Thursday, November 19, 2026

ಪ್ರಾಯೋಗಿಕ ಆವೃತ್ತಿ

ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ : ‘ವಿಶ್ವಕರ್ಮ’ ಎಂದು ನಮೂದಿಸಲು ಮನವಿ

ರಾಜ್ಯದಲ್ಲಿ ಹಿಂದುಳಿದ ಆಯೋಗದಿಂದ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ ಹಮ್ಮಿಕೊಂಡಿದ್ದು, ವಿಶ್ವಕರ್ಮ ಸಮುದಾಯದ ಬಂಧುಗಳು ಸಮೀಕ್ಷೆಯಲ್ಲಿ ವಿಶ್ವಕರ್ಮ ಎಂದು ಸ್ಪಷ್ಟವಾಗಿ ನಮೂದಿಸಬೇಕು ಎಂದು ಮಂಡ್ಯ ಜಿಲ್ಲಾ ವಿಶ್ವಕರ್ಮ ಸಮಾಜ ಸೇವಾ ಟ್ರಸ್ಟ್ನ ಅಧ್ಯಕ್ಷ ವಿ.ಪ್ರಕಾಶ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 5 ಬಗೆಯ ವೃತ್ತಿಯನ್ನು ನಡೆಸುವ ವಿಶ್ವಕರ್ಮ ಸಮುದಾಯದವರು ತಮ್ಮ ವೃತ್ತಿಯನ್ನು ಸೇರಿಸಿ ಸಮೀಕ್ಷೆಯಲ್ಲಿ ನಮೂದಿಸಬಾರದು. ಇದರಿಂದ ಗೊಂದಲ ಉಂಟಾಗಲಿದೆ ಎಂದರು.

ಹಿ<ದುಳಿದ ವರ್ಗದಲ್ಲಿ 108 ಜಾತಿಗಳಿದ್ದು, ಸಮುದಾಯಕ್ಕೆ ಸೂಕ್ತ ಸರಕಾರಿ ಸೌಲಭ್ಯಗಳು ದೊರೆಯುತ್ತಿಲ್ಲ. ಕಳೆದ ಸಮೀಕ್ಷೆಯ ವರದಿಯಲ್ಲಿ ಸಮುದಾಯದ ಜನಸಂಖ್ಯೆ 8 ಲಕ್ಷದಷ್ಟು ಮಾತ್ರ ತೋರಿಸಿದ್ದಾರೆ. ಆದರೆ ಮಂಡ್ಯ ಜಿಲ್ಲೆಯಲ್ಲಿ ಮಾತ್ರವೇ 1 ಲಕ್ಷಕ್ಕೂ ಅಧಿಕ ಜನಸಂಖ್ಯೆಯಿದ್ದು, ರಾಜ್ಯದಲ್ಲಿ 35 ಲಕ್ಷಕ್ಕೂ ಹೆಚ್ಚು ಜನಸಂಖ್ಯೆಯಲ್ಲಿ ವಿಶ್ವಕರ್ಮರು ಇದ್ದೇವೆ. ಆದ್ದರಿಂದ ವಿಶ್ವಕರ್ಮದ ಜನಾಂಗದವರು ಸಮೀಕ್ಷೆಯಲ್ಲಿ ಕಾಲಂ ಸಂಖ್ಯೆ 9ರಲ್ಲಿ ತಪ್ಪದೇ ವಿಶ್ವಕರ್ಮ ಎಂದು ತಪ್ಪದೇ ನಮೂದಿಸಬೇಕು ಎಂದು ಮನವಿ ಮಾಡಿದರು.

ಗೋಷ್ಠಿಯಲ್ಲಿ ಗೌರವ ಅಧ್ಯಕ್ಷ ವೈ.ಡಿ.ಶ್ರೀನಿವಾಸಮೂರ್ತಿ, ಉಪಾಧ್ಯಕ್ಷ ದೇವರಾಜು, ಮಾಜಿ ಅಧ್ಯಕ್ಷ ಸತೀಶ್, ನಿರ್ದೇಶಕ ಹೆಚ್.ವಿ.ಪ್ರಕಾಶ್, ಕುಮಾರ್ ಇದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ