Saturday, November 21, 2026

ಪ್ರಾಯೋಗಿಕ ಆವೃತ್ತಿ

ಉರಿಗೌಡ-ದೊಡ್ಡ ನಂಜೇಗೌಡ ಫ್ಲೆಕ್ಸ್ ತೆರವು : ಜಿಲ್ಲಾಡಾಳಿತದ ಕ್ರಮಕ್ಕೆ ಸ್ವಾಗತ

  • ಉರಿಗೌಡ-ದೊಡ್ಡ ನಂಜೇಗೌಡ ಫ್ಲೆಕ್ಸ್ ತೆಗೆದು, ಶ್ರೀ ಬಾಲಗಂಗಾಧರ ಸ್ವಾಮಿಜಿ ಮಹಾದ್ವಾರದ ಫ್ಲೆಕ್ಸ್
  • ಮಂಡ್ಯ  ಜಿಲ್ಲಾಡಾಳಿತದ ಕ್ರಮಕ್ಕೆ ಸ್ವಾಗತ

ಪ್ರಧಾನಿ ನರೇಂದ್ರಮೋದಿ ಜಿಲ್ಲೆಗೆ ಆಗಮಿಸುತ್ತಿರುವ ಹೊತ್ತಿನಲ್ಲಿ ಬಿಜೆಪಿ ಪಕ್ಷವು ಕಪೋಲಕಲ್ಪಿತವಾದ ‘ ಉರಿಗೌಡ-ದೊಡ್ಡ ನಂಜೇಗೌಡ’ ಹೆಸರುಗಳಲ್ಲಿ ಹಾಕಿರುವ ಫ್ಲೆಕ್ಸ್ ಗಳನ್ನು ಕೂಡಲೇ ತೆರೆವು ಗೊಳಿಸಿ ಎಲ್ಲವೂ ಶಾಂತಿಯುತವಾಗಿ ನಡೆಯಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಪ್ರಗತಿಪರ ಸಂಘಟನೆಗಳ ಮುಖಂಡರು ಆಗ್ರಹಿಸಿದ್ದರು.

ಸಂಜೆಯೊಳಗೆ ಈ ವಿವಾದಾತ್ಮಕ ಫ್ಲೆಕ್ಸ್ ಬೋರ್ಡ್ ಗಳನ್ನು ತೆರೆವುಗೊಳಿಸಬೇಕು. ಇಲ್ಲವಾದಲ್ಲಿ ಕಾಂಗ್ರೆಸ್,  ಜೆಡಿಎಸ್, ರೈತ ಸಂಘ ಮತ್ತು ಪ್ರಗತಿಪರ ಸಂಘಟನೆಗಳ ರಾಜಕೀಯ ಕಾರ್ಯಕರ್ತರು ಮತ್ತು ಸಾರ್ವಜನಿಕರು ಇಂತಹ ಕೇಡಿನ ಕೆಲಸಗಳ ವಿರುದ್ದ ತೀವ್ರವಾದ ಪ್ರತಿಭಟನೆಯನ್ನ ನಾಳೆ ಹಮ್ಮಿಕೊಳ್ಳಲು ಕಾರಣವಾಗುತ್ತದೆ. ತಾವು ಇದಕ್ಕೆ ಅವಕಾಶ ಕೊಡದೇ ಯಾವುದೇ ಮುಲಾಜುಗಳಿಗೆ ಒಳಗಾಗದೇ ಸಕ್ಕರೆ ಕಾರ್ಖಾನೆ ವೃತ್ತದಲ್ಲಿರುವ (ಬಿ.ಜಿ ದಾಸೇಗೌಡ ವೃತ್ತ) ಫ್ಲೆಕ್ಸ್ ಬೋರ್ಡ್ ಗಳನ್ನ ತೆರೆವು ಗೊಳಿಸಬೇಕೆಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದರು.

ನಿನ್ನೆ ರಾತ್ರಿ (ಶನಿವಾರ) ಇದ್ದ ದ್ವಾರದ ಫ್ಲೆಕ್ಸ್

ಇದಕ್ಕೆ ಸಂಬಂಧಪಟ್ಟಂತೆ, ಜಿಲ್ಲಾಡಳಿತವು ಕ್ರಮಕೈಗೊಳ್ಳುವುದಾಗಿ ತಿಳಿಸಿ, ಸಕ್ಕರೆ ಕಾರ್ಖಾನೆ ವೃತ್ತದಲ್ಲಿರುವ ಫ್ಲೆಕ್ಸ್ ಬೋರ್ಡ್ ಗಳನ್ನು ತೆಗೆಸಿದ್ದಾರೆ.  ಈ ಕ್ರಮವನ್ನು  ಸಮಾನ ಮನಸ್ಕರ ವೇದಿಕೆ, ಸಿಐಟಿಯ, ಸಿಪಿಐಎಂ, ದಲಿತ ಸಂಘರ್ಷ ಸಮಿತಿ,  ಕರುನಾಡ ಸೇವಕರು ಸಂಘಟನೆ ಸೇರಿದಂತೆ ಪ್ರಗತಿಪರ ಮುಖಂಡರು ಸ್ವಾಗತಿಸಿದ್ದಾರೆ.

ಅದೇ ವೃತ್ತದಲ್ಲಿದ್ದಉರಿಗೌಡ-ದೊಡ್ಡ ನಂಜೇಗೌಡ’  ಫ್ಲೆಕ್ಸ್ ತೆಗೆದು, ಶ್ರೀ ಬಾಲಗಂಗಾಧರ ಸ್ವಾಮಿಜಿಯವರ ಮಹಾದ್ವಾರದ ಫ್ಲೆಕ್ಸ್ ನ್ನು ಹಾಕಲಾಗಿದೆ.

ಪ್ರದಾನಿ ನರೇಂದ್ರಮೋದಿಯವರ ಆಗಮನದ ಹಿನ್ನೆಲೆಯಲ್ಲಿ ಯಾವುದೇ ಅಹಿತರ ಘಟನೆ ನಡೆಯದಂತೆ ಕಾರ್ಯಕ್ರಮವು ಸುಗಮವಾಗಿ ನಡೆಯಲು ಜಿಲ್ಲಾಡಳಿತ ಈ ಕ್ರಮಕ್ಕೆ ಸ್ವಾಗತ ಎಂದು ಪ್ರಗತಿಪರ ಸಂಘಟನೆಗಳು ತಿಳಿಸಿವೆ.

 

 

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ