ಏ.29 ಮತ್ತು 30 ರಂದು ಮದ್ದೂರು ತಾಲೂಕಿನ ಕಾಡುಕೊತ್ತನಹಳ್ಳಿ ಗ್ರಾಮದಲ್ಲಿ ಶ್ರೀವೀರಭದ್ರೇಶ್ವರಸ್ವಾಮಿ ದೇವಸ್ಥಾನ ಜೀರ್ಣೋದ್ಧಾರ ಮತ್ತು ಶ್ರೀಭೈರವೇಶ್ವರ (ಬೋರೇದೇವರು) ಪ್ರತಿಷ್ಟಾಪನಾ ಮಹೋತ್ಸವ ನಡೆಯಲಿದೆ.
ಈ ಕುರಿತು ಶ್ರೀವೀರಭದ್ರೇಶ್ವರ ದೇವಾಲಯ ಜೀರ್ಣೋದ್ಧಾರ ಸಮಿತಿ ಪ್ರಕಟಣೆ ನೀಡಿದ್ದು, ಏ.29 ರಂದು ಶ್ರೀವೀರಭದ್ರಸ್ವಾಮಿ ಹಾಗೂ ಭೈರವೇಶ್ವರಸ್ವಾಮಿಗೆ ಪುಣ್ಯಹ.ವಾಚನ ಹಾಗೂ ಗಂಗಾಕ್ಷೀರ ಜಲ ಹಾಗೂ ಗಣಪತಿ ಹೋಮ, ರಕ್ಷಾಬಂಧನ ಸೇರಿದಂತೆ ವಿವಿಧ ಹೋಮಗಳು, ಪೂಜೆ, ಮಹಾಮಂಗಳಾರತಿ ನಡೆಯಲಿದೆ.
ಏ.30 ರಂದು ಬೆಳಗ್ಗೆ 5.30ರಿಂದ 6.20ರೊಳಗೆ ದೇವರ ಪ್ರತಿಷ್ಟಾಪನಾ ನಂತರ ಪ್ರಾಣ ಪ್ರತಿಷ್ಟಾಪನಾ ಮತ್ತು ಪೂರ್ಣಾಹುತಿ ಹೋಮದೊಡನೆ ಕಳಸ ಸ್ಥಾಪನೆ ನಡೆಯಲಿದೆ. 10 ಗಂಟೆಗೆ ಧ್ವಜಾರೋಹಣ ಮತ್ತು ತೀರ್ಥ ಪ್ರಸಾದ ವಿನಿಯೋಗ ನಡೆಯಲಿದೆ.
ಬೆಳಗ್ಗೆ 11 ಗಂಟೆಗೆ ಶ್ರೀಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ. ನಿರ್ಮಲಾನಂದನಾಥ ಮಹಾ ಸ್ವಾಮೀಜಿ, ಮೈಸೂರು ರಾಜವಂಶಸ್ಥ ಹಾಗೂ ಸಂಸದ ಯಧುವೀರ ಶ್ರೀಕಂಠದತ್ತ ಚಾಮರಾಜ ಒಡೆಯರ್, ಕನಕಪುರ ದೇಗುಲಮಠದ ಡಾ.ಮುಮ್ಮಡಿ ನಿರ್ವಾಣ ಮಹಾಸ್ವಾಮೀಜಿ, ಹುಲ್ಲಹಳ್ಳಿ ಶ್ರೀಶಾಂತಮಲ್ಲಿಕಾರ್ಜುನ ಕ್ಷೇತ್ರ ವಿರಕ್ತಮಠದ ಶ್ರೀಇಮ್ಮಡಿ ಚನ್ನಮಲ್ಲದೇಶಿ ಕೇಂದ್ರ ಸ್ವಾಮೀಜಿ, ಬೆಂಗಳೂರು ವಿಜಯನಗರದ ಆದಿಚುಂಚನಗಿರಿ ಮಠದ ಶ್ರೀಸೌಮ್ಯನಾಥ ಸ್ವಾಮೀಜಿ, ಉಪ್ಪನಹಳ್ಳಿ ಗುರುಮಠದ ಮಹೇಶ್ ಬುದ್ದಿ ಆರಾಧ್ಯರು, ಸುನಿಲ್ ಆರಾಧ್ಯರು ಭಾಗವಹಿಸಲಿದ್ದಾರೆ. ಅರ್ಚಕರಾದ ಪಂಚಲಿಂಗಯ್ಯ, ಪುಟ್ಟಸ್ವಾಮಿ ಹಾಗೂ ಸ್ವಾಮಿ ನೇತೃತ್ವದಲ್ಲಿ ಪೂಜಾ ಕೈಂಕರ್ಯಗಳು ನೆರವೇರಲಿದೆ.
ಶಾಸಕ ಕೆ.ಎಂ.ಉದಯ ಅವರು ಧಾರ್ಮಿಕ ಸಭೆಯ ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಸಚಿವರಾದ ಚೆಲುವರಾಯಸ್ವಾಮಿ, ರಾಮಲಿಂಗರೆಡ್ಡಿ, ಶಾಸಕರಾದ ಮಧು ಜಿ.ಮಾದೇಗೌಡ, ದಿನೇಶ್ ಗೂಳಿಗೌಡ, ವಿವೇಕಾನಂದ, ಮಾಜಿ ಎಂಎಲ್‌ಸಿ ಡಿ.ಎಸ್.ವೀರಯ್ಯ, ಎಸ್‌ಕೆಡಿಆರ್‌ಡಿಪಿ ಸುವರ್ಣ ಗಣಪತಿ ಭಟ್, ಮಾಜಿ ಸಚಿವ ಡಿ.ಸಿ.ತಮ್ಮಣ್ಣ, ಜಿಲ್ಲಾ ಪರಿಷತ್ ಮಾಜಿ ಅಧ್ಯಕ್ಷ ಬಿ.ಬಸವರಾಜು, ಜಿಲ್ಲಾ ಬಿಜೆಪಿ ಮುಖಂಡರಾದ ಎಸ್.ಪಿ.ಸ್ವಾಮಿ, ಎಂ.ಆರ್.ಉಮಾಪತಿ, ಸಮಾಜ ಸೇವಕರಾದ ನಂಜುಂಡಪ್ಪ, ಸಿ.ರಾಮು, ಪ್ರೇಮ ಯುವರಾಜು, ಬಿಬಿಎಂಪಿ ಮಾಜಿ ಉಪ ಮಹಾಪೌರರಾದ ಲಕ್ಷ್ಮೀನಾರಾಯಣ ಸೇರಿದಂತೆ ಇತರರು ಭಾಗವಹಿಸಲಿದ್ದಾರೆ.
ಜಿಲ್ಲಾಧಿಕಾರಿ ಡಾ.ಕುಮಾರ್, ಜಿಪಂ ಸಿಇಒ ಕೆ.ಆರ್.ನಂದಿನಿ, ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ತಹಸೀಲ್ದಾರ್ ಡಾ.ಸ್ಮಿತಾರಾಮ್, ಕೆ.ಎಂ.ದೊಡ್ಡಿ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಆನಂದ್ ವಿಶೇಷ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಮಧ್ಯಾಹ್ನ 12 ಗಂಟೆಗೆ ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ 8.30 ಕ್ಕೆ ಶ್ರೀವೀರಭದ್ರೇಶ್ವರ ಕಲಾ ಸಂಘದವರಿಂದ ದಕ್ಷಯಜ್ಞ ಅಥವಾ ವೀರಭದ್ರನ ಜನನ ನಾಟಕ ಏರ್ಪಡಿಸಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ದೇವರ ಕೃಪೆಗೆ ಪಾತ್ರರಾಗಬೇಕು ಎಂದು ಗ್ರಾಮದ ಎಲ್ಲ ಕೋಮಿನ ಯಜಮಾನರು ಮನವಿ ಮಾಡಿದ್ದಾರೆ.




