Friday, November 20, 2026

ಪ್ರಾಯೋಗಿಕ ಆವೃತ್ತಿ

ಅನ್ನದಾನಿ ವಿರುದ್ಧ ವಿಡಿಯೋ | ರಾಜಕೀಯ ಪಿತೂರಿ : ಜೆಡಿಎಸ್ ಮುಖಂಡರ ಸ್ಪಷನೆ

ಮಾಜಿ ಶಾಸಕ ಡಾ. ಕೆ. ಅನ್ನದಾನಿ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಹರಿದಿರುವ ವಿಡಿಯೋ ಕೇವಲ ರಾಜಕೀಯ ಪಿತೂರಿಯ ಭಾಗ ಎಂದು ಜೆಡಿಎಸ್ ಮುಖಂಡರು ಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು.

ಮಳವಳ್ಳಿಯ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಹನುಮಂತ ಮಾತನಾಡಿ, “ಸುಮಾರು 25 ದಿನಗಳ ಹಿಂದೆ ವ್ಯಕ್ತಿಯೊಬ್ಬ ಚಿತ್ರೀಕರಿಸಿದ ವಿಡಿಯೋ ಮೂಲಕ ನಮ್ಮ ನಾಯಕರನ್ನು ಕಳಂಕಗೊಳಿಸಲು ಯತ್ನಿಸಲಾಗಿದೆ. ಆದರೆ ಇಂತಹ ಸುಳ್ಳು ಪ್ರಚಾರಗಳಿಂದ ಜನರ ವಿಶ್ವಾಸ ಕುಸಿಯುವುದಿಲ್ಲ. ಅಗತ್ಯವಿದ್ದರೆ ನಾವು ಕಾನೂನು ಹೋರಾಟಕ್ಕೂ ಸಿದ್ಧರಾಗಿದ್ದೇವೆ” ಎಂದು ಎಚ್ಚರಿಸಿದರು.

ಮಳವಳ್ಳಿ ತಾಲೂಕು ಎಸ್‌ಸಿ–ಎಸ್‌ಟಿ ಘಟಕದ ಅಧ್ಯಕ್ಷ ಬಿ.ಎಂ. ಕಾಂತರಾಜು ಮಾತನಾಡಿ, “ಡಾ. ಅನ್ನದಾನಿ ಅವರ ಮೂರು ದಶಕಗಳ ಸಾರ್ವಜನಿಕ ಜೀವನದಲ್ಲಿ ಯಾವುದೇ ಕಪ್ಪುಚುಕ್ಕೆ ಇಲ್ಲ. ಈ ವಿಡಿಯೋ ಸಂಪೂರ್ಣ ಸುಳ್ಳು ಮತ್ತು ರಾಜಕೀಯವಾಗಿ ರೂಪಿಸಲಾದ ಪಿತೂರಿ. ಮಳವಳ್ಳಿಯ ವಾಟ್ಸಾಪ್‌ ಗುಂಪಿಗೆ ಹೊರಗಿನ ವ್ಯಕ್ತಿಯನ್ನು ಸೇರಿಸಿ ಆತನ ಮೂಲಕ ಈ ವಿಡಿಯೋ ಅಪ್ಲೋಡ್ ಮಾಡಲಾಗಿದೆ. ಆತನ ವಿರುದ್ಧ ಈಗಾಗಲೇ ಎರಡು ಎಫ್‌ಐಆರ್‌ ದಾಖಲಾಗಿವೆ. ಬೆಂಗಳೂರು ನ್ಯಾಯಾಲಯದ ಆದೇಶದ ಮೇರೆಗೆ ವಿಡಿಯೋ ಅಳಿಸಲಾಗಿದೆ. ಜೊತೆಗೆ ಮಾನಹಾನಿ ಮೊಕದ್ದಮೆ ಹೂಡಲು ಕ್ರಮ ಕೈಗೊಂಡಿದ್ದೇವೆ” ಎಂದು ಅವರು ವಿವರಿಸಿದರು.

ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ಸಿದ್ದರಾಜು ಸಿದ್ದಾಚಾರಿ ಹಾಗೂ ಚೇತನ್ ನಾರಾಯಣ್ ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ