ಮಂಡ್ಯ ನಗರದ ಕಾರಿಮನೆ ಗೇಟ್ ಬಳಿ ಇರುವ ಪಟ್ಟಲದಮ್ಮ ದೇವಾಲಯದಲ್ಲಿ ಸ್ವಾಭಿಮಾನಿ ಪಡೆ ಅಭಿಮಾನಿಗಳು ಮಂಡ್ಯ ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಕೆ.ಎಸ್. ವಿಜಯ್ ಆನಂದ್ ಗೆಲುವಿಗೆ ಪ್ರಾರ್ಥಿಸಿ ಚಂಡಿಕಾ ಹೋಮ ನೆರವೇರಿಸಿದರು.
ಸ್ವಾಭಿಮಾನಿ ಪಡೆಯ ಅಭಿಮಾನಿ ಲೋಕೇಶ್ ಮಾತನಾಡಿ, ಕೆ.ವಿ ಶಂಕರಗೌಡ ಅವರ ಕುಟುಂಬ ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ಮರು ಜೀವ ಪಡೆಯುವಂತಾಗಲಿ ಎನ್ನುವ ಉದ್ದೇಶದಿಂದ ಚಂಡಿಕಾ ಹೋಮ ನಡೆಸಿದ್ದೇವೆ. ಸ್ವಾಭಿಮಾನಿ ಪಡೆ ಅಭ್ಯರ್ಥಿ ವಿಜಯ್ ಆನಂದ್ ಪರವಾಗಿ ಜನರು ಸ್ವಯಂ ಪ್ರೇರಿತರಾಗಿ ಬಂದು ಆಶೀರ್ವಾದ ಮಾಡುತ್ತಿದ್ದಾರೆ.ಅವರಿಗೆ ಈ ಚಂಡಿಕಾ ಹೋಮದಿಂದ ದೇವರ ಅನುಗ್ರಹ ಸಿಗಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಹಮಾಮ್ ಸುರೇಶ್, ಅರುಣ್ ಕುಮಾರ್, ಕಿರಣ್, ಕುಮಾರ್, ಚಂದ್ರು, ನವೀನ್, ಶಿವರಾಜ್, ನಿಂಗೇಗೌಡ ಕಲ್ಲಹಳ್ಳಿ, ಚಂದ್ರಶೇಖರ್, ಸತೀಶ್ ಮಹೇಶ್ ಸೇರಿದಂತೆ ಹಲವಾರು ಮಂದಿ ಭಾಗವಹಿಸಿದ್ದರು.




