ಐಡಿಯಲ್ ಪಬ್ಲಿಕೇಶನ್ಸ್, ಪರಿಚಯ ಪ್ರಕಾಶನ ಹಾಗೂ ಮಂಡ್ಯ ಜಿಲ್ಲಾ ಲೇಖಕಿಯರ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ಡಾ. ಶುಭಶ್ರೀ ಪ್ರಸಾದ್ ಅವರ ‘ತೆರೆದ ನೋಟ ಹಾಗೂ ಹೊತ್ತಗೆ ಹಿಡಿವ ಹೊತ್ತು’ ಪುಸ್ತಕಗಳ ಬಿಡುಗಡೆ ಸಮಾರಂಭವು ಸೆ.5ರಂದು ಸಂಜೆ 5 ಗಂಟೆಗೆ ಮಂಡ್ಯನಗರದ ಶಂಕರಗೌಡ ಶತಮಾನೋತ್ಸವ ಭವನ ನಡೆಯಲಿದೆ.
ಕರ್ನಾಟಕ ಲೇಖಕಿಯರ ಸಂಘ ಮಂಡ್ಯ ಜಿಲ್ಲಾ ಘಟಕದ ಅಧ್ಯಕ್ಷರಾದ ಡಾ.ಮೀರಾಶಿವಲಿಂಗಯ್ಯ ಅಧ್ಯಕ್ಷತೆ ವಹಿಸುವರು. ಸಾಹಿತಿ, ನಾಡೋಜ ಡಾ. ಹಂಪ ನಾಗರಾಜಯ್ಯ ಪುಸ್ತಕ ಬಿಡುಗಡೆ ಮಾಡುವರು. ಪರಿಚಯ ಪ್ರಕಾಶನ ಪ್ರಕಾಶನ ಶಿವಕುಮಾರ್ ಆರಾಧ್ಯ ಪುಸ್ತಕ ಕುರಿತು ಮಾತನಾಡುವರು. ಲೇಖಕರಾದ ಡಾ. ಶುಭಶ್ರೀ ಪ್ರಸಾದ್, ಐಡಿಯಲ್ ಪಬ್ಲಿಕೇಶನ್ಸ್ ಪ್ರಕಾಶನ ಎಂ.ಎಸ್.ಶಿವಪ್ರಕಾಶ್ ಉಪಸ್ಥಿತರಿರುವರು.




