Friday, November 20, 2026

ಪ್ರಾಯೋಗಿಕ ಆವೃತ್ತಿ

ನಾಗಮಂಗಲ| ತಿಮಿಂಗಲದ ವಾಂತಿ ಸಂಗ್ರಹ ; ಆರೋಪಿ ಬಂಧನ

ನಾಗಮಂಗಲ ಪಟ್ಟಣದ ಮೇಗಲಕೇರಿ ಬಡಗುಡಮ್ಮ ದೇವಸ್ಥಾನದ ಪಕ್ಕದ ಮನೆಯೊಂದರ ಮೇಲೆ ದಾಳಿ
ನಡೆಸಿದ ಅರಣ್ಯಾಧಿಕಾರಿಗಳ ತಂಡ 3 ಕೆ.ಜಿ ತಿಮಿಂಗಲ ವಾಂತಿಯನ್ನು ವಶಪಡಿಸಿಕೊಂಡು ಓರ್ವನನ್ನು ಬಂಧಿಸಿದ್ದಾರೆ.

ವಿನಯ್ ಕುಮಾರ್ (31 ವರ್ಷ) ಬಂಧಿತ ಆರೋಪಿ.

ಮೈಸೂರು ವಿಭಾಗದ ವಲಯ ಅರಣ್ಯ ಇಲಾಖೆಯ ವಿಶೇಷ ತನಿಖಾ ತಂಡ ದಾಳಿ ಮಾಡಿ ವಿನಯ್ ಕುಮಾರ್ ಮನೆಯಲ್ಲಿ ಸುಮಾರು 3 ಕೆಜಿ ತಿಮಿಂಗಲ ವಾಂತಿಯನ್ನು ಜಪ್ತಿ ಮಾಡಿಕೊಂಡು ವಿನಯ್ ಕುಮಾರ್ ಎಂಬಾತನನ್ನು ವಶಕ್ಕೆ ಪಡೆದಿದೆ.

ಅರಣ್ಯ ಇಲಾಖೆ ಪ್ರಕಾರ ತಿಮಿಂಗಲ ವಾಂತಿಯನ್ನು ಸಂಗ್ರಹ ಮಾಡುವುದು ಕಾನೂನು ಪ್ರಕಾರ ಅಪರಾಧವಾಗಿದೆ. ಬಲ್ಲ ಮೂಲಗಳಿಂದ ಆರೋಪಿಯ ಮಾಹಿತಿ ಸಂಗ್ರಹಿಸಿ ದಾಳಿ ಮಾಡಲಾಗಿದೆ.

ಹೆಚ್ಚಿನ ವಿಚಾರಣೆಗಾಗಿ ಮೈಸೂರಿಗೆ ಆರೋಪಿಯನ್ನು ಕರೆದುಕೊಂಡು ಹೋಗಿದ್ದು ನಾಗಮಂಗಲ ಪಟ್ಟಣದ ನ್ಯಾಯಾಲಯಕ್ಕೆ ಹಾಜರುಪಡಿಸಿ ಮುಂದಿನ ಕ್ರಮ ಜರುಗಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ