Thursday, November 19, 2026

ಪ್ರಾಯೋಗಿಕ ಆವೃತ್ತಿ

ಸೂಕ್ತ ಚಿಕಿತ್ಸೆಯಿಂದ ಕ್ಯಾನ್ಸರ್ ಗುಣಪಡಿಸಬಹುದು: ಮೀರಾಶಿವಲಿಂಗಯ್ಯ

ಕ್ಯಾನ್ಸರ್ ವಾಸಿಯಾಗುವ ಕಾಯಿಲೆಯಾಗಿದ್ದು ಸರಿಯಾದ ಸಮಯಕ್ಕೆ ಮುನ್ನೆಚ್ಚರಿಕೆ ವಹಿಸಿ ಚಿಕಿತ್ಸೆ ಪಡೆದರೆ  ಕ್ಯಾನ್ಸರನ್ನು ಗುಣಪಡಿಸಬಹುದು ಎಂದು ರೆಡ್ ಕ್ರಾಸ್ ಸಂಸ್ಥೆ ಸಭಾಧ್ಯಕ್ಷೆ ಮೀರಾಶಿವಲಿಂಗಯ್ಯ ತಿಳಿಸಿದರು.

ಮಂಡ್ಯ ನಗರದ ಮಿಮ್ಸ್ ಆವರಣದ ಹೆರಿಗೆ ವಿಭಾಗದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಮಂಡ್ಯ ಜಿಲ್ಲಾ ಶಾಖೆ ಹಾಗೂ ಪರಿಸರ ರೂರಲ್ ಡೆವಲಪ್ಮೆಂಟ್ ಸಂಸ್ಥೆ ಮಂಗಲ, ಮಮತೆಯ ಮಡಿಲು ಇವರ ವತಿಯಿಂದ ನಡೆದ ವಿಶ್ವ ಕ್ಯಾನ್ಸರ್ ದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕ್ಯಾನ್ಸರ್ ಗುಣಪಡಿಸಬಹುದಾದಂತಹ ಔಷಧಿಗಳು ಬಂದಿವೆ, ವೈದ್ಯರಲ್ಲಿ ನಂಬಿಕೆ ಇಡಬೇಕು ಸಂಪೂರ್ಣವಾಗಿ ಜೀವನದಲ್ಲಿ ನಂಬಿಕೆ ಅಳವಡಿಸಿಕೊಂಡರೆ ಕಾಯಿಲೆಯಿಂದ ಹೊರ ಬರಬಹುದು. ಮನುಷ್ಯ ಒತ್ತಡದ ಜೀವನ ನೆಡೆಸುತ್ತಿದ್ದಾನೆ.ಒತ್ತಡವನ್ನು ಕಡಿಮೆಮಾಡಲು ಯೋಗ, ಧ್ಯಾನ ಅಳವಡಿಸಿಕೊಂಡು ಆರೋಗ್ಯಕರ
ವಾಗಿರಬಹುದು ಆಗ ಸಮಾಜದ ಸ್ವಾಸ್ಥ್ಯ ಆರೋಗ್ಯವಾಗಿರುತ್ತದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮಿಮ್ಸ್ ಸ್ಥಾನೀಯ ವೈದ್ಯಾಧಿಕಾರಿ ಡಾ. ವೆಂಕಟೇಶ್, ಮಿಮ್ಸ್ ಪ್ರಾಧ್ಯಾಪಕ ಡಾ.ಚಂದ್ರೇಗೌಡ, ಮಮತೆಯ ಮಡಿಲು ಮಂಗಲ ಎಂ.ಯೋಗೀಶ್, ರೆಡ್ ಕ್ರಾಸ್ ಸಂಸ್ಥೆ ಜಂಟಿ ಕಾರ್ಯದರ್ಶಿ ರಂಗಸ್ವಾಮಿ ಇತರರು ಹಾಜರಿದ್ದರು.

ಇದೇ ಸಂದರ್ಭದಲ್ಲಿ ಸಂತೆಕಸಲಗೆರೆ ಬಸವರಾಜು ಮತ್ತು ತಂಡ ಗೀತಗಾಯನ ಕಾರ್ಯಕ್ರಮ ನೆಡೆಸಿಕೊಟ್ಟರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ