ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು ನಾಡು ಕಂಡ ಅದ್ವಿತೀಯ ನಾಯಕ ಎಂದು ಮಂಡ್ಯ ವಕೀಲರ ಸಂಘದ ಅಧ್ಯಕ್ಷ ಟಿ.ಎಸ್.ಸತ್ಯಾನಂದ ಹೇಳಿದರು.
ಮಂಡ್ಯ ನಗರದ ವಕೀಲರ ಸಂಘದ ವತಿಯಿಂದ ಆಯೋಜಿಸಿದ್ದ ಮಾಜಿ ಮುಖ್ಯಮಂತ್ರಿ ದಿ.ಎಸ್.ಎಂ.ಕೃಷ್ಣ ಅವರ ಒಂದನೇ ವರ್ಷದ ಪುಣ್ಯ ಸ್ಮರಣೆ ಅಂಗವಾಗಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಅವರ ಆತ್ಮಕ್ಕೆ ಶಾಂತಿ ಕೋರಿ ಅವರು ಮಾತನಾಡಿದರು.
ಎಸ್.ಎಂ.ಕೃಷ್ಣ ಅವರು ಹಾಕಿಕೊಟ್ಟ ಮಾರ್ಗದರ್ಶನ ಆದರ್ಶನೀಯ. ಅವರು ಒಬ್ಬ ಸಜ್ಜನ,ಸಂಯಮ ನಾಯಕರಾಗಿದ್ದರು ಎಂದು ತಿಳಿಸಿದರು.
ಸರಳತೆ,ಶಾಂತಿ ಮತ್ತು ಶಿಸ್ತಿನ ಪ್ರತೀಕವಾಗಿದ್ದ ಎಸ್.ಎಂ. ಕೃಷ್ಣರವರು ಕರ್ನಾಟಕದ ಅಭಿವೃದ್ಧಿಗೆ ಹೊಸ ಮಾನದಂಡ ಸ್ಥಾಪಿಸಿದರು.ಅವರ ಪುಣ್ಯಸ್ಮರಣೆಯಂದು ಅವರ ಅದ್ಭುತ ಸೇವೆಯನ್ನು ಕೃತಜ್ಞತೆಯಿಂದ ನೆನೆದು ಅವರ ದೂರದೃಷ್ಟಿ, ಆಧುನಿಕ ಆಡಳಿತದ ಮಾದರಿ ಮತ್ತು ಜನಪ್ರಿಯ ನಾಯಕತ್ವ ಯುವ ಪೀಳಿಗೆಗೆ ಸ್ಫೂರ್ತಿ ನೀಡುತ್ತದೆ ಎಂದರು.
ಈ ಸಂದರ್ಭದಲ್ಲಿ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಸತೀಶ್ ಸೇರಿದಂತೆ ವಕೀಲರ ಸಂಘದ ನಿರ್ದೇಶಕರು ಹಾಗೂ ಹಿರಿಯ ವಕೀಲರು ಭಾಗವಹಿಸಿದ್ದರು




