Friday, November 20, 2026

ಪ್ರಾಯೋಗಿಕ ಆವೃತ್ತಿ

ಮದ್ದೂರು | ಸೂಪರ್ ಸೀಡ್ ಆಗಿರುವ ಡೇರಿಗೆ ಚುನಾವಣೆ ವಿಳಂಬ ; ಪ್ರತಿಭಟನೆ

ಮದ್ಧೂರು ತಾಲೂಕಿನ ತೊಪ್ಪನಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಆಡಳಿತ ಮಂಡಳಿಯನ್ನು ಸೂಪರ್ ಸೀಡ್ ಮಾಡಿ ನಾಲ್ಕು ವರ್ಷಗಳು ಕಳೆದಿದ್ದರೂ ಚುನಾವಣೆ ನಡೆಸದ ಅಧಿಕಾರಿಗಳು ನಿರ್ಲಕ್ಷ ಧೋರಣೆ ಅನುಸರಿಸುತ್ತಿರುವುದಾಗಿ ಆರೋಪಿಸಿ ಹಾಲು ಉತ್ಪಾದಕರು ಸಹಕಾರ ಸಂಘದ ಕಚೇರಿ ಬಳಿ ಬುಧವಾರ ಪ್ರತಿಭಟನೆ ನಡೆಸಿದರು.

ಮದ್ದೂರು ತಾಲೂಕಿನ ತೊಪ್ಪನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಕಚೇರಿ ಬಳಿ ಆಗಮಿಸಿದ ಹಾಲು ಉತ್ಪಾದಕರು ಹಾಗೂ ಸ್ಥಳೀಯ ಸಾರ್ವಜನಿಕರು ಚುನಾವಣೆ ನಡೆಸದೆ ವಿಳಂಬ ಧೋರಣೆ ಅನುಸರಿಸುತ್ತಿರುವ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಗ್ರಾಮದಲ್ಲಿ ೩೬೦ಕ್ಕೂ ಹೆಚ್ಚು ಮಂದಿ ಷೇರುದಾರರಿದ್ದು ಸುಮಾರು ೨೫೦ ಮಂದಿ ಸಹಕಾರ ಸಂಘಕ್ಕೆ ಹಾಲು ಪೂರೈಕೆ ಮಾಡುತ್ತಿದ್ದು ದಿನನಿತ್ಯ ಮೂರುವರೆ ಸಾವಿರ ಹಾಲು ಸರಬರಾಜು ಆಗುತ್ತಿದ್ದು ಸಂಸ್ಥೆಯು ಸೂಪರ್ ಸೀಡ್ ಆಗಿರುವ ಪರಿಣಾಮ ಹಾಲು ಪೂರೈಕೆ ಮಾಡುವ ಉತ್ಪಾದಕರಿಗೆ ಸಕಾಲದಲ್ಲಿ ಹಣ ಪಾವತಿಸಲು ವಿಳಂಬಧೋರಣೆ ಆಗುತ್ತಿದ್ದು ಕೂಡಲೇ ಚುನಾವಣೆ ನಡೆಸಿ ಹಾಲು ಉತ್ಪಾಕರಿಗೆ ನಿಗದಿತ ಸಮಯದಲ್ಲಿ ಹಣ ಬಟಾವಣೆ ಮಾಡಲು ಅನುಕೂಲವಾಗುತ್ತದೆಂದು ಒತ್ತಾಯಿಸಿದರು.

ಗ್ರಾಮದ ಹಲವಾರು ಕುಟುಂಬಗಳು ಹೈನುಗಾರಿಕೆಯನ್ನೇ ನಂಬಿ ಜೀವನ ಸಾಗಿಸುತ್ತಿದ್ದು ಮಕ್ಕಳ ವಿದ್ಯಾಭ್ಯಾಸ, ವಯೋವೃದ್ಧರಿಗೆ ಔಷದೋಪಚಾರ, ಕುಟುಂಬ ನಿರ್ವಹಣೆ, ಮತ್ತು ಸ್ತಿçÃಶಕ್ತಿ ಸಂಘಗಳಲ್ಲಿ ತೆಗೆದುಕೊಂಡಿರುವ ಸಾಲ ಮರುಪಾವತಿಗೂ ಹಾಲಿನ ಹಣವನ್ನೇ ನಂಬಿದ್ದು ಆಡಳಿತ ಮಂಡಳಿ ಇಲ್ಲದ ಕಾರಣ ಸಕಾಲದಲ್ಲಿ ಉತ್ಪಾದಕರಿಗೆ ಹಣ ಬಟಾವಣೆ ಆಗದೆ ಸಂಕಷ್ಟ ಅನುಭವಿಸುವಂತಾಗಿದ್ದು ಕೂಡಲೇ ಉತ್ಪಾದಕರ ಖಾತೆಗೆ ಸಕಾಲದಲ್ಲಿ ಹಣ ಪಾವತಿಸುವಂತೆ ಆಗ್ರಹಿಸಿದರು.

ಈ ಸಂಬAಧ ಅಧಿಕಾರಿಗಳಿಗೆ ಹಲವಾರು ಬಾರಿ ಮನವಿ ಮಾಡಿದರೂ ಯಾವುದೇ ಕ್ರಮಕ್ಕೆ ಮುಂದಾಗದೆ ನಿರ್ಲಕ್ಷಧೋರಣೆ ಅನುಸರಿಸುತ್ತಿದ್ದು ದೂರವಾಣಿ ಮೂಲಕ ಸಂಪರ್ಕಿಸಿದರೂ ಯಾವುದೇ ಪ್ರತಿಕ್ರಿಯೆ ನೀಡದೆ ವಿಳಂಬಧೋರಣೆ ಅನುಸರಿಸುತ್ತಿದ್ದು ಈಗಾಗಲೇ ಸಹಕಾರ ಸಂಘದಲ್ಲಿ ಸಾಕಷ್ಟು ಅವ್ಯವಹಾರ ನಡೆದಿದ್ದು ಕೂಡಲೇ ತನಿಖೆ ಕೈಗೊಂಡು ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.

ಪ್ರತಿಭಟನೆ ಸಂಬAಧ ಪತ್ರಿಕೆಯೊಂದಿಗೆ ಮಾತನಾಡಿದ ಮನ್‌ಮುಲ್ ಉಪ ವ್ಯವಸ್ಥಾಪಕ ಮಂಜೇಶ್ ಹಾಲು ಪೂರೈಕೆ ಮಾಡುವ ಉತ್ಪಾದಕರಿಗೆ ನಿಗಧಿತ ಸಮಯದಲ್ಲೇ ಹಣ ಬಟಾವಣೆ ಮಾಡುತ್ತಿದ್ದು ಇದುವರೆವಿಗೂ ಬಾಕಿ ಉಳಿಸಿಕೊಂಡಿರುವ ಉದಾಹರಣೆಗಳು ಇಲ್ಲದಂತಾಗಿದ್ದು ಸಂಬAಧಿಸಿದ ಕಾರ್ಯದರ್ಶಿಯವರೊಂದಿಗೆ ಚರ್ಚಿಸಿ ನಿಗಧಿತ ಅವಧಿಯಲ್ಲೇ ನೇರವಾಗಿ ಉತ್ಪಾದಕರ ಖಾತೆಗೆ ಹಣ ಜಮಾವಣೆ ಮಾಡುತ್ತಿರುವುದಾಗಿ ತಿಳಿಸಿದರು.

ಪ್ರತಿಭಟನೆ ವೇಳೆ ಎಂ.ಪಿ.ಸಿ.ಎಸ್ ಮಾಜಿ ಅಧ್ಯಕ್ಷ ಚನ್ನೇಗೌಡ, ಮುಖಂಡರಾದ ರಮೇಶ್, ಮಹೇಶ್, ನಾಗೇಂದ್ರ, ಜಗದೀಶ್, ರವಿ, ಮುತ್ತಲಿಂಗ, ಅಭಿಷೇಕ್, ಗಂಗಾಧರ, ಮಹೇಶ್, ಮುತ್ತರಾಜು ನೇತೃತ್ವ ವಹಿಸಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ