ವಿದ್ಯಾರ್ಥಿಗಳಲ್ಲಿನ ಸುಪ್ತ ಪ್ರತಿಭೆಯು ಉತ್ತಮ ರೀತಿಯಲ್ಲಿ ಅನಾವರಣಗೊಳ್ಳಲಿ, ಪ್ರತಿಭಾನ್ವೇಷಣಯಿಂದ ಭವಿಷ್ಯಕ್ಕೆ ಸಹಕಾರಿ ಎಂದು ಪಿಇಟಿ ಅಧ್ಯಕ್ಷ ವಿಜಯ ಆನಂದ ಹೇಳಿದರು.
ಮಂಡ್ಯ ನಗರದ ಪಿಇಎಸ್ ಸ್ವಾಮಿ ವಿವೇಕಾನಂದ ರಂಗಮಂದಿರದಲ್ಲಿ ಜನತಾ ಶಿಕ್ಷಣ ಟ್ರಸ್ಟ್, ಪಿಇಎಸ್ ವಿಜ್ಞಾನ, ಕಲಾ ಮತ್ತು ವಾಣಿಜ್ಯ ಕಾಲೇಜು ಆಯೋಜಿಸಿದ್ದ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳ ಉದ್ಘಾಟನಾ ಸಮಾರಂಭ ಹಾಗೂ ಪ್ರತಿಭಾನ್ವೇಷಣ ಸ್ಪರ್ಧೆ ಮತ್ತು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಪ್ರತಿಭಾವಂತ ಪ್ರಜೆಗಳಿಂದ ಸಮಾಜಕ್ಕೆ ಅಪಾರ ಕೊಡುಗೆ ಇದೆ, ಉತ್ತಮ ಪ್ರಜೆಗಳಾಗಿ ರೂಪುಗೊಳ್ಳಿ, ಕನ್ನಡ ರಾಜ್ಯೋತ್ಸವ ನಮ್ಮೆಲ್ಲರ ಹಬ್ಬವಾಗಿದೆ, ಸಂಭ್ರಮದಿಂದ ಪಾಲ್ಗೊಂಡು ಸಾಧನೆಯತ್ತ ಮುಖಮಾಡಿ ಎಂದು ಸಲಹೆ ನೀಡಿದರು.
ಕರ್ನಾಟಕ ರಾಜ್ಯ ಉದಯವಾಗಿ 68 ವರ್ಷಗಳಾಗಿದ್ದು, ಮರುನಾಮಕರಣಗೊಂಡು 50 ವರ್ಷವಾಗಿದೆ, ಈ ನಾಡು ಪುಣ್ಯಭೂಮಿ, ನಾಡು ಕಟ್ಟಲು ಅಪಾರ ಜನರ ಶ್ರಮ ಕೊಡುಗೆ ಇದೆ, ಹೆಸರಾದಂತ ಸಾಹಿತಿಗಳು, ರಾಜಕರಣಿಗಳು, ವಿಜ್ಞಾನಿಗಳು, ಅಧಿಕಾರಿಗಳು ಕೊಟ್ಟಂತಹ ಕೊಡುಗೆ ಅಪಾರವಾಗಿದೆ, ಸಾಂಸ್ಕೃತಿಕ ಸೋಗಡೇ ಮಾದರಿಯಾಗಿದೆ ಎಂದು ನುಡಿದರು.
ಪಿಇಟಿ ಜಂಟಿ ಕಾರ್ಯದರ್ಶಿ ಕೆ.ಆರ್.ದಯಾನಂದ ಮಾತನಾಡಿ, ಕಾರ್ಯಕ್ರಮದ ಉದ್ದೇಶ ಇಷ್ಟೆ, ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಯನ್ನು ಅನ್ವೇಸಿಸುವುದು, ಓದಿನೊಂದಿ ಸಾಂಸ್ಕೃತಿಕ ಅಭಿರುಚಿ, ಕೀಡಾಸಕ್ತಿ ಹೆಚ್ಚಿಸುವುದುದಾಗಿದೆ, ಎಲ್ಲಾ ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಂಡು, ಉತ್ತಮ ಪ್ರತಿಭಾವಂತರಾಗಿ ಬೆಳೆಯಿರಿ ಎಂದು ಕಿವಿಮಾತೇಳಿದರು.
ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಮಂಜುನಾಥ್, ಕಾಲೇಜು ವಿದ್ಯಾರ್ಥಿಗಳು ಸಮಯ ಪ್ರಜ್ಞೆಯನ್ನು ಬೆಳೆಸಿಕೊಳ್ಳಬೇಕು, ಸಮಯದೊಂದಿಗೆ ಓದು, ಜೀವನ ಕಟ್ಟಿಕೊಳ್ಳುವ ಸುಜ್ಞಾನ ನಿಮ್ಮಲ್ಲಿದ್ದರೆ ಯಶಸ್ಸಿಗೆ ರಹದ್ದಾರಿ ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಪಿಇಎಸ್ ವಿಜ್ಞಾನ, ಕಲಾ ಮತ್ತು ವಾಣಿಜ್ಯ ಕಾಲೇಜು ವಿದ್ಯಾರ್ಥಿ ಕ್ಷೇಮಪಾಲಾನಾಧಿಕಾರಿ ಪ್ರೊ. ಎಸ್.ಕೆ.ವೀರೇಶ್, ಸಾಂಸ್ಕೃತಿಕ ಸಮಿತಿ ಸಂಚಾಲಕಿ ಡಾ.ವಿ.ಸವಿತಾ, ದೈಹಿಕ ಶಿಕ್ಷಣ ನಿರ್ದೇಶಕ ಡಾ.ಆರ್.ರಮೇಶ್, ಕೆ.ಎಂ.ಮಹೇಶ್ಕುಮಾರ್, ಉಪನ್ಯಾಸಕ ನಂದೀಶ್ ಮತ್ತು ಅಧ್ಯಾಪಕ ವೃಂದ ಹಾಜರಿದ್ದರು.




