Sunday, November 22, 2026

ಪ್ರಾಯೋಗಿಕ ಆವೃತ್ತಿ

ಎಲ್ಲರೊಳಗೊಂದಗೂ ವಿನಯ್ ಕುಮಾರ್ ಜನ್ಮದಿನ : 100 ಅಡಿ ಉದ್ದದ ಕನ್ನಡ ಧ್ವಜ ಮೆರವಣಿಗೆ

ಎಲ್ಲರೊಳಗೊಂದಗೂ ವಿನಯ್ ಕುಮಾರ್ ಎಂ ಅವರ ಜನ್ಮದಿನದ ಅಂಗವಾಗಿ ಇಂದು ಬೂದನೂರು ಹಬ್ಬದ ಉತ್ಸವ ಮೆರೆವಣಿಗೆಯಲ್ಲಿ ಕನ್ನಡ ಧ್ವಜಗಳು ಹಾಗೂ 100 ಅಡಿ ಕನ್ನಡದ ಧ್ವಜ ಮೆರವಣಿಗೆ ನಡಸಲಾಯಿತು. ಇದೇ ಸಂದರ್ಭದಲ್ಲಿ ಪುಟಾಣಿಗಳ ಜೊತೆ ಕೇಕ್ ಕತ್ತರಿಸಿ ತಿನಿಸುವ ಮೂಲಕ ಜನ್ಮದಿನಾಚರಣೆಯನ್ನು ಆಚರಿಸಲಾಯಿತು.

ಈ ಕಾರ್ಯಕ್ರಮದಲ್ಲಿ ರೈತ ಸಂಘದ ಮಂಡ್ಯ ತಾಲೂಕು ಅಧ್ಯಕ್ಷರಾದ ಬೂದನೂರು ಪುಟ್ಟಸ್ವಾಮಿ, ಸತೀಶ್ ಕರುನಾಡ ಸೇವಕರ ಸಂಘಟನೆಯ ರಾಜ್ಯ ವಕ್ತಾರ ಎಂ ಬಿ ನಾಗಣ್ಣಗೌಡ, ಚಿತ್ರಕೂಟ ಸಾಂಸ್ಕೃತಿಕ ಸಂಘಟನೆಯ ಮುಖ್ಯಸ್ಥ ಧನುಷ್ ಗೌಡ, ಕರ್ನಾಟಕ ರಾಜ್ಯಶೋಷಿತ ಸಮುದಾಯಗಳ ಒಕ್ಕೂಟದ ರಾಜೇಂದ್ರ  ಭಾಗವಹಿಸಿದ್ದರು. ರೈತಪರ ಕನ್ನಡ ಪರ ಚಳುವಳಿಗಳು ಸಂಘಟನೆಗಳು ಪಾಲ್ಗೊಂಡಿದ್ದವು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ