Wednesday, November 18, 2026

ಪ್ರಾಯೋಗಿಕ ಆವೃತ್ತಿ

ದೇವಾಲಯಗಳ ಅರ್ಚಕರು -ಪುರೋಹಿತರ ಒಕ್ಕೂಟ ರಚನೆ

ರಾಜ್ಯದಲ್ಲಿ ಹಿಂದೂ ದೇವಾಲಯಗಳ ಅರ್ಚಕರು ಮತ್ತು ಪುರೋಹಿತರ ಶ್ರೇಯೋಭಿವೃದ್ದಿ ಹಾಗೂ‌ ಸಂಘಟನೆಗಾಗಿ ಒಕ್ಕೂಟ ರಚಿಸಲಾಗಿದೆ ಎಂದು ಸಂಸ್ಥಾಪಕ ಅಧ್ಯಕ್ಷ ಡಾ.ಎಂ.ಎಸ್.ವಿಶ್ವನಾಥ‌ ದೀಕ್ಷಿತ್ ತಿಳಿಸಿದರು.

ಮಂಡ್ಯದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಲ್ಲ ವರ್ಗದ ಅರ್ಚಕ ಮತ್ತು ಪುರೋಹಿತರ ಮನೋವಿಕಾಸ ಮತ್ತು ಬೌದ್ದಿಕ ಬೆಳವಣಿಗೆಗಾಗಿ ಸಂಸ್ಕ್ರತ ಶಿಕ್ಷಣ, ವೇದ ತರಗತಿ ಆಯೋಜನೆ ಮತ್ತು ಪ್ರಾಚೀನ ಪುರಾಣ ಗ್ರಂಥಗಳ ಅವಲೋಕನ, ಗ್ರಾಮೀಣ ಭಾಗದಲ್ಲಿ ಹಿಂದೂ ಧರ್ಮ ಬೆಳವಣಿಗೆಗೆ ಒತ್ತು ನೀಡಲಾಗುವುದು ಎಂದರು.

ಧಾರ್ಮಿಕ ಶಿಕ್ಷಣ, ಆಯ್ದ ದೇವಾಲಯಗಳಲ್ಲಿ ಧಾರ್ಮಿಕ ಸಭೆ ಆಯೋಜನೆ ಮತ್ತು ಧರ್ಮ ಪ್ರಚಾರ, ಅರ್ಚಕ-ಪುರೋಹಿತರಲ್ಲಿ ಸಾಮಾಜಿಕ ಸಾಮರಸ್ಯ ವರ್ಧನೆ ಹಾಗೂ ಆರ್ಥಿಕ‌ ಸಂಕಷ್ಟದಲ್ಲಿರುವವರಿಗೆ ಸ್ಪಂದಿಸುವ ಕೆಲಸಗಳನ್ನು ಒಕ್ಕೂಟದ ವತಿಯಿಂದ ಮಾಡಲಾಗುವುದು ಎಂದರು.

ಗೋಷ್ಠಿಯಲ್ಲಿ ನವೀನ್, ವಿಶ್ವನಾಥ್ ಮೊದಲಾದವರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ