳ್ಳ , ಜನರಿಗೆ ಸಹಾಯ ಹಸ್ತವಾಗಿದಂತಹ ವರವರರಾವ್, ಆನಂದ ತೇಲ್ತುಮ್ಡೆ, ತೀಸ್ತಾ ಸೆಟಲ್ವಾಡ್ ಎಲ್ಲರನ್ನೂ ನೇರವಾಗಿ ಇಲ್ಲಸಲ್ಲದ ಕೇಸುಗಳನ್ನು ಹಾಕಿ ಜೈಲಿಗೆ ಕಳಿಸುವ ಮನುವಾದಿ ಮತ್ತು ಹಿಟ್ಲರ್ ಸರ್ಕಾರವೆಂದು ವಿರೋಧ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಮಹಿಳಾ ಮುನ್ನಡೆಯ ಶಿಲ್ಪ, ಶ್ರಮಿಕ ನಗರ ನಿವಾಸಿ ಒಕ್ಕೂಟದ ಅಧ್ಯಕ್ಷರಾದ ಪ್ರಕಾಶ್, ಕಾರ್ಮಿಕ ಮುಖಂಡ ನಾಗೇಶ್, ಕರ್ನಾಟಕ ವಿದ್ಯಾರ್ಥಿ ಸಂಘಟನೆಯ ರಜನಿಕಾಂತ್, ನವೀನ್, ಆರುಮುಗಂ, ಪವನ್, ಜಯವೇಲು ಹಾಗೂ ಹಲವರು ಇದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ