ಪೊಲೀಸ್ ಇಲಾಖೆಯನ್ನು ಹಸಿರೀಕರಣವನ್ನೂ ಮಾಡುವುದಿಲ್ಲ, ಕೇಸರೀಕರಣವೂ ಮಾಡುವುದಿಲ್ಲ. ಸಂವಿಧಾನಿಕರಣ ಮಾಡುತ್ತೇವೆ. ಇನ್ನು ಮುಂದೆ ಸಂಸ್ಕಾರವಿಲ್ಲದ ನಿಮ್ಮ ನಾಲಿಗೆಯನ್ನು ಹದ್ದುಬಸ್ತಿನಲ್ಲಿ ಇಟ್ಟುಕೊಳ್ಳಿ ಎಂದು ಬಿಜೆಪಿ ಶಾಸಕ ಬಸವರಾಜ ಯತ್ನಾಳ್ ಗೆ ಕಾಂಗ್ರೆಸ್ ತಿರುಗೇಟು ನೀಡಿದೆ.
ಯತ್ನಾಳ್ ಅವರೇ,
ಪೊಲೀಸ್ ಇಲಾಖೆಯನ್ನು ಹಸಿರೀಕರಣವನ್ನೂ ಮಾಡುವುದಿಲ್ಲ, ಕೇಸರೀಕರಣವೂ ಮಾಡುವುದಿಲ್ಲ.
ಸಂವಿಧಾನಿಕರಣ ಮಾಡುತ್ತೇವೆ.ಇನ್ನು ಮುಂದೆ ಸಂಸ್ಕಾರವಿಲ್ಲದ ನಿಮ್ಮ ನಾಲಿಗೆಯನ್ನು ಹದ್ದುಬಸ್ತಿನಲ್ಲಿ ಇಟ್ಟುಕೊಳ್ಳಿ. ಇದು ನಿಮ್ಮ ಹಿತಕ್ಕಾಗಿ ನಮ್ಮ ಸಲಹೆ!
ಹಾಗೆಯೇ ನಿಮ್ಮ ಪಕ್ಷದಲ್ಲಿ ಸೋಲಿನ ಹೊಣೆ ಹೊರುವವರು ಯಾರು ಮೊದಲು ಹೇಳಿ! pic.twitter.com/lcOecJxPjZ
— Karnataka Congress (@INCKarnataka) May 25, 2023
“>
ಪೊಲೀಸ್ ಇಲಾಖೆಯನ್ನು ಕೇಸರೀಕರಣ ಮಾಡಲು ಬಿಡುವುದಿಲ್ಲ ಎಂದು ಇತ್ತೀಚೆಗೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದರು, ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಯತ್ನಾಳ್, ಪೊಲೀಸ್ ಇಲಾಖೆಯನ್ನು ಹಸಿರೀಕರಣ ಮಾಡುತ್ತಾರೆಯೇ ? ಎಂದು ಪ್ರಶ್ನಿಸಿದ್ದರು. ಇದಕ್ಕೆ ಟ್ವೀಟ್ ನಲ್ಲಿ ಕಿಡಿಕಾರಿರುವ ಕಾಂಗ್ರೆಸ್ ಪಕ್ಷವು, ಇನ್ನು ಮುಂದೆ ಸಂಸ್ಕಾರವಿಲ್ಲದ ನಿಮ್ಮ ನಾಲಿಗೆಯನ್ನು ಹದ್ದುಬಸ್ತಿನಲ್ಲಿ ಇಟ್ಟುಕೊಳ್ಳಿ. ಇದು ನಿಮ್ಮ ಹಿತಕ್ಕಾಗಿ ನಮ್ಮ ಸಲಹೆ! ಹಾಗೆಯೇ ನಿಮ್ಮ ಪಕ್ಷದಲ್ಲಿ ಸೋಲಿನ ಹೊಣೆ ಹೊರುವವರು ಯಾರು ಮೊದಲು ಹೇಳಿ ಎಂದು ಕೆಣಕಿದೆ.
ಜೆಡಿಎಸ್ ವಿಜರ್ಸನೆ ಯಾವಾಗ ?
ಇನ್ನೂ ಕಾಂಗ್ರೆಸ್ ಬಣ್ಣ ಬಯಲಾಗಿದೆ ಎಂದು ಹೇಳಿಕೆ ನೀಡಿದ್ದ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಟ್ವೀಟ್ ನಲ್ಲೇ ತಿರುಗೇಡು ನೀಡಿರುವ ಕಾಂಗ್ರೆಸ್, ‘ನಾವು ಅರ್ಹ ಫಲಾನುಭವಿಗಳಿಗೆ ನಮ್ಮ ಗ್ಯಾರಂಟಿಗಳನ್ನು ಜಾರಿಗೊಳಿಸುವುದು ನಿಶ್ಚಿತ. ಕುಮಾರಸ್ವಾಮಿಯವರೇ, ಆ ಚಿಂತೆ ಬಿಡಿ. ಜೆಡಿಎಸ್ ಪಕ್ಷದ ವಿಸರ್ಜನಾ ಕಾರ್ಯಕ್ರಮದ ಮುಹೂರ್ತ ಯಾವಾಗ ಹೇಳಿ!? ಎಂದು ಕುಟುಕಿದೆ.




