ಕನ್ನಡ ಉಪನ್ಯಾಸಕರ ವೇದಿಕೆಯು ವಿದ್ಯಾರ್ಥಿಗಳಲ್ಲಿ ಸಾಹಿತ್ಯ ಪ್ರೀತಿ ಮತ್ತು ಕನ್ನಡ ನಾಡು-ನುಡಿಯ ಬಗ್ಗೆ ಅಭಿಮಾನವನ್ನು ಬೆಳೆಸುವಂತಹ ಕಾರ್ಯ ನಿರ್ವಹಿಸಬೇಕೆಂದು ಜಿಲ್ಲಾ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಉಪ ನಿರ್ದೇಶಕ ಉಮೇಶ್ ಸಲಹೆ ನೀಡಿದರು.
ಮಂಡ್ಯದ ಸರ್ಕಾರಿ ಪದವಿ ಪೂರ್ವ ಕಾಲೇಜಿ (ಮಾಜಿ ಪುರಸಭೆ) ನಲ್ಲಿ ಹೊಸದಾಗಿ ಅಸ್ತಿತ್ವಕ್ಕೆ ಬಂದ ಮಂಡ್ಯ ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಕನ್ನಡ ಉಪನ್ಯಾಸಕರ ವೇದಿಕೆ ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡಕ್ಕೆ ಎಂಟು ಜ್ಞಾನಪೀಠ ಪ್ರಶಸ್ತಿ ಬಂದಿದೆ. ಹಾಗೂ ಶಾಸ್ತ್ರೀಯ ಸ್ಥಾನಮಾನವನ್ನು ಪಡೆದ ಭಾಷೆಗಳಲ್ಲಿ ಕನ್ನಡವು ಒಂದಾಗಿದೆ. ಹಾಗಾಗಿ ಕನ್ನಡ ಭಾಷೆಯನ್ನು ಬೋಧಿಸುವುದೇ ಸಂತೋಷದ ಸಂಗತಿ ಎಂದು ಅಭಿಪ್ರಾಯಪಟ್ಟರು.
ಇದೇ ಸಂದರ್ಭದಲ್ಲಿ ವೇದಿಕೆಗೆ ಹೊಸದಾಗಿ ಆಯ್ಕೆಯಾದ ಗೌರವ ಅಧ್ಯಕ್ಷ ಪ್ರಾಂಶುಪಾಲ ಚಂದ್ರುಶೇಖರಯ್ಯ, ಗೌರವ ಸಲಹೆಗಾರ ಪ್ರಾಂಶುಪಾಲರಾದ ಗೌರಮ್ಮ ಮತ್ತು ಅಧ್ಯಕ್ಷರಾಗಿ ಆಯ್ಕೆಯಾದ ಲೋಕೇಶ್ ಬೆಕ್ಕಳಲೆ, ಪ್ರಧಾನ ಕಾರ್ಯದರ್ಶಿ, ಶಿವಾನಂದ ಕೆ.ಎಲ್, ಕಾರ್ಯಾಧ್ಯಕ್ಷರಾದ ಪುಷ್ಪಲತಾ, ಖಜಾಂಚಿಗಳಾದ ಸೋಮಶೆಟ್ಟಿ ಹಾಗೂ ಇನ್ನುಳಿದ ಎಲ್ಲಾ ಪದಾಧಿಕಾರಿಗಳಿಗೂ ಶುಭ ಕೋರಿದರು. ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಗುರುಲಿಂಗೇಗೌಡರು, ಮಂಡ್ಯ ಜಿಲ್ಲಾ ಉಪನ್ಯಾಸಕರ ಸಂಘದ ಪ್ರಧಾನ ಕಾರ್ಯದರ್ಶಿ ರವೀಂದ್ರ, ಕಾರ್ಯಾಧ್ಯಕ್ಷ ವೆಂಕಟೇಗೌಡ, ಮಂಡ್ಯ ಜಿಲ್ಲಾ NPS ಘಟಕದ ಅಧ್ಯಕ್ಷ ಸಿದ್ಧರಾಜು ಹಾಗೂ ಮಂಡ್ಯ ಜಿಲ್ಲೆಯ ಹಲವು ಕನ್ನಡ ಉಪನ್ಯಾಸಕರು ಉಪಸ್ಥಿತರಿದ್ದರು.




