ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಜನ್ಮದಿನದ ಪ್ರಯುಕ್ತ ಮಂಡ್ಯ ಜಿಲ್ಲಾಸ್ಪತ್ರೆಯ ಗರ್ಭಿಣಿ- ಬಾಣಂತಿ ಮತ್ತು ನಿರ್ಗತಿಕರಿಗೆ ಪೌಷ್ಟಿಕ ಆಹಾರ ಹಾಗೂ ಹಣ್ಣು ಹಂಪಲು ವಿತರಣೆ ಮಾಡಲಾಯಿತು.
ಮಂಡ್ಯ ನಗರದ ಜಿಲ್ಲಾ ಆಸ್ಪತ್ರೆಯ ಹೆರಿಗೆ ವಾರ್ಡ್ ಬಳಿಯ ಮಮತೆಯ ಮಡಿಲು ನಿತ್ಯದಾಸೋಹ ಕೇಂದ್ರದ ಬಳಿ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಪದಾಧಿಕಾರಿಗಳು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ವಿಜಯಕುಮಾರ್ ಮಾತನಾಡಿ, ಪ್ರಸ್ತುತ ರಾಜ್ಯ ಸರ್ಕಾರದ ವಸತಿ ಸಚಿವರಾಗಿರುವ ಜಮೀರ್‌ಖಾನ್ ಅವರು ನೊಂದರವ ಪರ ಧ್ವನಿಯಾಗಿದ್ದಾರೆ, ಉತ್ತಮ ಆಡಳಿತ ನೀಡಲು ದೇವರ ಅವರಿಗೆ ಆಯುಸ್ಸು, ಆರೋಗ್ಯ ನೀಡಲಿ ಎಂಬುದು ನಮ್ಮಲ್ಲರ ಪ್ರಾರ್ಥನೆಯಾಗಿದೆ ಎಂದರು.

ಅವರ ಜನ್ಮದಿನವನ್ನು ಸರಳವಾಗಿ ಸಮಾಜಮುಖಿಯಾಗಿ ಆಚರಿಸಲು ಮುಂದಾಗಿ, ಗರ್ಭಿಣಿ-ಬಾಣಂತಿಯರಿಗೆ, ರೋಗಿಗಳಿಗೆ ಸೇವಾ ಕಾರ್ಯ ಮಾಡುವ ಮೂಲಕ ನೆರವಾಗುತ್ತಿದ್ದೇವೆ, ಅವರ ರಾಜಕರಣ ಜೀವನ ಉತ್ತುಂಗಕ್ಕೇರಲಿ ಎಂದರು.
ಕಾರ್ಯಕ್ರಮದಲ್ಲಿ ಯುವ ಕಾಂಗ್ರೆಸ್ ಉಪಾಧ್ಯಕ್ಷ ಹಾಗೂ ನಗರಸಭಾ ಸದಸ್ಯ ನಹೀಂ, ನಗರಸಭಾ ಸದಸ್ಯ ಶ್ರೀಧರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರುದ್ರಪ್ಪ, ಮಹಿಳಾ ಉಪಾಧ್ಯಕ್ಷ ಹೀನ ಕೌಸರ್, ಕಾಂಗ್ರೆಸ್ ಮಾಜಿ ಪ್ರಧಾನ ಕಾರ್ಯದರ್ಶಿ ಜಬಿ ಉಲ್ಲಾಖಾನ್, ಸುಮನ್, ಅಮಿತ್ ಪಾಷಾ, ಮಹಮ್ಮದ್ ಫೀರ್, ಮಹಮ್ಮದ್ ಉಜೈಫ್, ಸಲೀಂ ಮತ್ತಿತರರಿದ್ದರು.




