Tuesday, November 24, 2026

ಪ್ರಾಯೋಗಿಕ ಆವೃತ್ತಿ

ನಾಗಮಂಗಲ | ವಿಶ್ವಕರ್ಮ ಸಮಾಜದ ಅಧ್ಯಕ್ಷರಾಗಿ ಈರಚಾರ್ ಆಯ್ಕೆ

ನಾಗಮಂಗಲ ತಾಲ್ಲೂಕಿನ ವಿಶ್ವಕರ್ಮ ಸಮಾಜದ ಅಧ್ಯಕ್ಷರಾಗಿ ಈರಚಾರ್ ಆಯ್ಕೆಯಾದರು.

ಮುಂದಿನ ಮೂರು ವರ್ಷಗಳ ಆಡಳಿತದ ಮಂಡಳಿ ಅಧ್ಯಕ್ಷರ ಸ್ಥಾನಕ್ಕೆ ಮಣ್ಣಹಳ್ಳಿ ಈರಚಾರ್, ಕೃಷ್ಣಚಾರ್ ಮತ್ತು ಕುಮಾರ್ ಮಾಡಿದ್ದರು. ಈ ಪೈಕಿ ಈರಚಾರ್ 98ಮತಗಳನ್ನು ಪಡೆದು ಜಯಗಳಿಸಿದರು.

ಕೃಷ್ಣಚಾರ್ 95 ಮತ ಹಾಗೂ ಕುಮಾರ್ 14 ಮತಗಳನ್ನು ಪಡೆದು ಪರಾಜಿತರಾದರು.

ತ್ರಿಕೋನ ಸ್ಪರ್ಧೆಯಲ್ಲಿ ಈರಚಾರ್  3 ಮತಗಳ ಅಂತರದಲ್ಲಿ ಗೆಲುವು ಕಂಡರು. ಗೌರವಧ್ಯಕ್ಷರಾಗಿ ಮಂಜುನಾಥ್ ಚಾರ್, ಸಂಘಟನಾ ಕಾರ್ಯದರ್ಶಿ ಎಂ ಕೆ ಕಾಳಚಾರಿ, ಶ್ರೀನಿವಾಸ್ ಚಾರ್, ರಂಗಚಾರಿ, ಎನ್ ಎಸ್ ಸಂತೋಷ, ವರದಾಚಾರಿ ಸೇರಿದಂತೆ ಒಟ್ಟು 18ಸದಸ್ಯರು ಆಯ್ಕೆ ಆದರು.

ಈ ಸಂದರ್ಭದಲ್ಲಿ ಅಧ್ಯಕ್ಷ ಈರಚಾರ್ ಮಾತನಾಡಿ, ನನ್ನ ಮೇಲೆ ನಂಬಿಕೆ ಇಟ್ಟು ನನಗೆ ಮತ ನೀಡಿ ಗೆಲ್ಲಿಸಿದದವರ ಪ್ರೀತಿ ವಿಸ್ವಾಸಕ್ಕೆ ಸದಾ ಋಣಿ ಆಗಿರುತ್ತೇನೆ, ಸಂಘದ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ