ಯು.ಎ.ಇ (ಸಂಯುಕ್ತ ಅರಬ್ ರಾಷ್ಟ್ರಗಳು)ನ ಕನ್ನಡಿಗರ ಸಂಘಟನೆಯಾದ ಕನ್ನಡ ಪಾಠಶಾಲೆಯ ದಶಮಾನೋತ್ಸವ ಮತ್ತು ‘ಕನ್ನಡ ಮಿತ್ರ’ ಪ್ರಶಸ್ತಿ ಪ್ರದಾನ ಸಮಾರಂಭವು ದುಬೈನ ಬೈರುತ್ ರಸ್ತೆಯ ಮುಹೈಸ್ನಾಪ್ 4, ಅಲ್ ಕ್ವಿಸೈಸ್ ನ ಇಂಡಿಯನ್ ಅಕಾಡೆಮಿಯಲ್ಲಿ ಮೇ 12 ರಂದು ಬೆಳಿಗ್ಗೆ 10.30 ಗಂಟೆಗೆ ನಡೆಯಲಿದೆ.
ಈ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಕರ್ನಾಟಕ ಸರ್ಕಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಪತ್ರಕರ್ತ ರವಿ ಹೆಗಡೆ ಹಾಗೂ ಕೆಎಸ್ಆರ್’ಐ ಪೋರಂ ಉಪಾಧ್ಯಕ್ಷೆ ಡಾ.ಅರತಿಕೃಷ್ಣ ಸೇರಿದಂತೆ ಹಲವು ಗಣ್ಯರು ಭಾಗವಹಿಸುವರು.
ಇದೇ ಸಂದರ್ಭದಲ್ಲಿ ಅಬ್ದುಲ್ ಲತೀಪ್ ಎಸ್.ಎಂ. ಜಹರ್ಗೀದಾರ್ ಅವರಿಗೆ ಕನ್ನಡ ಮಿತ್ರ’ ಪ್ರಶಸ್ತಿ ಪ್ರದಾನ ಮಾಡಲಾಗುವುದು, ಹಲವು ಸಾಧಕರಿಗೆ ದಶಕದ ಶಿಕ್ಷಕಿ ಹಾಗೂ ಕನ್ನಡ ಕೌಸ್ತುಭ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುವುದು, ಆದ್ದರಿಂದ ಈ ಸಮಾರಂಭಕ್ಕೆ ದುಬೈ ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಲಾಗಿದೆ.