Friday, September 20, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ| 20ಕೋಟಿ ರೂ. ವೆಚ್ಚದ ಕಾಮಗಾರಿಗಳಿಗೆ ಶಾಸಕ ರವಿಕುಮಾರ್ ಚಾಲನೆ

ಮಂಡ್ಯ ತಾಲೂಕಿನ ಹಲ್ಲೇಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 20 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗೆ ಶಾಸಕ ಪಿ ರವಿಕುಮಾರ್ ಗೌಡ ಚಾಲನೆ ನೀಡಿದರು.

ಪಿ.ರವಿಕುಮಾರ್‌ಗೌಡ ಮಾತನಾಡಿ ಹಲ್ಲೇಗೆರೆ ಸುಪುತ್ರ ಡಾ‌.ಮೂರ್ತಿ ತಮ್ಮ ಹುಟ್ಟಿದ ಊರಿನಲ್ಲಿ ನೂರು ಕೋಟಿ ವೆಚ್ಚದಲ್ಲಿ ಆಧ್ಯಾತ್ಮಿಕ ಕೇಂದ್ರ ತೆರೆಯುತ್ತಿರುವುದು ಈ ಭಾಗದ ಜನರ ಸಹಕಾರದಿಂದ ಗ್ರಾಮ ಅಭಿವೃದ್ಧಿ ಪಥದಲ್ಲಿ ಸಾಗಲಿದೆ ಇದಕ್ಕೆ ಎಲ್ಲರೂ ಸಹಕಾರ ನೀಡಿ ಎಂದು ಸಲಹೆ ನೀಡಿದರು.

ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಮಾತನಾಡಿ, ಡಾ.ಮೂರ್ತಿರವರು ಹಲ್ಲೇಗೆರೆ ಗ್ರಾಮದಲ್ಲಿ ಅಂತರಾಷ್ಟ್ರೀಯ ಭೂದೇವಿ ಟ್ರಸ್ಟ್ ವತಿಯಿಂದ ಆಧ್ಯಾತ್ಮಿಕ ಕೇಂದ್ರ ನಿರ್ಮಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಸಹಯೋಗದಿಂದ ಈ ರಸ್ತೆ ಅಭಿವೃದ್ಧಿಗೆ 20 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಿದ್ದು ಮುಂದಿನ ದಿನಗಳಲ್ಲಿ ಇನ್ನೂ 25 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಲಿದ್ದಾರೆ ರಸ್ತೆ ಅಗಲೀಕರಣಕ್ಕೆ ರೈತರು ಸಹಕಾರ ಅತ್ಯಗತ್ಯವಾಗಿದ್ದು ಇದರಿಂದ ಅಂತರಾಷ್ಟ್ರೀಯ ಧ್ಯಾನ ಕೇಂದ್ರ ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸಿ ಎಂದು ಮನವಿ ಮಾಡಿದರು.

ಆಧ್ಯಾತ್ಮಿಕ ಕೇಂದ್ರ ಟ್ರಸ್ಟ್‌ನ ಡಾ.ಮೂರ್ತಿ ಮಾತನಾಡಿ ಆಧ್ಯಾತ್ಮಿಕ ಕೇಂದ್ರ ಮಾಡಲು ನಮ್ಮ ಟ್ರಸ್ಟ್ ಮುಂದಾಗಿದ್ದು ಪ್ರಪಂಚದಲ್ಲಿ ಯಾವುದು ಇಂತಹ ಕೇಂದ್ರ ಇರುವುದಿಲ್ಲ ಮೊದಲ ಬಾರಿಗೆ ಹಲ್ಲೇಗೆರೆಯಲ್ಲಿ ಆಧ್ಯಾತ್ಮಿಕ ಕೇಂದ್ರ ನಿರ್ಮಾಣ ಮಾಡುತ್ತಿದ್ದು ಇದನ್ನು ನೋಡಲು ಪ್ರಪಂಚದ ಎಲ್ಲಾ ಕಡೆಯಿಂದ ಪ್ರವಾಸಿಗರು ಬರುತ್ತಾರೆ ಇಲ್ಲಿನ ನಿಸರ್ಗ ಎಲ್ಲರನ್ನು ಕೈಬೀಸಿ ಕರೆಯುವ ಹಾಗೆ ಮೂಡಲಿದೆ ಎಂದರು.

ಕಾರ್ಯಕ್ರಮದಲ್ಲಿ ತಾ.ಪಂ.ಮಾಜಿ ಅಧ್ಯಕ್ಷ ತ್ಯಾಗರಾಜ್,ಮುಖಂಡರಾದ ಕಂಬದಳ್ಳಿ ಪುಟ್ಟಸ್ವಾಮಿ, ಚಿಕ್ಕಬಳ್ಳಿ ಕೃಷ್ಣ ,ದ್ಯಾಪಸಂದ್ರ ಉಮೇಶ್ ಮತ್ತಿತರರಿದ್ದರು.

ತ್ರಿಚಕ್ರ ವಾಹನಗಳ ವಿತರಣೆ

ಮಂಡ್ಯ ವಿಧಾನಸಭಾ ಕ್ಷೇತ್ರದ ಅಂಗವಿಕಲರಿಗೆ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನದಲ್ಲಿ ಇಂಧನ ಚಾಲಿತ ಸ್ಕೂಟರ್ ಗಳನ್ನು ಶಾಸಕ ರವಿಕುಮಾರ್ ಗೌಡ ಅವರು ಮಂಡ್ಯನಗರದ ಕಾವೇರಿ ಭವನದಲ್ಲಿ ಬಳಿ ವಿತರಿಸಿದರು.

ಅರ್ಹ ಫಲಾನುಭವಿಗಳನ್ನು ಗುರುತಿಸಿ, ಅವರ ಜೀವನನೋಪಾಯಕ್ಕಾಗಿ ತ್ರಿಚಕ್ರವಾಹನ ವಿತರಣೆ ಮಾಡಿದರು. ಈ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯ ಗೂಳಿಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!