ಶ್ರೀರಂಗಪಟ್ಟಣದ ಗಂಜಾಂ ಸಮೀಪದ ನಿಮಿಷಾಂಭ ದೇವಾಲಯದ ಈಜಲು ಕಾವೇರಿ ನದಿಗೆ ಇಳಿದಿದ್ದ ಇಬ್ಬರು ಯುವಕರು ನೀರು ಪಾಲಾಗಿರುವ ಘಟನೆ ಇಂದು ನಡೆದಿದೆ.
ಬೆಂಗಳೂರು ಮತ್ತು ತಮಿಳುನಾಡು ಮೂಲದವರಾದ ವಿಶಾಲ್(19), ರೋಹಣ್(17) ನೀರು ನೀರುಪಾಲಾದವರು.
ಮೈಸೂರಿನಲ್ಲಿ ಅಜ್ಜಿಯ ಮನೆಗೆ ಬಂದು ಕುಟುಂಬ ಸದಸ್ಯರ ಜೊತೆಗೆ ನಿಮಿಷಾಂಭ ದೇವಾಲಯದ ಬಳಿ ಕಾವೇರಿ ನದಿಯಲ್ಲಿ ಈಜಲು ತೆರಳಿದಾಗ ಈ ದುರ್ಘಟನೆ ನಡೆದಿದೆ. ಈ ಸಂಬಂಧ ಶ್ರೀರಂಗಪಟ್ಟಣ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




