Thursday, June 13, 2024

ಪ್ರಾಯೋಗಿಕ ಆವೃತ್ತಿ

ಕರ್ತವ್ಯದ ನಡುವೆ ಮತದಾನ ಮಾಡಿದ ಕೆಎಸ್ಆರ್’ಟಿಸಿ ಬಸ್ ಚಾಲಕ !

ಕರ್ತವ್ಯದ ನಡುವೆಯೇ ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ತಪ್ಪದೇ ಮತದಾನ ಮಾಡುವ ಮೂಲಕ ಕೆಎಸ್ಆರ್’ಟಿಸಿ ಚಾಲಕ ಗಮನ ಸೆಳೆದಿದ್ದಾರೆ.

ಮಳವಳ್ಳಿ ತಾಲೂಕಿನ ವಕ್ಕರಹಳ್ಳಿ ಗ್ರಾಮದ ಲಿಂಗರಾಜು ಮತ ಹಾಕಿದ ಚಾಲಕ. ಇವರು ಬೆಂಗಳೂರು ಚಂದ್ರ ಲೇಔಟ್ ಡಿಪೋದಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದಾರೆ. ಅಂತೆಯೇ ಬೆಂಗಳೂರು-ಕೊಳ್ಳೆಗಾಲದ ಮಾರ್ಗದಲ್ಲಿ ಬಸ್‌ ಓಡಿಸುವ ಮಧ್ಯೆ ವಾಸುವಳ್ಳಿ ಮತಗಟ್ಟೆ ಸಂಖ್ಯೆ 265ರಲ್ಲಿ ಮತದಾನ ಮತದಾನ ಮಾಡುವ ಮೂಲಕ ತಮ್ಮ ಹಕ್ಕು ಚಲಾಯಿಸಿದರು.

ಮತಪಟ್ಟಿಯಲ್ಲಿ ಎಡವಟ್ಟು; ಪ್ರತಿಭಟನೆ

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ತಾಲೂಕಿನ ದಾಸನದೊಡ್ಡಿ ಗ್ರಾಮದಲ್ಲಿ ಮತದಾರ ಪಟ್ಟಿಯಿಂದ ದೊಡ್ಡ ಎಡವಟ್ಟು ನಡೆದಿದೆ ಎಂದು ದೂರಿ ಮತದಾರರು ಪ್ರತಿಭಟನೆ ನಡೆಸಿದರು. 45ಕ್ಕೂ ಹೆಚ್ಚು ಮತದಾರರ ಹೆಸರನ್ನು ಈ ಬಾರಿ ಲಿಸ್ಟ್‌ನಿಂದ ಕೈ ಬಿಟ್ಟಿರುವುದು ಆಕ್ರೋಶಕ್ಕೆ ಕಾರಣವಾಗಿತ್ತು.

ಮತದಾನ ಮಾಡಲೆಂದು ಮತಗಟ್ಟೆಗೆ ಆಗಮಿಸಿದಾಗ ಈ ಅವಾಂತರ ಬೆಳಕಿಗೆ ಬಂದಿದ್ದರಿಂದ ದಾಸನದೊಡ್ಡಿ ಗ್ರಾಮಸ್ಥರು ಹೆದ್ದಾರಿ ಸಂಚಾರ ತಡೆದು ಪ್ರತಿಭಟನೆ ನಡೆಸಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!