Sunday, November 22, 2026

ಪ್ರಾಯೋಗಿಕ ಆವೃತ್ತಿ

ಇಂದು ಎಐಸಿಸಿ ಅಧ್ಯಕ್ಷ ಚುನಾವಣೆ:ಜಿಲ್ಲೆಯ ಮತದಾರರ ವಿವರ

ಎಐಸಿಸಿ ಅಧ್ಯಕ್ಷರ ಚುನಾವಣೆಯ ಮತದಾನ ಇಂದು ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆವರೆಗೆ ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ನಡೆಯಲಿದೆ.

ಎಐಸಿಸಿ ಅಧ್ಯಕ್ಷರ ಸ್ಥಾನಕ್ಕೆ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಹಾಗೂ ಸಂಸದ ಶಶಿ ತರೂರ್ ನಡುವೆ ತೀವ್ರ ಸ್ಪರ್ಧೆ ನಡೆಯುತ್ತಿದೆ.ಎಐಸಿಸಿ ಅಧ್ಯಕ್ಷ ಚುನಾವಣೆಯಲ್ಲಿ ಮಂಡ್ಯ ಜಿಲ್ಲೆಯ 14 ಮಂದಿ ಕಾಂಗ್ರೆಸ್ ನಾಯಕರು ಮತದಾನ ಮಾಡಲಿದ್ದಾರೆ.

ಮಂಡ್ಯದಿಂದ ಮಾಜಿ ಸಚಿವ ಎಂ.ಎಸ್.ಆತ್ಮಾನಂದ, ವಿಜಯಲಕ್ಷ್ಮಿ ರಘುನಂದನ್, ನಾಗಮಂಗಲದಿಂದ ಹನುಮಂತಯ್ಯ,ಪ್ರಸನ್ನ,ಮಳವಳ್ಳಿಯಿಂದ ಪುಟ್ಟಸ್ವಾಮಿ, ಕೆ. ಸಿದ್ದೇಗೌಡ, ಮದ್ದೂರಿನಿಂದ ಮಾಜಿ ವಿಧಾನ ಪರಿಷತ್ ಸದಸ್ಯ ಬಿ.ರಾಮಕೃಷ್ಣ, ಎಸ್. ಗುರುಚರಣ್, ಪಾಂಡವಪುರದಿಂದ ಸಿ.ಕೆ. ನಾಗರಾಜು, ಹೆಚ್.ತ್ಯಾಗರಾಜು, ಶ್ರೀರಂಗಪಟ್ಟಣದಿಂದ ಮಾಜಿ ಶಾಸಕ ರಮೇಶ್ ಬಾಬು ಬಂಡಿಸಿದ್ದೇಗೌಡ, ರಾಜಣ್ಣ ಭೂತನಹೊಸೂರು, ಕೆ.ಆರ್.ಪೇಟೆಯಿಂದ ಮಾಜಿ ಕೇಂದ್ರ ಸಚಿವ ಕೆ. ರೆಹಮಾನ್ ಖಾನ್, ಮಾಜಿ ಶಾಸಕ ಕೆ. ಬಿ. ಚಂದ್ರಶೇಖರ್ ಮತದಾನದ ಹಕ್ಕು ಹೊಂದಿದ್ದು,ಇಂದು ಮತ ಚಲಾಯಿಸಲಿದ್ದಾರೆ.

ಇವರೆಲ್ಲರೂ ಕೆ.ಪಿ.ಸಿ.ಸಿ ಸದಸ್ಯರಾಗಿ ಆಯ್ಕೆಯಾಗಿದ್ದು, ಒಂದು ವಿಧಾನ ಸಭಾ ಕ್ಷೇತ್ರದಿಂದ ಇಬ್ಬರು ಮತದಾನದ ಹಕ್ಕನ್ನು ಹೊಂದಿರುತ್ತಾರೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ