Sunday, November 22, 2026

ಪ್ರಾಯೋಗಿಕ ಆವೃತ್ತಿ

ಅರ್ಧದಿನದಲ್ಲಿ 2 ಅಡಿ ಹೆಚ್ಚಳ; 110 ಅಡಿಗೆ ಕಾಲಿಟ್ಟ ಕೃಷ್ಣರಾಜ ಸಾಗರ ಜಲಾಶಯ

ಹನಿಯಂಬಾಡಿ ಜಗದೀಶ್

ಕಾವೇರಿ ನದಿ ಪಾತ್ರವಾದ ವಯನಾಡ್ ಹಾಗೂ ಕೊಡಗು ಜಿಲ್ಲೆಯಲ್ಲಿ ವ್ಯಾಪಕವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಸಣ್ಣ ಪುಟ್ಟ ತೊರೆ, ಕಣಿವೆ, ಉಪನದಿಗಳಲ್ಲಿ ಭಾರೀ ಪ್ರಮಾಣದಲ್ಲಿ ನೀರು ಹರಿದು ಬರುತ್ತಿರುವುದರಿಂದ ಕೇವಲ 12 ಗಂಟೆಯ ಅವಧಿಯಲ್ಲಿ 2 ಅಡಿಯಷ್ಟು ನೀರಿನ ಮಟ್ಟ ಗಣನೀಯ ಹೆಚ್ಚಳ ಕಂಡಿದೆ, ಜಲಾಶಯದ ಈಗಿನ ನೀರಿನಮಟ್ಟ 109.10 ಅಡಿಗೆ ತಲುಪಿದೆ.

ಇಂದು ಮಂಗಳವಾರ ಜು.16 ರ ಬೆಳಿಗ್ಗೆ 8 ಗಂಟೆಗೆ ಜಲಾಶಯದ ನೀರಿನ ಮಟ್ಟ 107.60 ಅಡಿಗೆ ಏರಿಕೆಯಾಗಿ, ಒಳಹರಿವು 25,933 ಕ್ಯೂಸೆಕ್ ದಾಖಲಾಗಿತ್ತು. ಆದರೆ ರಾತ್ರಿ 8 ಗಂಟೆಯ ವೇಳೆಗೆ ಒಳಹರಿವಿನ ಪ್ರಮಾಣ 35,997 ಕ್ಯೂಸೆಕ್‌ ತಲುಪಿದ್ದು, ದಾಖಲೆ ಪ್ರಮಾಣದಲ್ಲಿ ಏರಿಕೆ ಕಂಡಿದೆ.

“>

ಜಲಾಶಯದ ಗರಿಷ್ಠ ನೀರಿನಮಟ್ಟ 124.80 ಅಡಿಯಾಗಿದ್ದು, ಜಲಾಶಯ ಭರ್ತಿಗೆ 14 ಅಡಿಯಷ್ಟೇ ಬಾಕಿಯಿದೆ. ಜಲಾಶಯದಿಂದ ಕಾವೇರಿ ನದಿ ಹಾಗೂ ಅಚ್ಚುಕಟ್ಟು ನಾಲೆಗಳಿಗೆ 2357 ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ‌.

“>

ಜಲಾಶಯದ ಗರಿಷ್ಠ ನೀರಿನ ಸಂಗ್ರಹ ಸಾಮರ್ಥ್ಯ 49.452 ಟಿಎಂಸಿ ಇದ್ದು, ಸದ್ಯ ಜಲಾಶಯದಲ್ಲಿ 30.825 ಟಿಎಂಸಿ ನೀರಿನ ಸಂಗ್ರಹವಿದೆ.

ಹಾರಂಗಿ ಜಲಾಶಯವು ಭರ್ತಿಯಾಗಿದ್ದು, ಹೆಚ್ಚುವರಿ ನೀರನ್ನು ನದಿಗೆ ಹರಿಸುತ್ತಿರುವುದರಿಂದ ಕೆ ಆರ್ ಎಸ್ ಆಣೆಕಟ್ಟೆಯ ಒಳಹರಿವು ಭಾರೀ ಪ್ರಮಾಣದಲ್ಲಿ ಹೆಚ್ಚಳ ಕಂಡಿದೆ. ಕೊಡಗಿನಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ಸುರಿಯುತ್ತಿರುವುದರಿಂದ ಇಂದು ಶಾಲಾ ಕಾಲೇಜುಗಳಿಗೆ ಅಲ್ಲಿನ ಜಿಲ್ಲಾಡಳಿತ ರಜೆ ಘೋಷಣೆ ಮಾಡಿತ್ತು.

“>

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ