Saturday, November 21, 2026

ಪ್ರಾಯೋಗಿಕ ಆವೃತ್ತಿ

ಚುನಾವಣಾ ಪ್ರಚಾರಕ್ಕೆ ಓಡೋಡಿ ಬರುವ ಮೋದಿ, ಮಣಿಪುರಕ್ಕೆ ಯಾಕೆ ಹೋಗುವುದಿಲ್ಲ? ; ದಿನೇಶ್ ಗುಂಡೂರಾವ್

ರೋಮ್ ದೊರೆ ‘ನೀರೋ’ಗೂ, ನಮ್ಮ ದೇಶದ ಪ್ರಧಾನಿ ಮೋದಿಯವರಿಗೂ ವ್ಯತ್ಯಾಸವೇನಿಲ್ಲ.‌ ದೊರೆ ‘ನೀರೋ’, ರೋಮ್ ನಗರ ಬೆಂಕಿಯಿಂದ ಹೊತ್ತಿ ಉರಿಯುತ್ತಿರುವಾಗ ಪಿಟೀಲ್ ಬಾರಿಸುತ್ತಿದ್ದರೆ, ನಮ್ಮ ಪ್ರಧಾನಿ ನರೇಂದ್ರ ಮೋದಿಯವರು ಮಣಿಪುರ ಹೊತ್ತಿ ಉರಿಯುತ್ತಿರುವಾಗ, ಮಹಾರಾಷ್ಟ್ರ‌ ಮತ್ತು ಜಾರ್ಖಂಡ್‌ನಲ್ಲಿ ಚುನಾವಣಾ ಪ್ರಚಾರ ನಡೆಸುತ್ತಾರೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಕಿಡಿಕಾರಿದ್ದಾರೆ.

ಜನ ಸತ್ತರೆ ಸಾಯಲಿ ನನಗೇನು ಎಂಬುದೇ ಇಬ್ಬರಲ್ಲೂ ಇದ್ದ ಸಮಾನ ನಿರ್ಲ್ಯಕ್ಷಕ ಅಂಶ. ಮಣಿಪುರದಲ್ಲಿ ಒಂದೂವರೆ ವರ್ಷದಿಂದ ಗಲಭೆ ನಡೆಯುತ್ತಿದೆ‌. ಗಲಭೆಯಲ್ಲಿ ಮಹಿಳೆಯರು, ಮಕ್ಕಳು ಮತ್ತು ಅಸಹಾಯಕರು ಅವ್ಯಾಹತವಾಗಿ ಹತ್ಯೆಯಾಗುತ್ತಿದ್ದಾರೆ. ಹೀಗೆ ಹತ್ಯೆಗೊಳಗಾದವರ ಸಂಖ್ಯೆಯೇ 250ಕ್ಕೂ ಹೆಚ್ಚು. ಇಷ್ಟಾದರು 56 ಇಂಚಿನ ಧೈರ್ಯವಂತ ಎದೆಯ ಮೋದಿಯವರು ಮಣಿಪುರಕ್ಕೆ ಭೇಟಿ ನೀಡುವುದಿರಲಿ, ಸಂಘರ್ಷ ನಿಲ್ಲಿಸಿ ಎಂದು ಹೇಳುವ ಧೈರ್ಯವನ್ನು ತೋರಿಸುತ್ತಿಲ್ಲ ಎಂದು ಟ್ವೀಟ್ ನಲ್ಲಿ ಆಕ್ರೋಶ ಹೊರ ಹಾಕಿದ್ದಾರೆ.

“>

 

‘ಊಟಕ್ಕೆ ಬಾರೋ ತಿಮ್ಮ.., ಓಡಿ ಬಂದೆನಮ್ಮ’ ಎಂಬಂತೆ ಚುನಾವಣಾ ಪ್ರಚಾರಕ್ಕೆ ಮಾತ್ರ ಓಡೋಡಿ ಬರುವ ಮೋದಿಯವರು, ಮಣಿಪುರಕ್ಕೆ ಯಾಕೆ ಹೋಗುವುದಿಲ್ಲ.? ಮಣಿಪುರದ ಜನಾಂಗೀಯ ಸಂಘರ್ಷವನ್ನು ದೀರ್ಘಕಾಲದವರೆಗೆ ಮುಂದುವರೆಯಲು ಬಿಟ್ಟಿದ್ದೇ ಪ್ರಧಾನಿ‌ ಮೋದಿಯವರ ವೈಫಲ್ಯ. ಮೋದಿಯವರು ರಷ್ಯಾ-ಉಕ್ರೇನ್ ಯುದ್ಧ ನಿಲ್ಲಿಸಿದೆ ಎಂಬ ಕಾಲ್ಪನಿಕ ಸುಳ್ಳುಗಳನ್ನು ಸೃಷ್ಟಿಸಿ ಅವರ ಅಂಧ ಭಕ್ತರನ್ನು ಮೆಚ್ಚಿಸಬಹುದೇ ಹೊರತು ದೇಶವನ್ನಲ್ಲ. ಮೋದಿಯವರೆ, ಮಣಿಪುರದ ವಿಚಾರದಲ್ಲಿ ನೀವು ತೋರಿಸುತ್ತಿರುವ ಮೌನ ಮತ್ತು ಪುಕ್ಕಲುತನಕ್ಕೆ‌ ಮತ್ತೆಷ್ಟು ಅಮಾಯಕ ಜೀವಿಗಳು ಬಲಿಯಾಗಬೇಕು.? ಎಂದು ಮೋದಿಯವರನ್ನು ಪ್ರಶ್ನೆ ಮಾಡಿದ್ದಾರೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ