Thursday, November 19, 2026

ಪ್ರಾಯೋಗಿಕ ಆವೃತ್ತಿ

ಮದ್ದೂರು ತಲುಪಿದ ‘ಸ್ವದೇಶಿ ವಸ್ತು ಬಳಸಿ ದೇಶ ಉಳಿಸಿ’ ಜಾಥಾ

ವರದಿ: ಪ್ರಭು ವಿ ಎಸ್

“ಸ್ವದೇಶಿ ವಸ್ತುಗಳನ್ನು ಬಳಸಿ ದೇಶ ಉಳಿಸಿ” ಅಭಿಯಾನದ ಅಂಗವಾಗಿ ಮಾಜಿ ಯೋಧರು, ನಿವೃತ್ತ
ಕೆ.ಎ.ಎಸ್. ಮತ್ತು ಐ.ಎ.ಎಸ್. ಅಧಿಕಾರಿಗಳ ತಂಡ ಶನಿವಾರ ಬೆಂಗಳೂರಿನಿಂದ ಹಮ್ಮಿಕೊಂಡಿದ್ದ ಸೈಕಲ್ ಜಾಥಾವು ಶನಿವಾರ ಸೋಮನಹಳ್ಳಿಯ ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ಹೋಟೆಲ್ ಸಿಪಾಯಿ ಬಳಿ ಆಗಮಿಸಿತು. ತಂಡವನ್ನು ಮಾಜಿ ಸೈನಿಕ ಸಿಪಾಯಿ ಶ್ರೀನಿವಾಸ್ ಸೇರಿದಂತೆ ಇತರರು ಆತ್ಮೀಯವಾಗಿ
ಬರಮಾಡಿಕೊಂಡರಲ್ಲದೆ ಪುಷ್ಪಾರ್ಚನೆ ಸಲ್ಲಿಸಿದರು.

ಈ ವೇಳೆ ಜಾಥಾ ತಂಡದ ನಾಯಕ ಮಾಜಿ ಸೈನಿಕ ಬ್ರಿಗೇಡಿಯರ್ ರವಿವಮುನಿಸ್ವಾಮಿ ಯವರು
ಪತ್ರಿಕೆಯೊಂದಿಗೆ ಮಾತನಾಡಿ ಸ್ವದೇಶಿ ವಸ್ತುಗಳನ್ನು ಬಳಸುವುದರ ಮೂಲಕ ದೇಶದಲ್ಲಿ ತಯಾರಾ ಉತ್ಪಾದನೆಗಳಿಗೆ ಆದ್ಯತೆ ನೀಡುವುದರಿಂದ ಭಾರತೀಯ ಉತ್ಪಾದಕರು, ಕುಶಲಕರ್ಮಿಗಳು ಹಾಗೂ ರೈತರನ್ನು ಪ್ರೋತ್ಸಾಹ ಮಾಡಿದಂತಾಗುತ್ತದೆ. ದೇಶದ ಆರ್ಥಿಕ ಬಲವರ್ಧನೆಗೆ ಮುಖ್ಯ ಪಾತ್ರ ವಹಿಸುವ ಜತೆಗೆ ದೇಶೀಯ ಕೈಗಾರಿಕೆಗಳು ಬಲಗೊಂಡು ಹೊಸ ಉದ್ಯೋಗಗಳು ಸೃಷ್ಠಿಯಾಗಿ ದೇಶದ ಆರ್ಥಿಕತೆಗೆ
ಲಾಭವಾಗುತ್ತದೆ ಎಂದರು.

ಆಮದು ಕಡಿಮೆಯಾಗಿ ವಿದೇಶಿ ಅವಲಂಬನೆ ಕಡಿಮೆ ಆಗುವುದರ ಜತೆಗೆ ದೇಶವು ಸ್ವಾವಲಂಬನೆಯತ್ತ ಸಾಗಿ ಸ್ಥಳೀಯ ಕಲೆ ಹಾಗೂ ಸಂಸ್ಕೃತಿಯ ಅನಾವರಣವಾಗುವುದರ ಜತೆಗೆ ಕುಶಲ ಕರ್ಮಿಗಳು ಮತ್ತು ಸಾಂಪ್ರಾದಾಯಿಕ ಕಲೆಗಳಿಗೆ ಮನ್ನಣೆ ಸಿಗುತ್ತದೆ ಎಂದರು.

ಸೈಕಲ್ ಜಾಥಾದಲ್ಲಿ ಒಟ್ಟು 15 ಸದಸ್ಯರಿದ್ದು ವಿವಿಧ ರಾಜ್ಯಗಳಿಗೆ ಸೇರಿದವರಾಗಿದ್ದು ದೇಶದ ಐಕ್ಯತೆಗೆ
ನಾವುಗಳು ಒಗ್ಗೂಡಿ ರಾಜ್ಯಾದ್ಯಂತ ಸುಮಾರು 3500 ಕಿ.ಮೀ. ಗೂ ಹೆಚ್ಚು ಸೈಕಲ್ ಜಾಥಾ ನಡೆಸಿ ಸ್ಥಳೀಯರಿಗೆ
ಸ್ವದೇಶಿ ಬಳಕೆ ಅರಿವು ಮೂಡಿಸಿ ಜಾಗೃತಿಗೊಳಿಸುತ್ತಿರುವುದಾಗಿ ತಿಳಿಸಿದರು.

ಸೈಕಲ್ ಜಾಥಾ ತಂಡದ ಸದಸ್ಯರಾದ ಮೇಜರ್ ಜನರಲ್ ಎ.ವಿ.ಕೆ.ಮೋಹನ್, ರಮೇಶ್ ನರಸಯ್ಯ, ನಿವೃತ್ತ ಯೋಧ ವೇದಮೂರ್ತಿ, ಮೀರಾರಾಮ್ ನಾರಾಯಣ್, ಮಿತ್ರ ಶೆಣೈ, ದೆಹಲಿ ಮೂಲದ 77 ವರ್ಷದ ವಯೋಮಾನದ ಅಶೋಕ್ ಗುಲಾಟೆ ಹಾಗೂ ಚೆನೈ ಮೂಲಕ ಕರ್ನಲ್ ಕಂದಸ್ವಾಮಿ ಇತರರು ಭಾಗವಹಿಸಿದ್ದರು.

ಈ ವೇಳೆ ಮಾಜಿ ಸೈನಿಕರ ಸಂಘದ ಜಿಲ್ಲಾಧ್ಯಕ್ಷ ಮಲ್ಲರಾಜು, ಕರ್ನಾಟಕ ಮಾಜಿ ಸೈನಿಕರ ಗೌರವಾಧ್ಯಕ್ಷ
ಸಿಪಾಯಿ ಶ್ರೀನಿವಾಸ್, ಮಾಜಿ ಸೈನಿಕರಾದ ಚೌಡೇಗೌಡ, ಶಿವಲಿಂಗಯ್ಯ, ಬಸವರಾಜು, ವೆಂಕಟರಾಮು, ಕೆ.ಟಿ.ಚಂದ್ರು ಸೇರಿದಂತೆ ಮುಖಂಡರಾದ ಸುರೇಶ್, ಪ್ರತಾಪ್, ಎಂ.ಶ್ರೀನಿವಾಸ್, ತಮ್ಮಣ್ಣ ಇತರರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ