Thursday, November 19, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಮಣಿಪುರಿ ನೃತ್ಯದಲ್ಲಿ ಉಷಾರಾಣಿ ಪ್ರಥಮ

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಮಂಡ್ಯ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಮಂಡ್ಯ ತಾಲ್ಲೂಕಿನ ಬೇಲೂರು ಸರ್ಕಾರಿ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿ ಐದನೇ ಬಾರಿಗೆ ಮಣಿಪುರಿ ನೃತ್ಯದಲ್ಲಿ ಪ್ರಥಮ ಸ್ಥಾನ ಪಡೆದು, ರಾಜ್ಯ ಮಟ್ಟದ ಸ್ಫರ್ಧೆಗೆ ಅರ್ಹತೆ ಗಳಿಸಿ ಅಲ್ಲಿಯೂ ಬಹುಮಾನವನ್ನು ಪಡೆದಿದ್ದಾರೆ.

ಉಷಾರಾಣಿ ಮತ್ತು ಚನ್ನರೇವಮ್ಮ ಅವರ ತಂಡವು ಜನಪದ ನೃತ್ಯದಲ್ಲಿ ಪ್ರಥಮ ಬಾರಿಗೆ ಬಂಜಾರ ನೃತ್ಯ ಹಾಗೂ ಲಂಬಾಣಿ ಸಮುದಾಯದ ನೃತ್ಯವನ್ನು ಪ್ರದರ್ಶನ ನೀಡಿ ಪ್ರೇಕ್ಷಕರ ಗಮನ ಸೆಳೆಯಿತು. ತಂಡದಲ್ಲಿ ಲತಾಮಣಿ, ಸುರೇಖ.ಪಿ., ಶೋಭ, ಮಾನಸ, ಜ್ಯೋತಿ, ಕೋಮಲ, ಸುಕನ್ಯ ಸಂಗಾಳ್, ಮಮತ ನೃತ್ಯವನ್ನು ಪ್ರದರ್ಶನ ನೀಡಿದರು. ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಮಂಡ್ಯ ಜಿಲ್ಲಾ ಅಧ್ಯಕ್ಷ ಶಂಭುಗೌಡ ಬಹುಮಾನ ವಿತರಿಸಿದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ