Monday, October 21, 2024

ಪ್ರಾಯೋಗಿಕ ಆವೃತ್ತಿ

ತಮಿಳುನಾಡು ಉಪಮುಖ್ಯಮಂತ್ರಿಯಾಗಿ ಉದಯನಿಧಿ ಸ್ಟಾಲಿನ್ ಅಧಿಕಾರ ಸ್ವೀಕಾರ

ಡಿಎಂಕೆ ಮುಖ್ಯಸ್ಥ ಮತ್ತು ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಅವರ ಪುತ್ರ ಉದಯನಿಧಿ ಸ್ಟಾಲಿನ್ ಭಾನುವಾರ ತಮಿಳುನಾಡಿನ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ರಾಜ್ಯದಲ್ಲಿ 2026 ರ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಆಡಳಿತಾರೂಢ ಡಿಎಂಕೆಯು 46 ವರ್ಷದ ಉದಯನಿಧಿ ಅವರಿಗೆ ಬಡ್ತಿ ನೀಡಿದೆ.

ನವೆಂಬರ್ 27, 1977 ರಂದು ಜನಿಸಿದ ಉದಯನಿಧಿ ಅವರು ರಾಜಕೀಯ ಜೀವನ ವಾಸ್ತವದಲ್ಲಿ ಜುಲೈ 2019 ರಲ್ಲಿ ಡಿಎಂಕೆ ಯುವ ಘಟಕದ ಕಾರ್ಯದರ್ಶಿಯಾಗಿ ನೇಮಕಗೊಳ್ಳುವುದರೊಂದಿಗೆ ಪ್ರಾರಂಭವಾಯಿತು. ಅವರ ನಾಯಕತ್ವದಲ್ಲಿ, ಸಿದ್ಧಾಂತ ಆಧಾರಿತ ಕಾರ್ಯಾಗಾರಗಳನ್ನು ಆಯೋಜಿಸುವ ಮೂಲಕ ಪಕ್ಷದ ಕಾರ್ಯಕರ್ತರಲ್ಲಿ ದ್ರಾವಿಡ ಮನೋಭಾವವನ್ನು ಬೆಳೆಸುವ ಗುರಿಯನ್ನು ಪಕ್ಷವು ಪುನರುಚ್ಚರಿಸಿತ್ತು.

ಸಂವಹನಗಳು ಮತ್ತು ಹೆಚ್ಚು ಹೆಚ್ಚು ಯುವಕರನ್ನು ತಲುಪಲು ಮತ್ತು ಪಕ್ಷದ ಸದಸ್ಯತ್ವವನ್ನು ಹೆಚ್ಚಿಸಲು ತಂತ್ರಜ್ಞಾನವನ್ನು ಬಳಸುವುದರ ಬಗ್ಗೆ ಅವರು ಕೇಂದ್ರೀಕರಿಸಿದ್ದಾರೆ. ಅಲ್ಲದೆ, ಯುವ ಘಟಕದ ಸಮಾವೇಶ ಮತ್ತು ರಾಜ್ಯಾದ್ಯಂತ ಬೈಕ್‌ ರ್ಯಾಲಿಯಂತಹ ಹಲವಾರು ಇತರ ಉಪಕ್ರಮಗಳು ಕಾರ್ಯಕರ್ತರನ್ನು ಹುರಿದುಂಬಿಸಿತ್ತು.

2021 ರಲ್ಲಿ, ಉದಯ್ ಅವರು ತಮ್ಮ ತಾತ ಕರುಣಾನಿಧಿ ಪ್ರತಿನಿಧಿಸುವ ಚೆನ್ನೈನ ಚೆಪಾಕ್-ತಿರುವಲ್ಲಿಕೇಣಿ ಕ್ಷೇತ್ರದಿಂದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಭಾರಿ ಅಂತರದಿಂದ ಗೆದ್ದರು. 2022 ರಲ್ಲಿ ಅವರು ತಮ್ಮ ತಂದೆಯ ಸರ್ಕಾರದಲ್ಲಿ ಸಚಿವರಾದರು. ಇದಕ್ಕೆ ವ್ಯತಿರಿಕ್ತವಾಗಿ, ಕರುಣಾನಿಧಿ ಅವರ ಉತ್ತರಾಧಿಕಾರಿಯಾಗಲು ಸ್ಟಾಲಿನ್ ಅವರು ತಮ್ಮ ತಂದೆಯ ಸಂಪುಟಕ್ಕೆ ಸೇರಲು ಕನಿಷ್ಠ 15 ವರ್ಷಗಳ ಕಾಲ ಕಾಯಬೇಕಾಗಿತ್ತು.

ಕಳೆದ ವರ್ಷ, ‘ಸನಾತನ’ ಕುರಿತು ಉದಯನಿಧಿಯವರ ಹೇಳಿಕೆಗಳು ರಾಷ್ಟ್ರವ್ಯಾಪಿ ವಿವಾದಕ್ಕೆ ಕಾರಣವಾದರೂ, ಅವರು ರಾಷ್ಟ್ರದಾದ್ಯಂತ ಜನಪ್ರಿಯತೆ ಗಳಿಸಿಕೊಂಡರು. ಅವರು ಸಚಿವರಾಗಿ ಅಧಿಕಾರ ವಹಿಸಿಕೊಂಡ ನಂತರ, ಕ್ರೀಡಾ ಪಟುಗಳನ್ನು ಪ್ರೋತ್ಸಾಹಿಸಲು ಮತ್ತು ಕ್ರೀಡಾ ಮೂಲಸೌಕರ್ಯಗಳನ್ನು ಸುಧಾರಿಸಲು ಹಲವಾರು ಉಪಕ್ರಮಗಳನ್ನು ಪ್ರಾರಂಭಿಸಿದ್ದಾರೆ.ತಮಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!