Tuesday, November 24, 2026

ಪ್ರಾಯೋಗಿಕ ಆವೃತ್ತಿ

ಮಕ್ಕಳು ಮನುಷ್ಯರಾಗಿ ಘನತೆಯಿಂದ ವರ್ತಿಸುವುದೇ ನೈಜ್ಯ ಶಿಕ್ಷಣ : ಡಾ.ಮೀರಾಶಿವಲಿಂಗಯ್ಯ,

ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರು ಹೇಳುವಂತೆ ಮಕ್ಕಳು ಮನುಷ್ಯರಾಗಿ ಇನ್ನೊಬ್ಬರೊಂದಿಗೆ ಗೌರವ, ಘನತೆಯಿಂದ ವರ್ತಿಸುವುದೇ ನಿಜವಾದ ಶಿಕ್ಷಣವೆಂದು ಎಸ್‌ಬಿ ಎಜುಕೇಶನ್ ಟ್ರಸ್ಟ್ ಕಾರ್ಯದರ್ಶಿ ಡಾ ಮೀರಾ ಶಿವಲಿಂಗಯ್ಯ, ತಿಳಿಸಿದರು.

ಮಂಡ್ಯ ನಗರದ ಐಡಿಯಲ್ ಮಾಂಟೇಸರಿ ಹಾಗೂ ಐಡಿಯಲ್ ಮಾಂಟೇಸರಿ ಹಾಗೂ ನರ್ಸರಿ ಶಿಕ್ಷಕಿಯರ ತರಬೇತಿ ಸಂಸ್ಥೆಯ ವತಿಯಿಂದ ನಡೆದ ಐಡಿಯಲ್ ವಾರ್ಷಿಕೋತ್ಸವದ ಹಬ್ಬ ಹಾಗೂ ಪದವಿ ಪ್ರಧಾನ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಮಕ್ಕಳು ಮನೆಯಲ್ಲಿದ್ಧಾಗ ತುಂಟಾಟವಾಡುತ್ತಾರೆ. ಆದರೆ ಶಾಲೆಗೆ ಬಂದ ನಂತರ ಶಿಸ್ತು ಕಲಿಯುತ್ತಾರೆ. ವಿದ್ಯೆಯನ್ನು ಕಲಿತು ಎಲ್ಲ ಬಂಧನದಿಂದ ಮುಕ್ತಿ ಹೊಂದುವುದು ಶಿಕ್ಷಣ. ಮಗುವನ್ನು ವಿದ್ಯಾವಂತನಾಗಿ ಮಾಡುವುದು ಸಂಸ್ಕೃತಿಯಾಗಿದೆ ಎಂದರು.

ಈ ಸಂದರ್ಭದಲ್ಲಿ ಐಡಿಯಲ್ ಮಾಂಟೇಸರಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಎಂ ಎಸ್ ಶಿವಪ್ರಕಾಶ್, ಪ್ರಾಂಶುಪಾಲರಾದ ಶಶಿಕಲಾ ಶಿವಪ್ರಕಾಶ್ ರವರು ಸೇರಿದಂತೆ ಟ್ರಸ್ಟಿಗಳು ಹಾಜರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ