ಹೊಸ ವರ್ಷವೆಂದರೆ ಸಾಮಾನ್ಯವಾಗಿ ಗುಂಡು, ತುಂಡಿನ ಮೋಜು-ಮಸ್ತಿ ಸಾಮಾನ್ಯವಾಗಿರುತ್ತದೆ. ಆದರೆ ನಾಗಮಂಗಲ ತಾಲ್ಲೂಕು ಬೆಳ್ಳೂರು ಹೋಬಳಿಯ ಅಂಬಲ ಜೀರಹಳ್ಳಿ ಗ್ರಾಮಸ್ಥರು ಒಟ್ಟಾಗಿ ಸೇರಿ ಮಂಗಳವಾರ ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ಸಂಘಟಿಸುವ ಮೂಲಕ ಹೊಸ ವರ್ಷ ಸ್ವಾಗತಕ್ಕೆ ಸಿದ್ದರಾಗಿದ್ದಾರೆ.
ಹೊಸ ವರ್ಷದ ನೆಪದಲ್ಲಿ ಇಡೀ ಗ್ರಾಮವೇ ಸಾಂಸ್ಕೃತಿಕವಾಗಿಯೂ ಕಾರ್ಯಕ್ರಮಕ್ಕೆ ವೇದಿಕೆ ಮಾಡಿಕೊಂಡು, ಗ್ರಾಮಸ್ಥರೆಲ್ಲ ಒಂದೆಡೆ ಸೇರಿ ಅಪರೂಪದ ಮತ್ತು ಅರ್ಥಪೂರ್ಣ ಸಮಾರಂಭ ನಡೆಸಿದರು.ಸಾಕ್ಷಿಯಾಯಿತು.

ಸಾಮಾನ್ಯವಾಗಿ ಹೊಸ ವರ್ಷ ಆಚರಣೆಯೆಂದರೆ ಗುಂಡು – ತುಂಡು ಪಾರ್ಟಿ ಎನ್ನುವ ಇತ್ತೀಚಿನ ದಿನಗಳಲ್ಲಿ ಇದಕ್ಕೆ ಅಪವಾದವೆನ್ನುವಂತೆ ಇಡೀ ಗ್ರಾಮಸ್ಥರೆಲ್ಲ ಊರಿನ ಶಾಲಾ ಆವರಣದಲ್ಲಿ ಸೇರಿ ಹಾಡು – ನೃತ್ಯ ಮಾಡಿದರು. ಅಲ್ಲದೆ ಜಾನಪದ ಗೀತೆ, ಭಾವಗೀತೆ ಮತ್ತು ಚಲನಚಿತ್ರ ಗೀತೆಗಳನ್ನು ಹಾಡಿ ಕುಣಿದು ಕುಪ್ಪಳಿಸಿದರು.
ಜಾನಪದ ವಿದ್ವಾಂಸ ಡಾ.ಜೀಶಂಪ ಅವರ ಹುಟ್ಟೂರಾದ ಅಂಬಲ ಜೀರಹಳ್ಳಿ ಮೊದಲಿನಿಂದಲೂ ಜಾನಪದ ಕಲೆಗಳ ತವರೂರಾಗಿದ್ದು, ಹಿರಿಯ ಜಾನಪದ ಹಾಡುಗಾರ್ತಿಯರಾದ ಗೌರಮ್ಮ, ಸಾವಿತ್ರಮ್ಮ ಮತ್ತು ಇತರರು ಭೈರವ ಹಾಗೂ ಇತರೆ ಜಾನಪದ ಹಾಡುಗಳನ್ನು ಹಾಡಿದರು. ಮ್ಯುಸಿಕಲ್ ಛೇರ್, ಮಡಿಕೆ ಹೊಡಿಯುವುದೂ ಸೇರಿದಂತೆ ಹಲವು ಆಟಗಳನ್ನು ಆಡಿದರು.




