ಮಂಡ್ಯನಗದ ರೈನ್ಬೋ ಕ್ರಿಯೇಷನ್ ಸಭಾಂಗಣದಲ್ಲಿ ಮಂಡ್ಯ ಚಿತ್ರಕಲಾವಿದರ ಬಳಗ, ರೈನ್ಬೋ ಕ್ರಿಯೇಷನ್, ಡಾ.ಈ.ಸಿ.ನಿಂಗರಾಜ್ಗೌಡ ಸ್ನೇಹ ಬಳಗ ಇವರ ಸಹಯೋಗದಲ್ಲಿ ಪಹಲ್ಗಾಮದಲ್ಲಿ ಉಗ್ರರ ಗುಂಡಿಗೆ ಬಲಿಯಾದ ಭಾರತೀಯ ನಾಗರೀಕರಿಗೆ ಚಿತ್ರನಮನ-ಸಂತಾಪ ಕಾರ್ಯಕ್ರಮಕ್ಕೆ ಯಶಸ್ವಿಯಾಗಿ ನಡೆಯಿತು.
ಈ ಸಂದರ್ಭದಲ್ಲಿ ಮೈಸೂರು ವಿ.ವಿ ಸಿಂಡಿಕೇಟ್ ಮಾಜಿ ಸದಸ್ಯ ಡಾ.ಈ.ಸಿ.ನಿಂಗರಾಜ್ಗೌಡ ಮಾತನಾಡಿ
ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಬೈಸರಾನ್ ಕಣಿವೆಯಲ್ಲಿ ಏ.೨೨ರಂದು ಸಂಭವಿಸಿದ ಪಹಲ್ಗಾಮ್ ಭೀಕರ ಉಗ್ರ ದಾಳಿ ಭಾರತದಲ್ಲಿ ೨೦೦೮ರ ಮುಂಬೈ ದಾಳಿಯ ನಂತರದ ಅತ್ಯಂತ ಘೋರ ಘಟನೆಗಳಲ್ಲಿ ಒಂದಾಗಿದೆ ಎಂದರು.
ಕಾಶ್ಮೀರದಲ್ಲಿ ಭಾರತೀಯ ನಾಗರಿಕರಿಗೆ ವಾಸದ ಅನುಮತಿ ನೀಡುವ ನೀತಿಯ ವಿರುದ್ಧ ೫ ಮಂದಿ ಉಗ್ರರು, ಎಕೆ-೪೭ ಮತ್ತು ಎಂ೪ ಕಾರ್ಬೈನ್ ಶಸ್ತ್ರಾಸ್ತ್ರಗಳಿಂದ ಸಜ್ಜಿತರಾಗಿ, ೨೫ ಭಾರತೀಯ ಪ್ರವಾಸಿಗರು ಮತ್ತು ೧ ನೇಪಾಳದ ನಾಗರಿಕರನ್ನು ಹತ್ಯೆ ಮಾಡಿ ೨೦ಕ್ಕೂ ಹೆಚ್ಚು ಮಂದಿಗೆ ಗಾಯಮಾಡಿ ಅಟ್ವಹಾಸ ಮೆರೆದಿರುವುದು ಖಂಡನೀಯ ಎಂದರು.
ಇದೇ ಸಂಧರ್ಭದಲ್ಲಿ ಉಗ್ರರ ದಾಳಿಗೆ ಬಲಿಯಾದ ಪ್ರವಾಸಿ ಭಾರತೀಯರ ಆತ್ಮಕ್ಕೆ ಶಾಂತಿ ಕೋರಲ ಮೌನಾಚರಣೆ ಮಾಡಿ, ಚಿತ್ರನಮನ-ದೀಪನಮನ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ಚಿತ್ರಕಲಾವಿದರಾದ ಡಾ.ಶಂಕರಪ್ಪ, ವಿನೋದ್ಕುಮಾರ್, ವಿರುಪಾಕ್ಷ, ಜಯಶಂಕರ್, ಶೋಭಾ, ವಿದ್ಯಾಶ್ರೀ, ಚೇತನ್, ವಿಜಯೇಂದ್ರ, ಶಿವಪ್ರಸಾದ್, ವೈ.ಹೆಚ್.ಲೋಹಿತ್ ಕುಮಾರ್ , ನಿವೃತ್ತ ಸೈನಿಕ ಕುಮಾರ್ ಮತ್ತಿತರರಿದ್ದರು.




