ಉತ್ತರ ಮಹಾರಾಷ್ಟ್ರದ ಜಲಗಾಂವ್ ಜಿಲ್ಲೆಯಲ್ಲಿ ಸಂಚರಿಸುತ್ತಿದ್ದ ಪುಷ್ಪಕ್ ಎಕ್ಸ್‌ಪ್ರೆಸ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂಬ ವದಂತಿ ಹಿನ್ನೆಲೆಯಲ್ಲಿ ಹೆದರಿದ ಪ್ರಯಾಣಿಕರು, ಹಳಿಗಳ ಮೇಲೆ ಧುಮುಕಿದಾಗಿ ಮತ್ತೊಂದು ರೈಲು ಬಂದು ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ 8 ಜನರು ಸಾವಿಗೀಡಾಗಿರುವ ಘಟನೆ ಬುಧವಾರ ಸಂಜೆ ನಡೆದಿದೆ.
ವರದಿಗಳ ಪ್ರಕಾರ, ಪುಷ್ಪಕ್ ಎಕ್ಸ್‌ಪ್ರೆಸ್‌ನಲ್ಲಿದ್ದ ಪ್ರಯಾಣಿಕರು ರೈಲು ಬ್ರೇಕ್ ಹಾಕುತ್ತಿರುವಾಗ ಕಿಡಿಗಳನ್ನು ಗಮನಿಸಿ ಬೆಂಕಿ ಬೀಳುತ್ತದೆ ಎಂದು ಭಯಭೀತರಾದರು. ಇದರಿಂದಾಗಿ ಪ್ರಯಾಣಿಕರು ಹಳಿಗಳ ಮೇಲೆ ಹಾರಲು ಪ್ರಾರಂಭಿಸಿದರು, ಇದೇ ಸಮಯಕ್ಕೆ ಕರ್ನಾಟಕ ಎಕ್ಸ್‌ಪ್ರೆಸ್‌ಗೆ ಸಂಚರಿಸಿದ ಪರಿಣಾಮ ಡಿಕ್ಕಿ ಹೊಡೆದು ಈ ದುರಂತ ಸಂಭವಿಸಿದೆ, ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಂಭವವಿದೆ. ಮಹಾರಾಷ್ಟ್ರದ ಪಚೋರಾ ನಿಲ್ದಾಣದ ಬಳಿ ಅಪಘಾತ ಸಂಭವಿಸಿದೆ, ಸಂಜೆ 5 ಗಂಟೆ ಸುಮಾರಿಗೆ ಪುಷ್ಪಕ್ ಎಕ್ಸ್‌ಪ್ರೆಸ್‌ನಲ್ಲಿ ಬೆಂಕಿ ಬಿದ್ದಿದೆ ಎಂಬ ವದಂತಿಯಿಂದಾಗಿ ಯಾರೋ ಸರಪಳಿ ಎಳೆದ ನಂತರ ಪುಷ್ಪಕ್ ಎಕ್ಸ್‌ಪ್ರೆಸ್ ನಿಂತಿತ್ತು.
#BreakingNews: महाराष्ट्र के जलगांव में ट्रेन हादसा
⚡पुष्पक एक्सप्रेस में आग की अफवाह फैली
⚡यात्रियों ने लगाई छलांग, दूसरे ट्रैक से आ रही ट्रेन ने लोगों को कुचला।@IndianRailMedia#BREAKING #maharashtra #Jalgaon #pushpakexpress #bigbreaking #train #accident pic.twitter.com/XI3qngZj6R
— Newslive 24×7 (@kanpurtak) January 22, 2025
“>
ಪುಷ್ಪಕ್ ಎಕ್ಸ್‌ಪ್ರೆಸ್‌ನ ಕೆಲವು ಪ್ರಯಾಣಿಕರು ಕೆಳಗಿಳಿದು, ಮುಂದೆ ಬರುತ್ತಿದ್ದ ಕರ್ನಾಟಕ ಎಕ್ಸ್‌ಪ್ರೆಸ್‌ಗೆ ಡಿಕ್ಕಿ ಹೊಡೆದಿದ್ದಾರೆ ಎಂದು ಸೆಂಟ್ರಲ್ ರೈಲ್ವೆಯ ಮುಖ್ಯ ವಕ್ತಾರ ಸ್ವಪ್ನಿಲ್ ನೀಲಾ ತಿಳಿಸಿದ್ದಾರೆ. ಅಪಘಾತದಲ್ಲಿ ಕನಿಷ್ಠ 8 ಜನರು ಸಾವನ್ನಪ್ಪಿದ್ದಾರೆ ಎಂದು ಜಿಲ್ಲಾ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.
ಪುಷ್ಪಕ್ ಎಕ್ಸ್‌ಪ್ರೆಸ್‌ನಲ್ಲಿ ಅಲಾರಾಂ ಚೈನ್ ಎಳೆದಿರುವುದನ್ನು ರೈಲ್ವೆ ಅಧಿಕಾರಿಗಳು ದೃಢಪಡಿಸಿದ್ದಾರೆ. ಬಿಸಿ ಆಕ್ಸಲ್‌ನಿಂದ ಹೊಗೆ ಬಂದಿದ್ದರಿಂದ ಪ್ರಯಾಣಿಕರು ಭಯಭೀತರಾಗಿ, ಸರಪಳಿಯನ್ನು ಎಳೆದುಕೊಂಡು ರೈಲಿನಿಂದ ಜಿಗಿದಿರಬಹುದು ಎಂದು ಅವರು ತಿಳಿಸಿದ್ದಾರೆ.




