Tuesday, October 29, 2024

ಪ್ರಾಯೋಗಿಕ ಆವೃತ್ತಿ

ಸಂಜೆಯೊಳಗೆ ತಮಿಳುನಾಡಿಗೆ ಬಿಡುತ್ತಿರುವ ನೀರು ಸ್ಥಗಿತ : ಶಾಸಕ ರಮೇಶ್ ಬಾಬು

ಇ‌ಂದು ಸಂಜೆಯೊಳಗೆ ತಮಿಳುನಾಡಿಗೆ ಬಿಡುತ್ತಿರುವ ನೀರು ಸ್ಥಗಿತಗೊಳಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ ಎಂದು ಶಾಸಕ ರಮೇಶ್ ಬಾಬು ಬಂಡಿಸಿದ್ದೇಗೌಡ ತಿಳಿಸಿದರು.

ಮಂಡ್ಯದಲ್ಲಿ ಸುದ್ದಿಗೋ‍ಷ್ಠಿಯಲ್ಲಿ ಮಾತನಾಡಿದ ಅವರು, ಮಳೆ ಕೊರತೆಯಿಂದ ನೀರಿನ ಸಮಸ್ಯೆ ಉಂಟಾಗಿದೆ‌. ಕಾವೇರಿ ನ್ಯಾಯಾಂಗದ ಅಂತಿಮ ತೀರ್ಪಿನ ಅನುಗುಣವಾಗಿ ಜೂನ್ ನಲ್ಲಿ 10 ಟಿಎಂಸಿ, ಜುಲೈನಲ್ಲಿ 34 ಟಿಎಂಸಿ, ಅಗಸ್ಟ್ ನಲ್ಲಿ 50 ಟಿಎಂಸಿ ನೀರು ಕೊಡಲು ಒತ್ತಡವಿದೆ ಎಂದು ತಿಳಿಸಿದರು.

ಸಂಕಷ್ಟದ ಪರಿಸ್ಥಿತಿಯಲ್ಲಿ ಇದ್ದೇವೆ, ನೀರು ಕೊಡುವ ಬಗ್ಗೆ ಹಿಂದಿನಿಂದಲೂ ತಿರ್ಮಾನವಾಗಿದೆ. ಯಡಿಯೂರಪ್ಪ, ಕುಮಾರಸ್ವಾಮಿ ದೇವೇಗೌಡ್ರು, ಸಿದ್ದರಾಮಯ್ಯ ಸಿಎಂ ಆಗಿದ್ದಾಗಿನಿಂದಲೂ ಈ ಪ್ರಕ್ರಿಯೆ  ನಡೆದುಕೊಂಡು ಬಂದಿದೆ. ತಮಿಳುನಾಡು ಸರ್ಕಾರ ಕೇಂದ್ರದ ಮುಂದೆ CWCA ಮುಂದೆ ಹೋಗಿದೆ. 10-12 ಟಿಎಂಸಿ ನೀರು ಕೊಡಲು ಸೂಚನೆಗೆ ಅನುಗುಣವಾಗಿ ಬಿಡಲಾಗುತ್ತಿದೆ ಎಂದು ತಿಳಿಸಿದರು.

ತಮಿಳುನಾಡು ಸರ್ಕಾರ ಸುಪ್ರೀಂಕೋರ್ಟ್ ನಲ್ಲಿ ಅರ್ಜಿ ಹಾಕಿದೆ, ಈಗ ವಿಚಾರಣೆ ಹಂತದಲ್ಲಿದೆ.
CWCA ತಿರ್ಮಾನವನ್ನ ಅನುಷ್ಠಾನಗೊಳಿಸಿಲ್ಲವಾದರೆ ಸುಪ್ರೀಂಕೋರ್ಟ್ ನಮ್ಮ ಮನವಿಯನ್ನ ಗಂಭೀರ ಗೊಳಿಸಲ್ಲ, ಆ ಕಾರಣದಿಂದ ನೀರು ಬಿಡಲಾಗಿದೆ ಎಂದರು.

ಬಿಜೆಪಿಯವರು ಹೋರಾಟ ಚುನಾವಣೆಗಾಗಿ ಮಾಡ್ತಿದ್ದಾರೆ. ಕಳೆದ ಮೂರು ತಿಂಗಳ ಹಿಂದೇ ನಿಮ್ಮದೆ ಸರ್ಕಾರ ಇತ್ತು, 27 ಜನ ಎಂಪಿಗಳು ಏನು ಮಾಡಿಲ್ಲ. ಜತೆಗೆ ಎಂಪಿಗಳು ಕೇಂದ್ರದ ಬಳಿ ಒತ್ತಡ ಮಾಡಿದ್ದಿರಿ.? ಕಳೆದ ಒಂದು ವಾರದಿಂದ ತಮಿಳುನಾಡಿಗೆ ನೀರು ಕೊಟ್ಟಿದ್ದೇವೆ. ಸುಪ್ರೀಂ ಕೋರ್ಟ್ ತೀರ್ಪು ಇದೆ. CWCA ಅವರ ಗೈಡ್ ಲೈನ್ ಪ್ರಕಾರ 10ರಿಂದ 12 TMC ನೀರು ಕೊಟ್ಟಿದ್ದೇವೆ. ಕಬಿನಿ, ಕಾವೇರಿಯಿಂದ ಬಿಡಲಾಗಿದೆ ಎಂದರು.

ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ್, ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ಹಾಲಹಳ್ಳಿ ಅಶೋಕ್, ಜಿಲ್ಲಾ ಯುವ ಅಧ್ಯಕ್ಷ ವಿಜಯಕುಮಾರ್, ಮುಖಂಡರಾದ ಸಾತನೂರು ಕೃಷ್ಣ, ಸಿ.ಎಂ.ದ್ಯಾವಪ್ಪ, ಸುರೇಶ್ ಕಂಠಿ, ನಯೀಂ ಇದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!