✍️ ಗುಲ್ಜರ್
ಚಿದಂಬರ ನರೇಂದ್ರ
ಗೆಳೆಯ,
ನಮ್ಮ ಕೈಲಾದಷ್ಟು ಕಾಲ
ನಾವೂ ನಾದಿದೆವಲ್ಲ ನಿಷ್ಠೆಯಿಂದ
ಕಾಲವನ್ನ.
ಒಮ್ಮೆ ಹಿಟ್ಟು ಹೆಚ್ಚಾಯಿತೆಂದು
ನೀರು,
ಒಮ್ಮೆ ನೀರು ಹೆಚ್ಚಾಯಿತೆಂದು
ಹಿಟ್ಟು,
ಬೆರೆಸುತ್ತಾ ಹೋದೆವು.
ಹೀಗೇ ಒಮ್ಮೊಮ್ಮೆ,
ಜಾಸ್ತಿ ಆಗಿಬಿಡುತ್ತದೆ ಹಿಟ್ಟಿನ ಮುದ್ದೆ ,
ಆದರೆ ಹಸಿವು,
ಮೀರುವುದೇ ಇಲ್ಲ ಒಂದು ಮಟ್ಟ.
ಹಸಿವು ಎಷ್ಟಿದ್ದರೇನು
ಹೊಟ್ಟೆ ತುಂಬಿದ ಮೇಲೆ
ಒಂದು ಕ್ಷಣವೂ
ಎಲೆ ಮುಂದೆ ಕೂಡಲು
ಅದೇನೋ ಅಸಹನೆ.
ಬಾ ಗೆಳೆಯ, ಎದ್ದು ಬಿಡೋಣ
ಯಾವ ನ್ಯಾಯ ತಾನೆ ಕಟ್ಟಿಹಾಕಬಲ್ಲದು
ಎಲೆಯ ಮುಂದೆ ನಮ್ಮನ್ನು
ಬಲವಂತವಾಗಿ?
ಈ ಕಾನೂನಿನ ಮೊಹರುಗಳಿಗೆ
ಯಾವತ್ತಿನಿಂದ ಸಂಬಂಧ
ಬೆಸೆಯುವ, ಕತ್ತರಿಸುವ, ತಾಕತ್ತು ಬಂತು?
ರೇಶನ್ ಕಾರ್ಡ್ ಏನೂ ಅಲ್ಲವಲ್ಲ
ಸಂಬಂಧ.




