ಪ್ರಸ್ತುತ ದಿನಗಳಲ್ಲಿ ನೈತಿಕ ಮೌಲ್ಯಗಳು ಕುಸಿಯುತ್ತಿವೆ, ಭ್ರಷ್ಠಾಚಾರದಲ್ಲಿ ಮಹಿಳೆಯರು ಪುರುಷರು ಸಮಾನರಿದ್ದಾರೆ ಎಂದು ಕರ್ನಾಟಕ ಲೋಕಾಯುಕ್ತ ರಾಮನಗರ ಪೊಲೀಸ್ ವರಷ್ಠಾಧಿಕಾರಿ ಪಿ.ವಿ.ಸ್ನೇಹ ಹೇಳಿದರು.
ಮಂಡ್ಯ ನಗರದಲ್ಲಿರುವ ಮಹಿಳಾ ಸರ್ಕಾರಿ ಕಾಲೇಜು ಸಭಾಂಗಣದಲ್ಲಿ ಕಾಲೇಜು ಶಿಕ್ಷಣ ಇಲಾಖೆ, ಸರ್ಕಾರಿ ಮಹಿಳಾ ಕಾಲೇಜು (ಸ್ವಾಯತ್ತ), ಹಳೆಯ ವಿದ್ಯಾರ್ಥಿಗಳ ಸಂಘ ಆಯೋಜಿಸಿದ್ದ ಒಂದು ದಿನದ ಹಳೆಯ ವಿದ್ಯಾರ್ಥಿಗಳ ಸಭೆ – “ಮರು ಸಂಪರ್ಕಿಸಿ – ಪ್ರತಿಫಲಿಸಿ- ಮರುಜ್ಜೀವನಗೊಳಿಸಿ” ವಿಶೇಷ ಉಪನ್ಯಾಸ-“ಭ್ರಷ್ಟಾಚಾರ ತಡೆಗಟ್ಟುವಲ್ಲಿ ಮಹಿಳೆಯರ ಪಾತ್ರ”-“ಸ್ಪರ್ಧಾತ್ಮಕ ಜಗತ್ತಿನಲ್ಲಿ ಆತ್ಮವಿಶ್ವಾಸವನ್ನು ಬೆಳೆಸುವುದು” ವಿಷಯ ಕುರಿತ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಸಮಾಜದಲ್ಲಿ ನಾವು ಭ್ರಷ್ಠಾಚಾರ ತಡೆಯುವ ಕರ್ನಾಟಕ ಲೋಕಾಯಕ್ತ ಇಲಾಖೆಯಲ್ಲಿದ್ದೇವೆ, ಈಗ ನಾವು ಮಾಡುವಂತ ಕಾರ್ಯಚರಣೆಯಲ್ಲಿ ಗಂಡಸು-ಹೆAಗಸು ಎನ್ನುವ ಹಾಗಿಲ್ಲ, ಎಲ್ಲರೂ ಸಮಾನರಿದ್ದಾರೆ ಎಂದು ನುಡಿದರು.
ಲಂಚ ತೆಗೆದುಕೊಳ್ಳುವುದರಲ್ಲಿ ಹೆಂಗಸು ಹೆಚ್ಚು, ಗಂಡಸು ಹೆಚ್ಚು ಎನ್ನುವ ಹಾಗಿಲ್ಲ, ಎಲ್ಲರ ಮನಸ್ಥಿತಿಗಳು ಬೇರೆ ರೀತಿಯಾಗಿದೆ, ನೈತಿಕ ಮೌಲ್ಯ ಕುಸಿತಾಯಿದೆ, ನಮಗೆ ಕಲಸ ಜಾಸ್ತಿ ಬರುತ್ತಿದೆ ಎಂದು ಹೇಳಿದರು.
ವಿದ್ಯಾರ್ಥಿನಿಯರು ಭ್ರಷ್ಠಾಚಾರ ತಡೆಯುವ ಬಗ್ಗೆ ಏನು ಮಾಡಬಹುದು, ಹೇಗೆಲ್ಲಾ ಸಹಕರಿಸಬಹುದು ಎನ್ನುವುದ ಬಗ್ಗೆ ಅರಿವು ಹೆಚ್ಚಿಸಿಕೊಳ್ಳಬೇಕು, ಲಂಚ-ಭ್ರಷ್ಠಾಚಾರ ಎಂದರೆ ವೈಯಕ್ತಿಕವಾಗಿ ಒಬ್ಬ ಸರ್ಕಾರಿ ನೌಕರ ತನ್ನ ಸ್ವಂತಕ್ಕಾಗಿ ಅಥವಾ ತನ್ನ ಕುಟುಂಬಕ್ಕಾಗಿ ಹೆಚ್ಚಿನ ಲಾಭ ಪಡೆಯಲಿಕ್ಕೋಸ್ಕರ ಸಂಬಳ ಪಡೆಯುತ್ತಿದ್ದರೂ ಹಣಪಡೆದರೆ ಅದು ಭ್ರಷ್ಠಾಚಾರ-ಲಂಚವಾಗುತ್ತದೆ ಎಂದು ವಿವರಿಸಿದರು.
ನೀವು ಪದವಿ ಕಾಲೇಜುಗಳಲ್ಲಿ ಓದುತ್ತಿದ್ದೀರಿ ನಿಮಗೆ ಎಲ್ಲವೂ ತಿಳಿದಿರುತ್ತದೆ, ಕೆಲವು ಸರ್ಕಾರಿ ಪ್ರಮಾಣ ಪತ್ರ ಪಡೆಲು ನೀವು ವಿವಿಧ ಕಚೇರಿಗಳಿಗೆ ಭೇಟಿ ನೀಡಿದಾಗ ನಿಮ್ಮಿಂದ ನಿರೀಕ್ಷೆ ಮಾಡುತ್ತಾರೆ, ಜನರಲ್ಲಿ ತಾಳ್ಮೆಇಲ್ಲ, ಸಾಲಿನಲ್ಲಿ ನಿಂತು ಪಡೆಯಲಾಗದು, ಬೇಗ ಬೇಕಾಗಿರುತ್ತದೆ, ಇಂತಹ ಸನ್ನಿವೇಷಗಳನ್ನೇ ದುರಪಯೋಗ ಪಡಿಸಿಕೊಳ್ಳುತ್ತಾರೆ ಎಂದು ಎಚ್ಚರಿಸಿದರು.
ನಾವು ಕೂಡ ಇದೇ ಕಾಲೇಜಿನಲ್ಲಿ ಓದಿದ್ದು, ಗುಣಮಟ್ಟದ ಶಿಕ್ಷಣ ಲಭ್ಯವಾಗುತ್ತಿದೆ, ಸರ್ಕಾರಿ ಶಾಲಾ-ಕಲೇಜುಗಳ ಉಪನ್ಯಾಸಕರು ಅತ್ಯುತ್ತಮ ಭೊಧಕರಾಗಿರುತ್ತಾರೆ, ಅವರಿಂದ ವಿದ್ಯಾರ್ಥಿನಿಯರು ಶ್ರದ್ದೆಯಿಂದ ಕಲಿಯಬೇಕು, ಅವರ ಜ್ಞಾನವನ್ನು ಸದುಪಯೋಗ ಪಡಿಸಿಕೊಳ್ಳುವ ಕೌಶಲಜ್ಞಾನ ನಿಮ್ಮದಾಗಬೇಕು ಎಂದು ಸಲಹೆ ನೀಡಿದರು.
ಇದೇ ಸಂಧರ್ಭದಲ್ಲಿ ಲಿಡ್ಕರ್ ವ್ಯವಸ್ಥಾಪಕ ನಿರ್ದೇಶಕಿ ಡಾ.ಕೆ. ಎಂ. ವಸುಂಧರಾ ಅವರು, “ಸ್ಪರ್ಧಾತ್ಮಕ ಜಗತ್ತಿನಲ್ಲಿ ಆತ್ಮವಿಶ್ವಾಸವನ್ನು ಬೆಳೆಸುವುದು” ವಿಷಯ ಕುರಿತು ಉಪನ್ಯಾಸ ನೀಡಿ ಚರ್ಚಿಸಿದರು. ಬಳಿಕ ಗಣ್ಯರನ್ನು ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ. ಕೆ.ಗುರುರಾಜ್ ಪ್ರಭು, ಹಳೆ ವಿದ್ಯಾರ್ಥಿ ಸಂಘ ಅಧ್ಯಕ್ಷೆ ನಾಗರೇವಕ್ಕ, ಕಾರ್ಯದರ್ಶಿ ಡಾ.ಎಂ.ಬಿ.ಪ್ರಮೀಳಾ, ಖಜಾಂಚಿ ಡಾ.ಎ.ಎಸ್.ಭಾಗ್ಯ, ಸಂಯೋಜಕಿ ಡಾ. ಕೆ.ಎಂ.ಮಂಗಳಮ್ಮ, ಸಂಘಟನಾ ಸಮಿತಿ ಸಹಪ್ರಾಧ್ಯಾಪಕಿ ಡಾ. ಎಸ್.ಬಿ.ಜ್ಯೋತಿ, ಸಹಾಯಕ ಪ್ರಾಧ್ಯಾಪಕಿ ಎಲ್. ಪೂರ್ಣಿಮಾ, ಕೆ.ಪಿ.ರವಿಕಿರಣ್, ಎಸ್.ಪಿ.ಹೇಮಲತಾ ಮತ್ತಿತರರಿದ್ದರು.




