Saturday, November 21, 2026

ಪ್ರಾಯೋಗಿಕ ಆವೃತ್ತಿ

ನೀರು ಬಿಟ್ಟಿದ್ದು ಬೆಂಗಳೂರಿಗೆ ಹೊರತು, ತಮಿಳುನಾಡಿಗಲ್ಲ: ನೀರಾವರಿ ಇಲಾಖೆ ಸ್ಪಷನೆ

ಕೆಆರ್’ಎಸ್ ಅಣೆಕಟ್ಟೆಯಿಂದ ಕಾವೇರಿ ನದಿಗೆ ನೀರು ಬಿಟ್ಟಿರುವುದು ನಿಜ. ಆದರೆ, ಆ ನೀರನ್ನು ಬೆಂಗಳೂರಿನಲ್ಲಿ ಉಂಟಾಗಿರುವ ನೀರಿನ ಅಭಾವವನ್ನು ನೀಗಿಸಲು ಹರಿಸಲಾಗಿದೆಯೇ ಹೊರತು, ಕೆಲವರು ಆರೋಪಿಸಿರುವಂತೆ ನೆರೆಯ ತಮಿಳುನಾಡಿಗಲ್ಲ ಎಂದು ಕೆಆರ್’ಎಸ್ ಆಧುನೀಕರಣ ಮತ್ತು ಮಧ್ಯಮ ನೀರಾವರಿ ಯೋಜನಾ ವೃತ್ತದ ಅಧೀಕ್ಷಕರ ಇಂಜಿನಿಯರ್ ರಘುರಾಮ್ ಹಾಗೂ ಮುಖ್ಯ ಇಂಜಿನಿಯರ್ ಆರ್.ಎಲ್.ವೆಂಕಟೇಶ್ ಅವರು ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ್ದಾರೆ.

ಈ ಕುರಿತು ಮಾಧ್ಯಮಗಳಿಗೆ ಪ್ರಕಟಣೆಯೊಂದನ್ನು ಬಿಡುಗಡೆ ಮಾಡಿರುವ ಅವರು, ಬೆಂಗಳೂರು ನಗರಕ್ಕೆ ಕುಡಿಯಲು ನೀರನ್ನು ಸರಬರಾಜು ಮಾಡುವ ಉದ್ದೇಶಕ್ಕಾಗಿ ಮಳವಳ್ಳಿ ತಾಲ್ಲೂಕಿನ ಶಿವಾ ಅಣೆಕಟ್ಟನ್ನು ಉಪಯೋಗಿಸಲಾಗುತ್ತಿದೆ. ಕಾವೇರಿ ನದಿಯಿಂದ ಬೆಂಗಳೂರು, ಮೈಸೂರು ಮತ್ತು ಇತರೆ ಪಟ್ಟಣ ಹಾಗೂ ಗ್ರಾಮಗಳಿಗೆ ಕುಡಿಯುವ ನೀರು ಹಾಗೂ ಕೈಗಾರಿಕೆಗೆ ನೀರು ಸರಬರಾಜು ಮಾಡಲು ಪ್ರತೀ ದಿನ ಒಟ್ಟಾರೆ 1000 ಕ್ಯೂಸೆಕ್ಸ್ ನಷ್ಟು ನೀರಿನ ಅವಶ್ಯಕತೆಯಿರುತ್ತದೆ ಎಂದು ತಿಳಿಸಿದ್ಧಾರೆ.

ಬೆಂಗಳೂರು ಜಲ ಮಂಡಳಿ (ಬಿ.ಡಬ್ಲ್ಯೂ.ಎಸ್.ಎಸ್.ಬಿ.) ರವರು ನೀಡಿರುವ ಮಾಹಿತಿಯಂತೆ ಮಳವಳ್ಳಿ ತಾಲ್ಲೂಕಿನ ಶಿವಾ ಅಣೆಕಟ್ಟೆಯ ಬಳಿಯಿಂದ ನೀರನ್ನು ತೊರೆಕಾಡನಹಳ್ಳಿವರೆಗೆ ಹರಿಸಿ, ತೊರೆಕಾಡನಹಳ್ಳಿಯಲ್ಲಿ ಸ್ಥಾಪಿಸಿರುವ ಜಲಸ್ಥಾವರ ಮುಖಾಂತರ ಸುಮಾರು 1470 ಎಂ.ಎಲ್.ಡಿ. (600 ಕ್ಯೂಸೆಕ್ಸ್ ನಷ್ಟು) ನೀರನ್ನು ಬೆಂಗಳೂರಿಗೆ ಸರಬರಾಜು ಮಾಡಲಾಗುತ್ತಿರುತ್ತದೆ. ದಿನಾಂಕ: 06.03.2024 ರಿಂದ 08.03.2024ರ ವರೆಗೆ ಶಿವಾ ಅಣೆಕಟ್ಟೆಯಲ್ಲಿನ ನೀರಿನ ಮಟ್ಟವು ದಿನದಿಂದ ದಿನಕ್ಕೆ ಗಣನೀಯವಾಗಿ ಕಡಿಮೆಯಾಗಿ ಅಣೆಕಟ್ಟೆಯ ಮೇಲ್ಬಾಗದಿಂದ 36 ಇಂಚಿನಷ್ಟು ಕೆಳಮಟ್ಟ ತಲುಪಿರುತ್ತದೆ. ಇದರಿಂದ, ಬೆಂಗಳೂರು ನಗರಕ್ಕೆ ಕುಡಿಯುವ ನೀರಿನ ಪ್ರಮಾಣವನ್ನು ಸರಬರಾಜು ಮಾಡಲು ವ್ಯತ್ಯಯವಾಗಿರುತ್ತದೆ ಎಂದು ವಿವರಿಸಿದ್ದಾರೆ.

ದಿನಾಂಕ:09.03.2024 ರಂದು ಬೆಂಗಳೂರು ಜಲ ಮಂಡಳಿ ಅಧಿಕಾರಿಗಳು, ಕೆ.ಆರ್.ಎಸ್. ಜಲಾಶಯಕ್ಕೆ ಭೇಟಿ ನೀಡಿ ನೀರಿನ ಹರಿವಿನ ಪ್ರಮಾಣವನ್ನು ಹೆಚ್ಚು ಮಾಡಲು ಕೋರಿರುತ್ತಾರೆ. ಅದರಂತೆ, ದಿನಾಂಕ: 09.03.2024 ರಂದು ಬೆಳಿಗ್ಗೆ 7.00 ಗಂಟೆಗೆ ಕೆ.ಆರ್.ಎಸ್. ಜಲಾಶಯದಿಂದ ನೀರನ್ನು ಹಂತ ಹಂತವಾಗಿ ಹೆಚ್ಚು ಮಾಡಿ, ಸುಮಾರು 4780 ಕ್ಯೂಸೆಕ್ಸ್ ಗಳಷ್ಟು ನೀರನ್ನು ಹರಿ ಬಿಡಲಾಗಿರುತ್ತದೆ. ನಂತರ, ಕೆ.ಆರ್.ಎಸ್. ಜಲಾಶಯದಿಂದ ಕಾವೇರಿ ಪಾತ್ರದುದ್ದಕ್ಕೂ ಬೆಂಗಳೂರು ಜಲ ಮಂಡಳಿ ಮತ್ತು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಜಂಟಿಯಾಗಿ ಸ್ಥಳ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿಸಿದ್ಧಾರೆ.

ಸಿ.ಡಿ.ಎಸ್. ಅಣೆಕಟ್ಟು, ರಾಮಸ್ವಾಮಿ ಅಣೆಕಟ್ಟು, ಮಾಧವಮಂತ್ರಿ ಆಣೆಕಟ್ಟು, ಮೇದಿನಿ ಅಣೆಕಟ್ಟು, ಸತ್ತೇಗಾಲ ಬಳಿಯಿರುವ ಆಣೆಕಟ್ಟು ಹಾಗೂ ಶಿವಾ ಅಣೆಕಟ್ಟುಗಳನ್ನು ಪರಿವೀಕ್ಷಣೆ ಮಾಡಲಾಗಿರುತ್ತದೆ. ಅದರಂತೆ, ಸತ್ತೇಗಾಲ ಅಣೆಕಟ್ಟು ಹಾಗೂ ಶಿವಾ ಅಣೆಕಟ್ಟುಗಳಲ್ಲಿ ನೀರಿನ ಮಟ್ಟವು ತಳಮಟ್ಟ ತಲುಪಿದ್ದು. ನೀರಿನ ತೀವ್ರ ಕೊರತೆ ಉಂಟಾಗಿರುತ್ತದೆ.

ದಿನಾಂಕ: 09.03.2024 ರಂದು ಕೆ.ಆರ್.ಎಸ್. ನಿಂದ 4780 ಕ್ಯೂಸೆಕ್ಸ್ ಹಾಗೂ ಕಬಿನಿ ಜಲಾಶಯದಿಂದ 2000 ಕ್ಯೂಸೆಕ್ಸ್ ನೀರನ್ನು ಹರಿಸಿದ್ದರ ಪರಿಣಾಮ ದಿನಾಂಕ: 10.03.2024 ರಂದು ಬೆಳಿಗ್ಗೆ ಶಿವಾ ಅಣೆಕಟ್ಟೆಯಲ್ಲಿ ನೀರಿನ ಮಟ್ಟವು ಅಣೆಕಟ್ಟೆಯ ಮೇಲ್ಬಾಗದಿಂದ 38 ಇಂಚು ಕೆಳಮಟ್ಟದಿಂದ 24 ಇಂಚಿಗೆ ತಲುಪಿದ್ದು (16 ಇಂಚು ಏರಿಕೆ) ನಿಧಾನವಾಗಿ ಏರಿಕೆಯಾಗಿರುತ್ತದೆ. ನಂತರ  10.03.20248 5 10.00 10 ಪ್ರಮಾಣವನ್ನು 4780 ಕ್ಯೂಸೆಕ್ಸ್ ನಿಂದ 2769 ಕ್ಯೂಸೆಕ್ಸ್ಗೆ ಇಳಿಕೆ ಮಾಡಲಾಗಿರುತ್ತದೆ. ಶಿವಾ ಅಣೆಕಟ್ಟೆಯ ನೀರಿನ ಮಟ್ಟವು ಮಧ್ಯಾಹ್ನ 12 ಗಂಟೆಗೆ 2 ಇಂಚು ಏರಿಕೆಯಾದ್ದರಿಂದ ಕೆ.ಆರ್.ಎಸ್.ನ ನೀರಿನ ಹರಿವಿನ ಪ್ರಮಾಣವನ್ನು 2769 ಕ್ಯೂಸೆಕ್ಸ್ ನಿಂದ 1008 ಕ್ಯೂಸೆಕ್ಸ್‌ಗೆ ಇಳಿಕೆ ಮಾಡಲಾಗಿದೆ. ಪ್ರಸ್ತುತ, ಬೆಂಗಳೂರು ನಗರಕ್ಕೆ ಕುಡಿಯುವ ನೀರಿನ ಪ್ರಮಾಣವನ್ನು ಸುಸ್ಥಿರಗೊಳಿಸಿರಲಾಗುತ್ತಿದೆ ಎಂದು ಅವರು ಸ್ಪಷ್ಟಪಡಿಸಿದ್ಧಾರೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ